• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಡಿಕೆಶಿ- ಅಬ್ರಹಾಂ ರೂಂ-ಮೇಟುಗಳು ಕಣ್ರಿ

By Srinath
|
denotification-dk-shivakumar-tj-abraham-roommates
ಬೆಂಗಳೂರು, ಮಾ.6: ಗೋಕುಲಾಷ್ಠಮಿಗೂ ಇಮಾಮ್ ಸಾಬಿಗೂ ಏನಣ್ಣಾ ಸಂಬಂಧ? ಈ ಟಿ.ಜೆ. ಅಬ್ರಹಾಂ ಎಂಬ ಭಯಂಕರ ಭ್ರಷ್ಟಾಚಾರ ವಿರೋಧಿಗೂ, ಆ ಕಾಂಗ್ರೆಸ್ ಶಾಸಕ ಡಿ.ಕೆ. ಶಿವಕುಮಾರ್ ಗೂ ಎತ್ತಣ ಸಂಬಂಧವಯ್ಯಾ ಅಂತ ಕೇಳಿದರೆ, ಸಂಬಂಧ ಅಂತೇನೂ ಇಲ್ಲ. ಆದರೆ ಅವ-ಇವ ರೂಮ್ ಮೇಟುಗಳು ಕಣಣ್ಣೋ ಅನ್ನಬಹುದು.

ಡಿಕೆಶಿ ತಲೆಯ ಮೇಲೆ ಬರೋಬ್ಬರಿ ಭಾರಿ ಭೂಚಕ್ರ ಹಚ್ಚಿಟ್ಟಿರುವ ಸನ್ಮಾನ್ಯ ಅಬ್ರಹಾಂ ಸಾಹೇಬರು ಕಾಲೇಜು ದಿನಗಳಲ್ಲಿ ಡಿಕೆಶಿಯೊಟ್ಟಿಗೆ ಒಂದೇ ರೂಮಿನಲ್ಲಿದ್ದರು. ರಾಮನಾರಾಯಣ ಚೆಲ್ಲಾಂ ಕಾಲೇಜಿನ ವಿದ್ಯಾರ್ಥಿ. (RC College of Commerce- ಚಾಲುಕ್ಯ ವೃತ್ತದಲ್ಲಿರುವ ಈ ಕಾಲೇಜಿನಲ್ಲಿ ಅನೇಕ ರಾಜಕೀಯ ನಾಯಕರು, ಅಧಿಕಾರಿಗಳು ಇಲ್ಲಿ ವ್ಯಾಸಂಗ ಮಾಡಿದ್ದಾರೆ. ಶಿವರಾಜ್ ಕುಮಾರ್ ಕಿಸ್ಸಿಗೆ ಢಮಾರ್ ಆಗಿದ್ದು ಅಂದರೆ ಉಪ್ಪಿ 'ಓಂ' ಸಿನಿಮಾ ನಿರ್ದೇಶಿಸಿದ್ದೂ ಇಲ್ಲೇ).

ಇನ್ನು, ಆರ್ ಸಿ ಕಾಲೇಜಿನಿಂದ ಕಣ್ಣಳತೆ ದೂರದಲ್ಲಿರುವ SJRC College ನಲ್ಲಿ ಡಿಕೆಶಿ ಓದುತ್ತಿದ್ದರು. ಅದು 1980ರ ದಶಕದ ಆರಂಭದ ದಿನಗಳು. ಆ ದಿನಗಳಲ್ಲಿ ಇಬ್ಬರೂ ಅಕ್ಕ-ಪಕ್ಕದ ಕಾಲೇಜಿನವರಾಗಿದ್ದರಿಂದ ಒಂದೇ ರೂಮಿನಲ್ಲಿ ಇರತೊಡಗಿದರು. ಮುಂದ !? ಡಿಕೆಶಿ ಕಾಂಗ್ರೆಸ್ಸಿನಲ್ಲಿ ನೆಲೆಯೂರಿದರೆ ಅಬ್ರಹಾಂ, ಇಂದು ಉತ್ತರ ಪ್ರದೇಶದಲ್ಲಿ ಹೀನಾಯ ಸೋಲು ಕಂಡಿರುವ ಬಿಎಸ್ ಪಿಯಲ್ಲಿ ಗುರುತಿಸಿಕೊಂಡರು. ಒಮ್ಮೆ ವಿಧಾನಸಭೆ ಚುನಾವಣೆಗೆ ನಿಂತು, ಸೋತರು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ಇನ್ನಷ್ಟು ಡಿಕೆ ಶಿವಕುಮಾರ್ ಸುದ್ದಿಗಳುView All

English summary
A complaint is filed in the Lokayukta court against senior Congress leader D K Shiva Kumar charging him with getting government land illegally denotified for pecuniary gain. And for your surprise the complainant is none other than once a room mate of DK Shi.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more