ರೆಡ್ಡಿಗೆ ರುಕ್ಮಿಣಿಯ ಚಿಂತೆ ಬಿಡಿ ಎಂದ ಕೋರ್ಟ್

'ಓಬಳಾಪುರಂ ಅಕ್ರಮ ಗಣಿಗಾರಿಕೆ ಸಂಬಂಧ ಸಿಬಿಐ ವಶಪಡಿಸಿಕೊಂಡಿರುವ ತಮ್ಮ ರುಕ್ಮಿಣಿ ಹೆಲಿಕಾಪ್ಟರ್ ತುಕ್ಕು ಹಿಡಿದು ಗುಜರಿ ಸೇರುವ ಮುನ್ನ ರುಕ್ಮಿಣಿ ಜತೆಗೆ ರೋಲ್ಸ್ ರಾಯ್ಡ್, ಬಿಎಂಡಬ್ಲ್ಯು ಕಾರುಗಳನ್ನೂ ವಾಪಸ್ ಕೊಡಿಸಿ' ಎಂದು ರೆಡ್ಡಿ ಅರ್ಜಿ ಸಲ್ಲಿಸಿದ್ದರು.
ಅದಕ್ಕೆ ಬ್ರೇಕ್ ಹಾಕಿದ್ದ ಸಿಬಿಐ 'ಹೆಲಿಕಾಪ್ಟರ್, ಐಷಾರಾಮಿ ಕಾರುಗಳನ್ನು ಬಳಸದಿದ್ದರೆ ಅವು ತುಕ್ಕು ಹಿಡಿಯುತ್ತವೆ ಎಂಬ ರೆಡ್ಡಿ ವಾದದಲ್ಲಿ ಹುರುಳಿಲ್ಲ. ಅವುಗಳನ್ನೆಲ್ಲ ಸುಸ್ಥಿತಿಯಲ್ಲಿಡಲಾಗಿದೆ. ಹೆಲಿಕಾಪ್ಟರ್ ಬೆಂಗಳೂರಿನಲ್ಲೂ, ಕಾರುಗಳು ಬಳ್ಳಾರಿಯಲ್ಲಿ ಸುಭದ್ರವಾಗಿವೆ. ರೆಡ್ಡಿಗೆ ಯಾವುದೇ ಆತಂಕ ಬೇಡ' ಎಂದು ಸಿಬಿಐ ನ್ಯಾಯಾಲಯದಲ್ಲಿ ವಾದಿಸಿತ್ತು.
ನ್ಯಾಯಾಲಯ ಗುರುವಾರ ಈ ಬಗ್ಗೆ ವಿಚಾರಣೆ ನಡೆಸಿತು. 'ರೆಡ್ಡಿಗಾರು, ರುಕ್ಮಿಣಿಯ ಚಿಂತೆ ಬಿಡಿ. ಆ ಕಾರು, ಹೆಲಿಕಾಪ್ಟರು ಅದರ ಜವಾಬ್ದಾರಿಯನ್ನು ಅದನ್ನು ಹಿಡಿದಿಟ್ಟಿರುವ ತನಿಖಾ ಸಂಸ್ಥೆಯ ಜವಾಬ್ದಾರಿಗೆ ಬಿಟ್ಟುಬಿಡಿ, ಏನೂ ಆಗೋಲ್ಲ. ಅದರ ಬದಲಿಗೆ ಅಲ್ಲೇ ನಿಮ್ಮ ವಾಹನಗಳು ಹೆಚ್ಚು ಸುರಕ್ಷಿತವಾಗಿರುತ್ತವೆ' ಎಂದು ನ್ಯಾ. ನಾಗಾಶರ್ಮಾ ಅವರು ರೆಡ್ಡಿಗೆ ಹೇಳಿದರು.
ಅದಕ್ಕೂ ಮುನ್ನ, ರೆಡ್ಡಿ ಹೇಳಿದಂತೆ ಅವರ ವಾಹನಗಳ ಸುರಕ್ಷತೆ ಬಗ್ಗೆ ಪರಿಣತರ ಅಭಿಪ್ರಾಯ ಪಡೆಯನೇಕಾಗಿದೆ. ಆದ್ದರಿಂದ ಹೆಚ್ಚಿನ ಕಾಲಾವಕಾಶ ನೀಡಿ' ಎಂದು ಸಿಬಿಐ ಕೋರ್ಟಿಗೆ ಮೊರೆಹೋಗಿತ್ತು. ಈ ಹಿನ್ನೆಲೆಯಲ್ಲಿ ರೆಡ್ಡಿ ವಾಹನಗಳನ್ನು ಈಗ್ಲೇ ವಾಪಸ್ಸು ಕೊಡಬೇಕೋ, ಬೇಡ್ವೋ ಎಂಬುದರ ವಿಚಾರಣೆಯನ್ನು ನ್ಯಾಯಾಲಯ, ಮಾ. 21 ಕ್ಕೆ ಮುಂದೂಡಿತು.












Click it and Unblock the Notifications