ಇನ್ಫಿ, ವಿಪ್ರೋದಲ್ಲಿ ಡಬ್ಬಲ್ ಶಿಫ್ಟ್ ವರ್ಕಿಂಗ್!

ಎಂಫಾಸಿಸ್ ನಲ್ಲಿ ಈಗಾಗಲೆ ಎರಡು ಪಾಳಿಯಲ್ಲಿ ಕೆಲಸ ನಡೆಯುತ್ತಿದೆ. ಬೆಳಗ್ಗೆ 7 ಇಂದ ಮಧ್ಯಾಹ್ನ 3 ವರೆಗೂ ಮೊದಲ ಪಾಳಿ ಹಾಗೂ ಸಂಜೆ 5 ರಿಂದ ಮಧ್ಯರಾತ್ರಿ 1ರವರೆಗೆ ಇನ್ನೊಂದು ಪಾಳಿಯಲ್ಲಿ ಕೆಲಸ ನಡೆಸಲಾಗುತ್ತಿದೆ.
ಭಾರತದಲ್ಲಿ 36,000 ಸಿಬ್ಬಂದಿಗಳಲ್ಲಿ ಶೇ.20 ಮಂದಿ ಈ ರೀತಿ ಎರಡು ಪಾಳಿಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈ ರೀತ ವ್ಯವಸ್ಥೆಯಿಂದ ಕಾರ್ಯಕಾರಿ ವೆಚ್ಚ ಕಡಿಮೆ ಮಾಡಿ ಕಾರ್ಯಕ್ಷಮತೆ ಹೆಚ್ಚಿಸಬಹುದು ಎಂದು ಕಂಪನಿಗಳು ಹೇಳಿದೆ.
ಐಟಿ ಕಂಪನಿಗಳು ಕಾರ್ಯಕಾರಿ ವೆಚ್ಚ(ಸಂಬಳ ಮತ್ತು ತರಬೇತಿ ಸೇರಿ)ಕ್ಕೆ ಶೇ.64ರಷ್ಟು ಹಣ, ರಿಯಲ್ ಎಸ್ಟೇಟ್ ಗೆ ಶೇ.24, ತಂತ್ರಜ್ಞಾನ ಮತ್ತು ಸಂವಹನಕ್ಕೆ ಶೇ.12ರಷ್ಟು ಹಣ ವ್ಯಯಿಸುತ್ತಿದೆ.
ಡಬ್ಬಲ್ ಶಿಫ್ಟ್ ವ್ಯವಸ್ಥೆಯಲ್ಲಿ ಉದ್ಯೋಗಿಗಳು ತಮಗಿಷ್ಟವಾದ ಶಿಫ್ಟ್ ಆಯ್ಕೆ ಮಾಡುವ ಅವಕಾಶವೂ ಇರುವುದರಿಂದ ಉದ್ಯೋಗಿಗಳು ಈ ಹೊಸ ವ್ಯವಸ್ಥೆಗೆ ಒಗ್ಗಿಕೊಂಡಿದ್ದಾರೆ.












Click it and Unblock the Notifications