ಇದು ವಿಚಿತ್ರವೋ ಮಾನವೀಯತೆಯೋ ನೀವೇ ಹೇಳಿ

ನೋಡಿಲ್ಲದಿದ್ದರೆ ಮಾಗಡಿಯ ಹೊಂಬಾಳಮ್ಮನಪೇಟೆಗೆ ಒಮ್ಮೆ ಬನ್ನಿ. ಮರಿಹಾಕಿದ ನಂತರ ಮರಿಗಳೆಲ್ಲವೂ ದೂರವಾಗಿದ್ದರಿಂದ ನಾಯಿಯಲ್ಲಿ ಹೆಚ್ಚು ಹಾಲು ಶೇಖರಣೆಯಾಗಿ, ನಾಯಿ ಯಾತನೆಪಡುತ್ತಿದೆ ಎಂದು ಶ್ವಾನಕ್ಷೀರವನ್ನು ಹೀರುತ್ತಿರುವ ಗಂಗಹನುಮಯ್ಯ ಎಂಬ ವ್ಯಕ್ತಿ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಾನೆ. ಬಾಣಂತಿ ನಾಯಿಯೂ ಕೂಡ ಯಾವುದೇ ಪ್ರತಿರೋಧ ವ್ಯಕ್ತಪಡಿಸದೇ ಈ ವ್ಯಕ್ತಿಗೆ ಹಾಲುಣಿಸುತ್ತಾ ನೆಮ್ಮದಿ ಕಾಣುತ್ತಿದೆ.
ಬೀದಿ ನಾಯಿಯೊಂದು 10 ಮರಿಗಳಿಗೆ ಜನ್ಮ ನೀಡಿತ್ತು. ಕಳೆದ 20 ದಿನಗಳಿಂದ ಮರಿಗಳಿಗೆ ಹಾಲುಣಿಸುತ್ತಿತ್ತು. ಆದರೆ ಮರಿಗಳೆಲ್ಲವೂ ಯಾವುದೋ ಕಾರಣದಿಂದ ದೂರವಾದ ನಂತರ ಬಾಣಂತಿ ನಾಯಿಯಲ್ಲಿ ಹಾಲು ತುಂಬಿಕೊಂಡು ಕಿರುಚಿಕೊಂಡು ಯಾತನೆ ಪಡುತ್ತಿತ್ತು. ಇದನ್ನ ನೋಡಿದ ಗಂಗಹನುಮಯ್ಯ, ಬೀದಿ ನಾಯಿಯ ಹಾಲು ಕುಡಿಯುವದನ್ನು ರೂಢಿ ಮಾಡಿಕೊಂಡು ಯಾತನೆ ಪಡುತ್ತಿದ್ದ ನಾಯಿಗೆ ಸ್ವಲ್ಪ ರಿಲೀಫ್ ನೀಡಿದ್ದಾನೆ.
ಚೆನ್ನಾಗಿರೋ ಹಾಲು ಕುಡಿದ್ರೇನೆ ಇಂದಿನ ಪರಿಸ್ಥಿತಿಯಲ್ಲಿ ಕಾಯಿಲೆ ಕಸಾಲೆಗಳು ಬರ‍್ತಿವೆ. ಅಂಥದ್ರಲ್ಲಿ ಕಳೆದ 8 ದಿನಗಳಿಂದ ಶ್ವಾನಕ್ಷೀರವನ್ನು ಹೀರುತ್ತಿರುವ ಗಂಗಹನುಮಯ್ಯನಿಗೆ ಆರೋಗ್ಯದಲ್ಲಿ ಯಾವುದೇ ರೀತಿಯಲ್ಲೂ ಏರುಪೇರಾಗಿಲ್ಲ.
ನಾಯಿಯ ಹಾಲು ನಾಯಿಗಲ್ಲದೇ ಪಂಚಾಮೃತಕ್ಕೆ ಸಲ್ಲುವುದೇ ಎಂದು ಬಸವಣ್ಣ ಹಿಂದೆಯೇ ಹೇಳಿದ್ದಾರೆ. ಅದರರ್ಥ ನಾಯಿ ಹಾಲನ್ನು ಯಾವುದಕ್ಕೂ ಬಳಸುವುದಿಲ್ಲವೆಂಬುದು. ಆದರೆ ಹೊಂಬಾಳಮ್ಮನಪೇಟೆಯ ಈ ಭೂಪ ಯಾರು ಏನೇ ಹೇಳಿದ್ರು ನಾಯಿಯ ಹಾಲಿನ ಭಾರ ಕಡಿಮೆ ಮಾಡಬೇಕೆಂದು ಶ್ವಾನಕ್ಷೀರವನ್ನು ಹೀರುತ್ತಿದ್ದೇನೆಂದು ಹೇಳಿಕೊಳ್ಳುತ್ತಿದ್ದಾನೆ.
ಶ್ವಾನಕ್ಷೀರುವುದನ್ನ ಹೀರುತ್ತಿರುವ ಭೂಪನನ್ನು ನೋಡಲು ಪಟ್ಟಣದ ಮಂದಿಯೆಲ್ಲಾ ಆಗಮಿಸುತ್ತಿದ್ದಾರೆ. ಆದರೆ ಬೆಳಿಗ್ಗೆ ಸಂಜೆ ನಾಯಿ ಹಾಲನ್ನ ಕುಡಿದು ಎಂದಿನಂತೆ ತನ್ನ ವ್ಯವಸಾಯವನ್ನು ಮುಂದುವರೆಸಿದ್ದಾನೆ. ಶ್ವಾನಕ್ಷೀರ ಹೀರುವುದು ವಿಚಿತ್ರವೋ ಮಾನವೀಯತೆಯೋ ಎಂಬುದು ನೀವೇ ಹೇಳಿ.












Click it and Unblock the Notifications