ಕೊಲೆ ಕೇಸ್ ನಲ್ಲಿ ಅಭ್ಯರ್ಥಿ ಸುನಿಲ್ ಹೆಸರಿತ್ತು ಅಲ್ವಾ

ಶಾಸಕ ರಘುಪತಿ ಭಟ್ ಅವರ ಪತ್ನಿ ಪದ್ಮಪ್ರಿಯಾ ಕೊಲೆ ಪ್ರಕರಣದಲ್ಲಿ ಸುನಿಲ್ ಎಂಬ ಹೆಸರು ಕೂಡಾ ಸೇರಿತ್ತು. ಪದ್ಮಪ್ರಿಯಾ ಅವರು ಆತ್ಮಹತ್ಯೆ ಮಾಡಿಕೊಂಡು ಸಾಯುವುದಕ್ಕೂ ಮುನ್ನ ಸುನಿಲ್ ಎಂಬುವವರಿಗೆ ಕಾಲ್ ಮಾಡಿದ್ರು ಎಂದು ವರದಿಯಾಗಿತ್ತು.
ಇದಕ್ಕೆ ಪುಷ್ಟಿಕೊಡುವಂತೆ ದೆಹಲಿಯಲ್ಲಿ ಪದ್ಮಪ್ರಿಯಾ ಇರುವಿಕೆ ಖಾತ್ರಿ ಪಡೆಸಿಕೊಳ್ಳಲು ಆಕೆ ಇದ್ದ ರೂಮ್ ಬಾಗಿಲು ತೆಗೆದಾಗ ಪದ್ಮಪ್ರಿಯಾ ತಮ್ಮ, ರಘುಪತಿ ಜೊತೆ ಮಾಜಿ ಶಾಸಕ ಸುನಿಲ್ ಇದ್ದರು ಎಂಬುದು ದಾಖಲಾಗಿದೆ.
ಆದರೆ, ನಾನಾ ಕಾರಣಗಳಿಂದ ಪ್ರಕರಣ ಮುಚ್ಚಿ ಹೋದ ಮೇಲೆ ಪದ್ಮಪ್ರಿಯಾ ಕರೆ ಮಾಡಿದ್ದು ಮಾಜಿ ಶಾಸಕ ಸುನಿಲ್ ಅವರಿಗೆ ಎಂಬುದು ಎಲ್ಲೂ ಸ್ಪಷ್ಟವಾಗಿ ಉಲ್ಲೇಖವಾಗಿರಲಿಲ್ಲ. ಆದರೆ, ಆರೋಪ ಮಾತ್ರ ಹಾಗೆ ಉಳಿದುಕೊಂಡಿತು.
ಇದನ್ನೇ ದಾಳವಾಗಿಸಿಕೊಂಡು ವಿಪಕ್ಷಗಳು ಸುನಿಲ್ ಕುಮಾರ್ ವಿರುದ್ಧ ದಾಳಿಗಿಳಿಯಲು ಸಜ್ಜಾಗುತ್ತಿದೆ. ಸಿಟಿ ರವಿ ಜೊತೆ ಸೇರಿ ಹಿಂದೂ ಜಾಗೃತಿ ಮೂಡಿಸಿದ್ದ ಕಾರ್ಕಳ ಯುವ ನೇತಾರ ನಂತರ ತಣ್ಣಗಾಗಿದ್ದು ಏಕೆ ಎಂಬುದು ಯಕ್ಷ ಪ್ರಶ್ನೆಯಾಗೇ ಉಳಿದಿದೆ.
ಭೂಹಗರಣದಲ್ಲಿ ಸಿಲುಕಿರುವ ಸುನಿಲ್ ಕೈ ಹಿಡಿಯುವವರು ಯಾರು? ಮುಂದೆ ಓದಿ...











Click it and Unblock the Notifications