ಪತ್ರಕರ್ತ vs ವಕೀಲ : ದೃಶ್ಯ ಪ್ರಸಾರಕ್ಕೆ ತಡೆ
ಬೆಂಗಳೂರು,
ಮಾ. 6 : ಮಾಧ್ಯಮ ಮತ್ತು ವಕೀಲರ ನಡುವಿನ ಸಂಘರ್ಷ ತಾರಕಕ್ಕೇರುತ್ತಿರುವ ಹಿನ್ನೆಲೆಯಲ್ಲಿ ಮಾ.2ರಂದು ಸಿಟಿ ಸಿವಿಲ್ ಮತ್ತು ಸೆಷನ್ಸ್ ಕೋರ್ಟ್‌ನಲ್ಲಿ ನಡೆದ ದಂಗೆಯ ದೃಶ್ಯಾವಳಿ ಮತ್ತು ಫೋಟೋಗಳನ್ನು ಯಾವುದೇ ಮಾಧ್ಯಮದಲ್ಲಿ ಪ್ರಸಾರ ಅಥವಾ ಪ್ರಕಟ ಮಾಡಬಾರದೆಂದು ಸಿಟಿ ಸಿವಿಲ್ ನ್ಯಾಯಾಲಯ ಮಂಗಳವಾರ ಮಧ್ಯಂತರ ಆಜ್ಞೆ ಹೊರಡಿಸಿದೆ. id="toptextpromo">ದಿನಪತ್ರಿಕೆ
ಮತ್ತು ಎಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ವಕೀಲರು ಮಾಧ್ಯಮದವರನ್ನು ಥಳಿಸುತ್ತಿರುವ ವಿಡಿಯೋ ಕ್ಲಿಪ್ಪಿಂಗ್‌ಗಳನ್ನು ಮತ್ತು ಛಾಯಾಚಿತ್ರಗಳನ್ನು ಪ್ರಕಟಿಸಬಾರದೆಂದು ಹೇಳಿದೆ. ಆದರೆ, ಇಂಥ ಫೋಟೋಗಳು ಯುಟ್ಯೂಬ್‌ಗಳಲ್ಲಿ ಮತ್ತು ಸಾಮಾಜಿಕ ತಾಣಗಳಲ್ಲಿ ಸಾಕಷ್ಟು ಹರಿದಾಡುತ್ತಿವೆ. ಇದರ ಬಗ್ಗೆ ನ್ಯಾಯಾಲಯ ಯಾವುದೇ ಪ್ರಸ್ತಾಪ ಮಾಡಿಲ್ಲ. id='are-slot-1' class='oiad oi-axt oiadv'> id='top-searched-articles'>ಹಾಗೆಯೆ,
ವಕೀಲರನ್ನು 'ಗೂಂಡಾ, ರೌಡಿ, ಟೆರರಿಸ್ಟ್, ತಾಲಿಬಾನಿ' ಎಂಬಂತಹ ಪದಗಳಿಂದ ಬಣ್ಣಿಸಬಾರದು ಎಂದು ನ್ಯಾಯಾಲಯ ಸೋಮವಾರ ಮಧ್ಯಂತರ ಆಜ್ಞೆ ಹೊರಡಿಸಿತ್ತು. ಇಂದು ಫೋಟೋ ಮತ್ತು ವಿಡಿಯೋ ದೃಶ್ಯಾವಳಿಗಳ ಮೇಲೂ ತಡೆಯಾಜ್ಞೆ ನೀಡಿದೆ.











Click it and Unblock the Notifications