ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏರ್ ಟೆಲ್ ವ್ಯಾಲೆಟ್ ಗೆ ಇನ್ಫೋಸಿಸ್ ತಂತ್ರಾಂಶ

By Mahesh
|
Google Oneindia Kannada News

Airtel Infosys venture
ಬೆಂಗಳೂರು, ಫೆ.28: ದೇಶದ ಪ್ರಮುಖ ಟೆಲಿಕಾಂ ಸಂಸ್ಥೆ ಭಾರ್ತಿ ಏರ್ ಟೆಲ್ ತನ್ನ 'ಮೊಬೈಲ್ ವ್ಯಾಲೆಟ್' ಸೇವೆ ನಿರ್ವಹಣೆಗೆ ಐಟಿ ದಿಗ್ಗಜ ಇನ್ಫೋಸಿಸ್ ಸಂಸ್ಥೆಯನ್ನು ಆಯ್ಕೆ ಮಾಡಿಕೊಂಡಿದೆ.

ನಮ್ಮ ಮೊಬೈಲ್ ವ್ಯಾಲೆಟ್ ಸೇವೆ ಒದಗಿಸಲು ಬೇಕಾದ ಅಗತ್ಯ ತಾಂತ್ರಿಕ ಸೌಲಭ್ಯವನ್ನು ಒದಗಿಸುವ ಮೂಲಕ ಇನ್ಫೋಸಿಸ್ ತಾಂತ್ರಿಕ ಸಹವರ್ತಿಯಾಗಲಿದೆ.

ಏರ್ ಟೆಲ್ ಗ್ರಾಹಕರು ನಗದು ರಹಿತ ಸೇವೆ, ಹಣ ರವಾನೆ ಮುಂತಾದ ಸೇವೆಗಳನ್ನು ಮೊಬೈಲ್ ವ್ಯಾಲೆಟ್ ಮೂಲಕ ದೇಶದಾದ್ಯಂತ ಬಳಸಬಹುದಾಗಿದೆ ಎಂದು ಭಾರ್ತಿ ಸಂಸ್ಥೆ ಮುಖ್ಯ ಕಾರ್ಯ ನಿರ್ವಾಹಕ ಸಂಜಯ್ ಕಪೂರ್ ಹೇಳಿದ್ದಾರೆ.

ಇನ್ಫೋಸಿಸ್ ನ WalletEdge ಮೊಬೈಲ್ ಕಾಮರ್ಸ್ ತಂತ್ರಾಂಶ ವೇದಿಕೆ ಮೂಲಕ ಗ್ರಾಹಕರಿಗೆ ಸುರಕ್ಷಿತ ಎಂ ಕಾಮರ್ಸ್ ಸೇವೆ ಒದಗಿಸಲಾಗುವುದು. ಉದ್ಯಮ, ವಾಣಿಜ್ಯ, ರೀಟೈಲ್ ಕ್ಷೇತ್ರ ಹಾಗೂ ಇತರೆ ಗ್ರಾಹಕರಿಗೆ ವಿವಿಧ ರೀತಿಯ ಪೇಮೆಂಟ್ ಸೌಲಭ್ಯಗಳನ್ನು ಒದಗಿಸಲಾಗುವುದು.

ಏರ್ ಟೆಲ್ ಎಂ ಕಾರ್ಮಸ್ ಮೂಲಕ ಏರ್ ಟೆಲ್ ಮನಿ ಗ್ರಾಹಕರು ಬಿಲ್ ಕಟ್ಟಬಹುದು, ರೀಚಾರ್ಚ್ ಮಾಡಿಸಿಕೊಳ್ಳಬಹುದು, ಖರೀದಿ ಮಾಡಬಹುದು, ಸುಮಾರು 7,000 ಮಳಿಗೆಗಳ ಮೂಲಕ ಆನ್ ಲೈನ್ ವ್ಯವಹಾರ ಸಾಧಿಸಬಹುದು.

ಭಾರ್ತಿ ಏರ್ ಟೆಲ್ ಹಾಗೂ ಇನ್ಫೋಸಿಸ್ ಜೊತೆಗೂಡಿರುವುದರಿಂದ ಡಿಜಿಟಲ್ ಕಾಮರ್ಸ್ ಕ್ಷೇತ್ರದಲ್ಲಿ ಹೊಸ ಅಧ್ಯಾಯ ಬರೆಯಲಿದೆ ಎಂದು ಇನ್ಫೋಸಿಸ್ ನ ಸಿಎಫ್ ಒ ವಿ ಬಾಲಕೃಷ್ಣನ್ ಅಭಿಪ್ರಾಯಪಟ್ಟಿದ್ದಾರೆ.

English summary
India's leading telecom service provider Bharati Airtel has selected Bangalore based IT Major Infosys Ltd to manage its 'mobile wallet' service across the country, enabling cashless payments and money transfers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X