ಕಸ ಗುಡಿಸುವವನಲ್ಲಿಯೂ ನಾಯಕನಿದ್ದಾನೆ : ರಾಬಿನ್

ಪ್ರಶ್ನೆ : ಭಾರತದ ರಾಜಕಾರಣಿಗಳಿಗೆ ನಾಯಕತ್ವದ ಸಲಹೆ ನೀಡುವುದಾದರೆ ಏನು ನೀಡುತ್ತೀರಿ?
ರಾಬಿನ್ ಶರ್ಮಾ : ನಾನೊಬ್ಬ ಬರಹಗಾರ ಮತ್ತು ಲೀಡರ್ಶಿಪ್ ತಜ್ಞ. ಭಾರತದ ರಾಜಕೀಯದ ಬಗ್ಗೆ ನನಗೇನೂ ತಿಳಿದಿಲ್ಲ. ನಾನು ಉದ್ಯಮಿಗಳೊಂದಿಗೆ ಸಂವಹನ ನಡೆಸುತ್ತೇನೆ. ಲೀಡರ್ಶಿಪ್ ಎಂಬುದು ಜನಪ್ರಿಯತೆ ಗಳಿಸಲು ಇರುವ ಸ್ಪರ್ಧೆಯಲ್ಲ. ಅವರು ತಮ್ಮ ಅಹಂಕಾರವನ್ನು ಕಿತ್ತು ಬಿಸಾಡಿ ಮಹತ್ ಉದ್ದೇಶದತ್ತ ಗಮನ ಹರಿಸಬೇಕು.
ಸೆಮಿನಾರಿನಲ್ಲಿ ಅವರ ಒಂದು ಮಾತುಗಳನ್ನು ಇಲ್ಲಿ ಮನನ ಮಾಡಬಹುದು : "ಬಲಿಪಶುಗಳು ಕಾರಣ ನೀಡುತ್ತಿರುತ್ತಾರೆ, ನಾಯಕರು ಫಲಿತಾಂಶ ನೀಡುತ್ತಾರೆ." "ಭಾರತದಲ್ಲಿ, ಪ್ರತಿಯೊಂದಕ್ಕೂ ನೆವಗಳನ್ನು ನೀಡುವ ಸಂಸ್ಕೃತಿಯೇ ಇದೆ."
ಪ್ರಶ್ನೆ : ನಿಮಗೆ ಅತಿ ಹೆಚ್ಚು ಪ್ರೇರಣೆ ನೀಡಿದ್ದು ಯಾರು?
ರಾಬಿನ್ : ಇದು, ನಿಮಗೆ ಅತಿ ಇಷ್ಟವಾದ ಮಗು ಯಾರು ಎಂದು ಕೇಳಿದಂತೆ. ಅನೇಕ ಜನರು ನನಗೆ ಪ್ರೇರಣೆ ನೀಡಿದ್ದಾರೆ. ನನ್ನ ಮಕ್ಕಳು, ನನ್ನ ನಾಯಕರು, ನನ್ನ ಕಾರ್ಯಕ್ರಮದಲ್ಲಿ ಭಾಗವಹಿಸಿದ 900 ಜನರೂ ನನಗೆ ಪ್ರೇರಣೆ ನೀಡಿದ್ದಾರೆ. ನಾಳೆ ಏನಾಗಬಯಸುತ್ತೇನೆಂದು ತಿಳಿಯಲು ಅವರೆಲ್ಲ ಇಂದು ಕಷ್ಟ ತೆಗೆದುಕೊಂಡಿದ್ದಾರೆ. ಮಂಡೇಲಾ, ಮದರ್ ತೆರೇಸಾ, ಸ್ಟೀವ್ ಜಾಬ್ಸ್, ಅಮೆಜಾನ್‌ನ ಜೆಫ್ ಜೆಜೋಸ್ ಎಲ್ಲರೂ ಸ್ಫೂರ್ತಿ ನೀಡಿದ್ದಾರೆ. ಶ್ರೇಷ್ಠತೆಗೆ ಯಾವಾಗಲೂ ತುಡಿಯುತ್ತಿದ್ದ ಪಿಕಾಸೋ ಬಗ್ಗೆ ನನಗೆ ಎಲ್ಲಿಲ್ಲದ ಗೌರವ.
ಪ್ರಶ್ನೆ : ಮುಂದಿನ ಪೀಳಿಗೆ ಯುವ ಉದ್ಯಮಿಗಳಲ್ಲಿ ಯಾರು ಭಾರತವನ್ನು ಮುನ್ನಡೆಸುವಲ್ಲಿ ಶಕ್ತರಾಗಿದ್ದಾರೆ?
ರಾಬಿನ್ : ಭಾರತದಲ್ಲಿ ಆರಂಭವಾಗುತ್ತಿರುವ ಹೊಸ ಕಂಪನಿ ಮತ್ತು ಹೊಸಬಗೆಯ ಕಲ್ಪನೆಗಳು ನಿಜಕ್ಕೂ ಅದ್ಭುತವಾಗಿವೆ. ಕಳೆದ ದಶಕದಿಂದ ಈ ಬೆಳವಣಿಗೆಯನ್ನು ಗಮನಿಸುತ್ತಿದ್ದೇನೆ. ಹೊಸ ಉದ್ಯಮ ಸ್ಥಾಪಿಸಿದಾಗ ಲಾಭ ಮಾಡುವುದಕ್ಕಿಂತ ಮೌಲ್ಯವರ್ಧನೆಯತ್ತ ಯುವ ನಾಯಕರು ಗಮನಹರಿಸಬೇಕು. ತಂತ್ರಜ್ಞಾನದ ಸಹಾಯವೂ ಇರುವುದರಿಂದ ಮೌಲ್ಯ ವರ್ಧನೆ ಖಂಡಿತ ಸಾಧ್ಯ. ಕೆಲಸದ ಸ್ಥಳದಲ್ಲಿ ಖುಷಿಯಾಗಿರುತ್ತ ಕೆಲಸ ಮಾಡುವಂತಹ ವಾತಾವರಣ ನಿರ್ಮಿಸಬೇಕು. ಇಂದಿನ ಯವನಾಯಕರಿಗೆ ಹೊಸ ಪ್ರತಿಭೆಗಳನ್ನು ಪ್ರೊತ್ಸಾಹಿಸುವ ಬಗ್ಗೆ ತಿಳಿವಳಿಕೆಯಿದೆ. ಒಂದು ವರ್ಷದಲ್ಲಿ ಹಳೆಯ ಕಂಪನಿಗಳು ನೀಡುವ ಲಾಭವನ್ನು ಮೂರು ತಿಂಗಳಲ್ಲಿ ತಾಕತ್ತು ಇಂದಿನ ಯುವಕರಿಗಿದೆ.
ಪ್ರಶ್ನೆ : ಇಂದಿನ ಪರಿಸ್ಥಿತಿಯಲ್ಲಿ 'ಲೀಡ್ ವಿದೌಟ್ ಎ ಟೈಟಲ್' ಎಂಬ ಐಡಿಯಾ ಎಷ್ಟು ಪ್ರಸ್ತುತ?
ರಾಬಿನ್ : ಜಗತ್ತಿನ ಎಲ್ಲ ನಾಯಕರೊಂದಿಗೆ ಮಾತನಾಡಿರುವ ನನ್ನ ಅನುಭವದ ಪ್ರಕಾರ, ಲೀಡ್ ವಿದೌಟ್ ಎ ಟೈಟಲ್ ಎಂಬ ಕಲ್ಪನೆ ಪ್ರಸ್ತುತವಿಲ್ಲದಿದ್ದಿದ್ದರೆ ಅನೇಕ ವರ್ಷಗಳ ಹಿಂದೆಯೇ ನಾನು ಈ ವ್ಯಾಪಾರದಿಂದಲೇ ಹಿಂದೆ ಸರಿಯುತ್ತಿದ್ದೆ. ಒಬ್ಬನೇ ಲೀಡರ್ ಎಲ್ಲ ಕೆಲಸಗಳನ್ನು ಅತ್ಯಂತ ಪರಿಣಾಮಕಾರಿಯಾಗಿ ಮಾಡುವುದು ಸಾಧ್ಯವಿಲ್ಲ ಎಂಬುದೇ ಈ ಕಲ್ಪನೆಯ ಹಿಂದಿನ ಧ್ಯೇಯ. ವಸ್ತುಸ್ಥಿತಿ ಏನಿದೆಯೆಂದರೆ, ಮೂವರು ನಾಯಕತ್ವ ವಹಿಸಿರುತ್ತಾರೆ, ಉಳಿದವರು ಹೊಸತನವನ್ನೂ ತರುವುದಿಲ್ಲ, ಜವಾಬ್ದಾರಿಯನ್ನೂ ಹೊರುವುದಿಲ್ಲ. ನನ್ನ ಪ್ರಕಾರ, ಅದು ಕಂಪನಿ ದಿವಾಳಿ ಎದ್ದಿರುವುದರ ಸಂಕೇತ.
ಪ್ರಶ್ನೆ : ಭಾರತೀಯರ ಅರಿವಿನ ಸ್ಥಿತಿ ಯಾವರೀತಿ ಇದೆ?
ರಾಬಿನ್ : ಅನೇಕ ದೇಶಗಳಿಗೆ ಹೋಲಿಸಿದರೆ ಭಾರತದ ನಾಯಕರಲ್ಲಿ ಸ್ವಸಂಶೋಧನೆಯ ಹಸಿವಿದೆ. ಯೋಗ, ಧ್ಯಾನದ ಜನ್ಮಸ್ಥಳವಾದ ಭಾರತದಲ್ಲಿ ಅನೇಕ ನಾಯಕರು ಸ್ವಯಂಭೂ ಆಗಿ ಬೆಳೆದಿದ್ದಾರೆ ಮತ್ತು ಭಾರತೀಯರಲ್ಲಿ ಮಾನಸಿಕ ಸ್ಥಿರತೆ, ಆಧ್ಯಾತ್ಮದ ಶಕ್ತಿಯಿದೆ. ನನ್ನ 15 ವರ್ಷಗಳಲ್ಲಿ ಭಾರತದ ಇಂತಹ ಕೆಲವೇ ನಾಯಕರನ್ನು ನಾನು ಭೇಟಿಯಾಗಿದ್ದೇನೆ.
ಪ್ರಶ್ನೆ : ನಿಮ್ಮ ಮೊದಲನೇ ಪುಸ್ತಕವೇ ಅತ್ಯವತ್ತಮವೆ?
ರಾಬಿನ್ : ನನ್ನ ಇತ್ತೀಚಿನ ಪುಸ್ತಕ - ದಿ ಸಿಕ್ರೆಟ್ ಲೆಟರ್ಸ್ ಆಫ್ ದಿ ಮಾಂಕ್ ಹೂ ಸೋಲ್ಡ್ ಹಿಸ್ ಫೆರಾರಿ ನನ್ನ ಅತ್ಯುತ್ತಮ ಪುಸ್ತಕ. ಎರಡನೇ ಸ್ಥಾನದಲ್ಲಿರುವುದು ದಿ ಲೀಡರ್ ವಿದೌಟ್ ಎ ಟೈಟಲ್. ನಾನು ಭೇಟಿಯಾದ ಕಸ ಗುಡಿಸುವವ, ಟ್ಯಾಕ್ಸಿ ಡ್ರೈವರ್, ತಾಯಿ, ತಂದೆ ಎಲ್ಲರೂ ತಮ್ಮ ತಮ್ಮ ಪರಿಧಿಯಲ್ಲಿ ನಾಯಕತ್ವ ಪ್ರದರ್ಶಿಸಿದ್ದಾರೆ. ನನ್ನ ಮುಂದಿನ ಪುಸ್ತಕ - ದಿ ಗ್ರೇಟ್ನೆಸ್ ಗೈಡ್ ಕೂಡ ಉತ್ತಮ ಪ್ರಭಾವ ಬೀರಿದೆ.












Click it and Unblock the Notifications