ತಿಪಟೂರಿನಲ್ಲಿ ಪ್ಯಾರ್‌ಗೆ ಆಗ್ಬಿಟ್ಟೈತೆ; ಲವ್ ಜಿಹಾದ್ ಶಂಕೆ

Tumkur District News
ತಿಪಟೂರು, ಫೆ.23: ತಿಪಟೂರಿನಲ್ಲಿ ಪ್ಯಾರ್‌ಗೆ ಆಗ್ಬಿಟ್ಟೈತೆ. ಮುಸ್ಲಿಂ ಹುಡುಗನೊಬ್ಬ ಹಿಂದು ಯುವತಿಯನ್ನು ಕರೆದುಕೊಂಡು ಹೋಗಿ ಮದುವೆಯಾಗಿರುವ ಘಟನೆ ತುಮಕೂರು ಜಿಲ್ಲೆಯ ತಿಪಟೂರಿನಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಘಟನೆಯ ವಿವರಗಳು ಹೀಗಿವೆ.

ತಿಪಟೂರಿನ ನಿವಾಸಿಯಾದ ಪ್ರಕಾಶ್ ಎಂಬುವವರ ಪುತ್ರಿ ಕಾವ್ಯಶ್ರೀ(19) ತನ್ನ ಮೊಬೈಲನ್ನು ರಿಪೇರಿಗಾಗಿ ಇರ್ಫಾನ್‌ಗೆ ಕೊಟ್ಟಿದ್ದರು. ಮೊಬೈಲ್ ರಿಪೇರಿ ಮಾಡುವ ಇರ್ಫಾನ್ ಆಕೆಯ ಮೊಬೈಲ್ ಸಂಖ್ಯೆಯನ್ನು ಕದ್ದು ಪ್ರತಿನಿತ್ಯ ಕಾವ್ಯಾಗೆ ಎಸ್‌ಎಂಎಸ್ ಮಾಡುತ್ತಿದ್ದ ಎನ್ನಲಾಗಿದೆ. ಕಡೆಗೆ ಇವರಿಬ್ಬರೂ ಫೆ.16ರಂದು ಪರಾರಿಯಾಗಿದ್ದಾರೆ.

ಈ ಸಂಬಂಧ ಹುಡುಗಿಯ ಮಾವಂದಿರು ಫೆ.16ರಂದು ಪೊಲೀಸರಿಗೆ ದೂರು ನೀಡಿದ್ದಾರೆ. ಆದರೆ ಇದರಿಂದ ಯಾವುದೇ ಪ್ರಯೋಜನವಾಗಿಲ್ಲ ಎಂದು ಹುಡುಗಿ ಸಂಬಂಧಿಕರು ಆರೋಪಿಸಿದ್ದಾರೆ. ಇರ್ಫಾನ್ ವಿಡಿಯೋ ಒಂದನ್ನೂ ತೆಗೆದಿದು ಸಂಬಂಧಿಕರಿಗೆ ಕಳುಹಿಸಿರುವುದಾಗಿ ಸುದ್ದಿ ಇದೆ.

ವಿಡಿಯೋದಲ್ಲಿ ಕಾವ್ಯಾ ತಾನು ಸ್ವಇಚ್ಚೆಯಿಂದ ಇರ್ಫಾನ್‍‌ನನ್ನು ಮದುವೆಯಾಗುತ್ತಿದ್ದೇನೆ. ನನಗೆ ಯಾವುದೇ ರೀತಿಯ ತೊಂದರೆಯಾದರೆ ಅದಕ್ಕೆ ನನ್ನ ತಂದೆ ತಾಯಿ ಹಾಗೂ ಮಾವಂದಿರೇ ಕಾರಣರಾಗುತ್ತಾರೆ ಎಂದು ಹೇಳಿಸಿರುವುದಾಗಿ ತಿಳಿದುಬಂದಿದೆ. ಇವರಿಬ್ಬರ ಹಲವಾರು ಫೋಟೋಗಳು, ವಿಡಿಯೋಗಳನ್ನು ಕಾವ್ಯಾರ ಸಂಬಂಧಿಕರಿಗೆ ತಲುಪಿಸಿದ್ದಾನೆ ಎನ್ನಲಾಗಿದ್ದು, ತಿಪಟೂರಿನಲ್ಲಿ ಬೂದಿ ಮುಚ್ಚಿದ ಕೆಂಡದಂತಿದೆ.

ಮಾಜಿ ಶಾಸಕರೊಬ್ಬರೂ ಪೊಲೀಸರಿಗೆ ಒತ್ತಡ ಹೇರುತ್ತಿದ್ದು, ಹುಡುಗಿ ಕಡೆಯವರ ಬೆಂಬಲಕ್ಕೆ ನಿಂತಿದ್ದಾರೆ ಎನ್ನಲಾಗಿದೆ. ಇದು ಲವ್ ಜಿಹಾದ್ ಪ್ರಕರಣವೋ ಅಥವಾ ಲೈಲಾ - ಮಜನು, ರೋಮಿಯೋ - ಜ್ಯೂಲಿಯಟ್, ಸಲೀ೦ - ಅರ್ನಾಕಲಿ, ದುಶ್ಯ೦ತ - ಶಾಕು೦ತಲೆ ಪ್ರೇಮ ಪುರಾಣವೋ ತಿಳಿದುಬಂದಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+