ಸುನಿಲ್ ಮೇಲಿದೆ ಭೂ ಹಗರಣದ ಕರಿನೆರಳು

ಈ ಹಿಂದೆ ವಿಧಾನಸಭಾ ಚುನಾವಣೆಯಲ್ಲಿ ಕಾರ್ಕಳ ಕ್ಷೇತ್ರದಲ್ಲಿ ಸುನಿಲ್ ಕುಮಾರ್ ಸೋಲುವುದಕ್ಕೂ ಈ ಭೂ ಹಗರಣ ಕಾರಣವಾಗಿತ್ತು ಎನ್ನಬಹುದು.
ಏನಿದು ಪ್ರಕರಣ? : 2007ರಲ್ಲಿ ಜೆಡಿಎಸ್ ಮತ್ತು ಬಿಜೆಪಿಯ ಸಮ್ಮಿಶ್ರ ಸರ್ಕಾರವಿದ್ದ ಕಾಲ. ಸುನಿಲ್ ಕುಮಾರ್ ಅವರು ಅಂದಿನ ಮುಖ್ಯಮಂತ್ರಿ ಕುಮಾರಸ್ವಾಮಿಯವರಿಗೆ ಖುದ್ದಾಗಿ ಅರ್ಜಿ ಸಲ್ಲಿಸಿ ಕೆಂಗೇರಿ ಹೋಬಳಿಯ ವಳಗೇರಹಳ್ಳಿ ಎಂಬಲ್ಲಿ ಐದೂವರೆ ಎಕರೆ ಕೃಷಿ ಜಮೀನನ್ನು ಬಿಡಿಎ ಸ್ವಾಧೀನಪಡಿಸಿಕೊಂಡಿದ್ದನ್ನು ಡೀನೋಟಿಫೈ ಮಾಡಿಕೊಡಬೇಕೆಂದು ಮನವಿ ಮಾಡಿದ್ದರು.
ಅರ್ಜಿಯ ಮೇಲೆ ಖುದ್ದು ಹಸ್ತಾಕ್ಷರದಲ್ಲಿ ಕುಮಾರಸ್ವಾಮಿಯವರು ಕಡತ ಸಂಖ್ಯೆ ಎಸ್‌ಸಿಎಂ 2/281/07ರಲ್ಲಿ ಸಿಎಂ ಸುಧಾರಣೆಗಳನ್ನು ಶಿಫಾರಸು ಮಾಡಿದ್ದರು.
ಭೂಸ್ವಾಧೀನ ಪ್ರಕ್ರಿಯೆಯಂದ ಕೈಬಿಡುವಂತೆ ಬಿಡಿಎಗೆ ಆದೇಶಿಸಿದ್ದರು. ಈ ಜಮೀನಿನ ಅಂದಿನ ಮಾರುಕಟ್ಟೆ ಮೌಲ್ಯ ಕನಿಷ್ಠವೆಂದರೂ 50 ಕೋಟಿ ರು ಎಂದು ಅಂದಾಜು ಮಾಡಲಾಗಿದೆ.












Click it and Unblock the Notifications