ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಎಸ್‌ವೈ, ಅರುಣಾದೇವಿ ವಿರುದ್ಧ ಎಫ್ಐಆರ್ ದಾಖಲು

By Prasad
|
Google Oneindia Kannada News

Aruna Devi and Yeddyurappa
ಶಿವಮೊಗ್ಗ, ಫೆ. 25 : ಶಿವಮೊಗ್ಗದಲ್ಲಿ ಕರ್ನಾಟಕ ಹೌಸಿಂಗ್ ಬೋರ್ಡ್‌ನ ನಾಲ್ಕು ನಿವೇಶನಗಳನ್ನು ಅಕ್ರಮವಾಗಿ ಪಡೆದಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ಅವರ ಮಗಳು ಅರುಣಾದೇವಿ ಸೇರಿದಂತೆ 8 ಜನರ ವಿರುದ್ಧ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ಶನಿವಾರ ಎಫ್ಐಆರ್ ದಾಖಲಾಗಿದೆ.

ಭಾರತೀಯ ದಂಡ ಸಂಹಿತೆಯ ಸೆಕ್ಷನ್ 420, 120(ಬಿ) ಮತ್ತು ಭ್ರಷ್ಟಾಚಾರ ನಿಗ್ರಹ ಕಾಯ್ದೆಯ 13(1)(ಡಿ) ಅಡಿಗಳಲ್ಲಿ ವಂಚನೆ ಮಾಡಿದ ಮತ್ತು ನಿವೇಶನ ಪಡೆಯಲು ಸಂಚು ಹೂಡಿದ ಆರೋಪದ ಮೇಲೆ ಕೇಸನ್ನು ಹಾಕಲಾಗಿದೆ. ಪತ್ರಕರ್ತರ ಕೋಟಾದಡಿ ತಮ್ಮ ಸಂಸ್ಥೆಯಲ್ಲಿಯೇ ಕೆಲಸ ಮಾಡುತ್ತಿರುವ ಶಿವಶಂಕರ, ಮಂಜುನಾಥ, ಕೃಷ್ಣ ಮತ್ತು ಸಂದೇಶ ಗೌಡ ಅವರ ಹೆಸರಿನಲ್ಲಿ ಅರುಣಾ ಅವರು ನಿವೇಶನ ಪಡೆದಿದ್ದರು ಎಂದು ವಕೀಲ ವಿನೋದ್ ಎಂಬುವವರು ಈ ದೂರನ್ನು ನ್ಯಾಯಾಲಯದಲ್ಲಿ ದಾಖಲಿಸಿದ್ದರು.

ಈ ನಾಲ್ವರು ಪತ್ರಕರ್ತರು ಎಂದು ಅಂದು ಉಪ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಅವರು ಕರ್ನಾಟಕ ಗೃಹ ಮಂಡಳಿಗೆ ಶಿಫಾರಸು ಪತ್ರ ಸಲ್ಲಿಸಿದ್ದರು ಎಂದು ದೂರಲಾಗಿದೆ. ಈ ಪ್ರಕರಣದಲ್ಲಿ ಯಡಿಯೂರಪ್ಪ ಮೊದಲನೇ ಆರೋಪಿಯಾದರೆ, ಅವರ ಮಗಳು ಅರುಣಾದೇವಿ ಎರಡನೇ ಆರೋಪಿಯಾಗಿದ್ದಾರೆ. ಇದರಲ್ಲಿ ಭಾಗಿಯಾಗಿರುವ ಕೆಎಚ್‌ಬಿ ಆಯುಕ್ತ ದ್ಯಾಬೇರಿ ಅವರೂ ಆರೋಪಿಯಾಗಿದ್ದಾರೆ.

ದೂರನ್ನು ದಾಖಲಿಸಿಕೊಂಡಿದ್ದ ನ್ಯಾಯಮೂರ್ತಿ ಮಹಾಲಕ್ಷ್ಮಿ ನೇರಳೆ ಅವರು, ತನಿಖೆ ನಡೆಸಿ ಮಾರ್ಚ್ 14ರೊಳಗೆ ವರದಿಯನ್ನು ಸಲ್ಲಿಸುವಂತೆ ಲೋಕಾಯುಕ್ತ ಪೊಲೀಸರಿಗೆ ಆದೇಶಿಸಿದ್ದರು. ಕರ್ನಾಟಕದಲ್ಲಿ ಯಡಿಯೂರಪ್ಪ ಅವರು ಅಧಿಕಾರವನ್ನು ಮರಳಿ ಪಡೆಯಲು ಹರಸಾಹಸ ಪಡುತ್ತಿರುವ ಹಂತದಲ್ಲಿಯೇ ಎಫ್ಐಆರ್ ದಾಖಲಾಗಿರುವುದು ಬೇಸಿಗೆಯಲ್ಲೂ ಬರಸಿಡಿಲು ಬಡಿದಂತಾಗಿದೆ.

English summary
First information report (FIR) has been filed by lokayukta police against BS Yeddyurappa, his daughter Aruna Devi and 6 others with respect to alleged land grabbing of 4 sites, under journalists' quota in Karnataka housing board, Shivamogga.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X