ಮೆಟ್ರೋ ರೈಲು: ಜಯನಗರದ ವಿದ್ಯಾರ್ಥಿ ಆತ್ಮಹತ್ಯೆ

ಜಯನಗರದ ವಿಷ್ಣು ಶರಣ್ (17) ಆತ್ಮಹತ್ಯೆ ಮಾಡಿಕೊಂಡವ. ಈತ ಸೆಂಟ್ ಜೋಸೆಫ್ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿದ್ದ. ಜೀವನದಲ್ಲಿ ಜಿಗುಪ್ಸೆ ಮಾಡಿಕೊಂಡು ವಿಷ್ಣು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆದರೆ ಈ ವಿದ್ಯಾರ್ಥಿಯ ಆತ್ಮಹತ್ಯೆಗೆ ಸ್ಪಷ್ಟ ಕಾರಣ ತಿಳಿದು ಬಂದಿಲ್ಲ. ವಿಷ್ಣು, ವ್ಯಾಪಾರಿ ಎಸ್ ವಿ ಸತ್ಯನಾರಾಯಣ ಎಂಬುವವರ ಪುತ್ರ.
ಹೇಗಾಯಿತು?: ಬೈಯಪ್ಪನಹಳ್ಳಿಗೆ ರೈಲಿನಲ್ಲಿ ತೆರಳಲು ರಾತ್ರಿ 8.45ರ ಸುಮಾರಿಗೆ ವಿಷ್ಣು ಟಿಕೆಟ್ ಖರೀದಿಸಿದ್ದ. ಎಂ.ಜಿ. ರಸ್ತೆ ನಿಲ್ದಾಣದ ಪ್ಲಾಟ್ ಫಾರಂ ನಲ್ಲಿ ಕಾಯುತ್ತಿದ್ದಾಗ ಮೆಟ್ರೋ ರೈಲು, ನಿಲ್ದಾಣ ತಲುಪಲು ಒಂದೂವರೆ ಮೀಟರ್ ದೂರ ಬಾಕಿ ಇರುವಾಗಲೇ ವಿಷ್ಣು ಹೈ ವೋಲ್ಟೇಜ್ ವಿದ್ಯುತ್ ಹರಿಯುವ ಹಳಿಯ ಮೇಲೆ ಜಿಗಿದಿದ್ದಾನೆ. ಆಗ ಅತಿ ವೇಗದಲ್ಲಿದ್ದ ರೈಲನ್ನು ಚಾಲಕ ನಿಯಂತ್ರಣಕ್ಕೆ ತರುವ ಪ್ರಯತ್ನ ಮಾಡುವಷ್ಟರಲ್ಲಿ ವಿಷ್ಣು ಶರಣ್‌ನ ರೈಲಿನ ಅಡಿ ಸಿಲುಕಿ ಸಾವನ್ನಪ್ಪಿದ್ದನು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಪ್ರತಿಭಾವಂತ ವಿದ್ಯಾರ್ಥಿ: 'ಸಾವನ್ನಪ್ಪಿರುವ ವಿಷ್ಣು ಹತ್ತನೇ ತರಗತಿಯಲ್ಲಿ ಶೇ. 90 ರಷ್ಟು ಅಂಕ ಪಡೆದಿದ್ದ ಪ್ರತಿಭಾವಂತ ವಿದ್ಯಾರ್ಥಿ. ಸೋಮವಾರ ರಾತ್ರಿ ಏಳು ಗಂಟೆಗೆ ಮನೆ ಬಿಟ್ಟ ಆತ ವಿಲ್ಸನ್ ಗಾರ್ಡನ್‌ನಲ್ಲಿ ಟ್ಯೂಷನ್‌ಗೆ ಹೋಗಿರಬಹುದೆಂದು ತಿಳಿದುಕೊಂಡಿದ್ದೆವು. ಆದರೆ ನ್ಯೂಸ್ ಚಾನೆಲ್‌ಗಳ ಮೂಲಕ ಸುದ್ದಿ ತಿಳಿದು ಆಘಾತವಾಗಿದೆ. ಅವನು ಆತ್ಮಹತ್ಯೆ ಮಾಡಿಕೊಳ್ಳುವಂತಹ ಯಾವ ಘಟನೆಯೂ ಮನೆಯಲ್ಲಿ ನಡೆದಿರಲಿಲ್ಲ ಎಂದು ಎಸ್.ವಿ.ಸತ್ಯನಾರಾಯಣ ತಮ್ಮ ನೋವು ತೋಡಿಕೊಂಡರು.












Click it and Unblock the Notifications