ಆಟೋ ಗ್ಯಾಸ್ ದರ ದಿಢೀರ್ ಏರಿಕೆ
ಬೆಂಗಳೂರು,
ಮಾ.1: ಮತ್ತೊಂದು ಆಟೋ ಕಂಟಕ ಎದುರಾಗಿದೆ. ನಗರದಲ್ಲಿ ಆಟೋ ಗ್ಯಾಸ್ ದರವನ್ನು ದಿಢೀರನೆ ಏರಿಸಲಾಗಿದ್ದು, ಇನ್ನು ಆಟೋ ದರ ಹೆಚ್ಚಾಗುವುದು ಗ್ಯಾರಂಟಿಯಾಗಿದೆ. ಮೊನ್ನೆಯಷ್ಟೇ ಮುಷ್ಕರ ಹೂಡಿದ್ದ ಆಟೋ ಮಾಲೀಕರಿಗೆ ಇದೀಗ ಗ್ಯಾಸ್ ದರ ಏರಿಕೆ ಬಿಸಿತುಪ್ಪವಾಗಿದ್ದು, ಆಟೋ ಪ್ರಯಾಣ ದರ ಹೆಚ್ಚಿಸಬೇಕೆಂಬ ಅವರ ಬೇಡಿಕೆಗೆ ಈ ಬಾರಿ ಸರಕಾರ ಮಣಿಯುವುದು ಅನಿವಾರ್ಯವಾಗಲಿದೆ. id="toptextpromo">ಆಟೋ
ಎಲ್ ಪಿಜಿ ದರ Kgಗೆ 3.30 ರುಪಾಯಿ ಹೆಚ್ಚಿಸಲಾಗಿದೆ. ಇದರಿಂದ ಆಟೋ ಎಲ್ ಪಿಜಿ ದರ Kgಗೆ 48.80 ರುಪಾಯಿ ತಲುಪಿದೆ. ಹಿಂದಿನ ದರ Kgಗೆ 45.50 ರುಪಾಯಿಯಷ್ಟಿತ್ತು. ಇದರೊಂದಿಗೆ ಮೊನ್ನೆ ಮುಷ್ಕರದ ವೇಳೆ, ಇನ್ನೊಂದು ವಾರದಲ್ಲಿ ಆಟೋ ದರ ಹೆಚ್ಚಳದ ಬಗ್ಗೆ ನಿರ್ಧಾರ ಕೈಗೊಳ್ಳುವುದಾಗಿ ಆಟೋ ಮಾಲೀಕರಿಗೆ ಭರವಸೆ ನೀಡಿದ್ದ ಜಿಲ್ಲಾಧಿಕಾರಿ ಅಯ್ಯಪ್ಪ ಅವರಿಗೆ ಬೇರೆ ದಾರಿಯಿಲ್ಲದೆ ಈಗ ಆಟೋ ಪ್ರಯಾಣ ದರ ಹೆಚ್ಚಿಸುವುದು ಅನಿವಾರ್ಯವಾಗಲಿದೆ. id='are-slot-1' class='oiad oi-axt oiadv'> id='top-searched-articles'>ಆಟೋ
ಎಲ್ ಪಿಜಿಯ ಹಿಂದಿನ ದರದಲ್ಲಿ ಪ್ರಯಾಣ ದರವನ್ನು ಕನಿಷ್ಠ 3 ರುಪಾಯಿ ಏರಿಸಬೇಕು (ಅಂದರೆ, ಮಿನಿಮಮ್ 20 ರುಪಾಯಿ) ಎಂದು ಆಟೊ ಮಾಲೀಕರು ಮೊನ್ನೆ ಒತ್ತಾಯಿಸಿದ್ದರು.











Click it and Unblock the Notifications