ಯಡ್ಡಿ ಹುಟ್ಟುಹಬ್ಬದಂದು ಮಕ್ಕಳ ಪಕ್ಷ ಉದಯ?

Karnataka Makkala Party (KMP)
ಬೆಂಗಳೂರು, ಫೆ.22: ಕರ್ನಾಟಕದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹುಟ್ಟು ಹಬ್ಬದಂದೇ (ಫೆ. 27) ಕರ್ನಾಟಕ ಮಕ್ಕಳ ಪಕ್ಷಕ್ಕೆ ಅಧಿಕೃತ ಚಾಲನೆ ದೊರೆಯಲಿದೆ ಎಂದು ಇನ್ನೊಂದು ಮೂಲಗಳ ಪ್ರಕಾರ ಸುದ್ದಿ ಹಬ್ಬುತ್ತಿದೆ.

ಯಡಿಯೂರಪ್ಪ ನೇತೃತ್ವದಲ್ಲಿ ಪಕ್ಷವನ್ನು ಸಂಘಟನೆ ಮಾಡಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಸಡ್ಡು ಹೊಡೆಯಲು ಖೇಣಿ ನೇತೃತ್ವದಲ್ಲಿ ವೀರಶೈವ ಸಮುದಾಯ ಸಜ್ಜಾಗುತ್ತಿದೆ ಎಂದು ಮೂಲಗಳು ತಿಳಿಸಿದೆ.

ಲಿಂಗಾಯತ ಸಮುದಾಯಕ್ಕೆ ಸೇರಿರುವ ಖೇಣಿ ಅವರು ಬೀದರ್, ಗುಲ್ಬರ್ಗ, ಬಿಜಾಪುರ, ರಾಯಚೂರು ಮತ್ತು ಉತ್ತರ ಕರ್ನಾಟಕದಲ್ಲಿ ಉತ್ತಮ ಬೆಂಬಲ ಗಳಿಸಲು ಮಠಾಧೀಶರ ಮೊರೆ ಹೊಕ್ಕಿದ್ದಾರೆ. ಬಿಎಸ್ ಯಡಿಯೂರಪ್ಪ ಅವರಿಗೆ ಈಗಾಗಲೇ 70ಕ್ಕೂ ಅಧಿಕ ಮಠಗಳು ಬೆಂಬಲಕ್ಕೆ ನಿಂತಿದೆ ಎನ್ನಲಾಗಿದೆ.

ಫೆ. 25ಕ್ಕೆ ಚಾಮರಾಜನಗರ ಜಿಲ್ಲೆಗೆ ಅಶೋಕ್ ಖೇಣಿ ಭೇಟಿ ನೀಡುವ ಸಾಧ್ಯತೆಯಿದೆ. ಹೈದರಾಬಾದ್ ಕರ್ನಾಟಕದ ಅಭಿವೃದ್ಧಿಯನ್ನೇ ಮೂಲಮಂತ್ರವಾಗಿಸಿಕೊಂಡಿರುವ ಕೆಎಂಪಿ ಪಕ್ಷವನ್ನು ಸ್ಥಾಪಿಸಿರುವುದು ಖೇಣಿ ಅವರ ಪರಮಾಪ್ತ ನಾಗೇಂದ್ರ ಪ್ರಸಾದ್.

ಯಡಿಯೂರಪ್ಪ ಅವರ ಅಂದಿನ ಸರ್ಕಾರಕ್ಕೆ ಸಾಕಷ್ಟು ನೆರವು ನೀಡಿದ್ದ ಖೇಣಿ ಅವರ ಉಪಕಾರ ಸ್ಮರಿಸಿ, ಯಡಿಯೂರಪ್ಪ ಅವರು ಖೇಣಿಗೆ ಬೆಂಬಲ ನೀಡುವ ಸಾಧ್ಯತೆಯಿದೆ. ಆದರೆ, ಬಿಜೆಪಿ ತೊರೆಯುವ ಬಗ್ಗೆ ಇನ್ನೂ ಬಿಎಸ್ ವೈ ಬಣ ಸ್ಪಷ್ಟ ಸೂಚನೆ ನೀಡಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+