ನೈಸ್ ಖೇಣಿ ಪಕ್ಷಕ್ಕೆ ಗಡಿ ಭಾಗದಲ್ಲಿ ಸಿಕ್ಕಿದೆ ಚಾಲನೆ

ಗಡಿ ಭಾಗದ ಜಿಲ್ಲೆಗಳಲ್ಲಿ ಖೇಣಿ ಅವರ ಕರ್ನಾಟಕ ಮಕ್ಕಳ ಪಕ್ಷದ ಸದಸ್ಯತ್ವ ಕಾರ್ಯ ಬಿರುಸಿನಿಂದ ನಡೆಯುತ್ತಿದೆ. ಬಹುತೇಕ ಭಾರತೀಯ ಜನತಾ ಪಾರ್ಟಿಯಲ್ಲಿರುವ ಒಂದು ವರ್ಗದ ಸಕ್ರಿಯ ಸದಸ್ಯರೇ ಈ ಪಕ್ಷಕ್ಕೂ ಸದಸ್ಯರಾಗುತ್ತಿದ್ದಾರೆ ಎಂಬುದು ಕುತೂಹಲದ ವಿಷಯವಾಗಿದೆ.
ವೀರಶೈವರನ್ನು ಒಗ್ಗೂಡಿಸಲು ತಂತ್ರ: ಮೈಸೂರು-ಚಾಮರಾಜನಗರ ಜಿಲ್ಲೆಯ ಪ್ರಭಾವಿ ಲಿಂಗಾಯತ ಸಮುದಾಯದ ರಾಜಕಾರಣಿಗಳ ಮೂಲಕ ಪಕ್ಷದ ಸದಸ್ಯತ್ವಕ್ಕೆ ಚಾಲನೆ ನೀಡಲಾಗಿದೆ.
ಈಗಾಗಲೇ ಸಾವಿರಾರು ಮಂದಿ ಪಕ್ಷದ ಪ್ರಾಥಮಿಕ ಸದಸ್ಯತ್ವ ಪಡೆದುಕೊಂಡಿದ್ದಾರೆ. ಕರ್ನಾಟಕದಲ್ಲಿ ಭಾರತೀಯ ಜನತಾ ಪಾರ್ಟಿ-ಕಾಂಗ್ರೆಸ್-ಜಾತ್ಯತೀತ ಜನತಾದಳಕ್ಕೆ ಪರ್ಯಾಯವಾಗಿ ಕರ್ನಾಟಕ ಪಕ್ಷವನ್ನು ಸ್ಥಾಪಿಸಲಾಗುತ್ತಿದೆ.
ಎಲ್ಲಾ ಪ್ರಮುಖ ಪಕ್ಷದ ಬಂಡಾಯ ಸದಸ್ಯರ ಆಶ್ರಯತಾಣವಾಗಿ ಮಕ್ಕಳ ಪಕ್ಷ ರೂಪುಗೊಳ್ಳುತ್ತಿದೆ ಎನ್ನಲಾಗಿದೆ.
62 ವರ್ಷ ಹುಟ್ಟುಹಬ್ಬದಂದು ಖೇಣಿ ಹೊಸ ಪಕ್ಷದ ಬಗ್ಗೆ ಘೋಷಿಸುತ್ತಾರೆ ಎನ್ನಲಾಗಿತ್ತು. ಆದರೆ, ಈಗ ನಾಡಿನ ಪ್ರಭಾವಿ ಲಿಂಗಾಯತ ಮುಖಂಡರೊಬ್ಬರ ಹುಟ್ಟುಹಬ್ಬದಂದು ಪಕ್ಷದ ಇರುವಿಕೆ ಬಗ್ಗೆ ಮಾಹಿತಿ ಹೊರಹಾಕುವ ಸಾಧ್ಯತೆಯಿದೆ.
ಖೇಣಿ ಪಕ್ಷಕ್ಕೆ ಯಡಿಯೂರಪ್ಪ ನಾಯಕರೇ...?












Click it and Unblock the Notifications