ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾನೇ ಟಿಕೆಟ್ ಬೇಡ ಎಂದೆ ಎಂದು ಜನಾರ್ದನ ಪೂಜಾರಿ

By Mahesh
|
Google Oneindia Kannada News

Janardhan Poojary
ಉಡುಪಿ, ಫೆ.21: ಉಡುಪಿ-ಚಿಕ್ಕಮಗಳೂರು ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಎದುರಿಸಲು ಜಯಪ್ರಕಾಶ್ ಹೆಗ್ಡೆ ಅವರು ಸಮರ್ಥರಿದ್ದರೂ, ಈ ಬಾರಿ ಹಳೆ ಹುಲಿಯನ್ನು ಕಣಕ್ಕೆ ಬಿಡಲು ಹೈಕಮಾಂಡ್ ಚಿಂತಿಸಿತ್ತು ಎನ್ನಲಾಗಿದೆ.

ಸದಾನಂದ ಗೌಡರ ವಿರುದ್ಧ 2009ರ ಲೋಕಕಸಭೆ ಚುನಾವಣೆಯಲ್ಲಿ ಕೆ ಜಯಪ್ರಕಾಶ್ ಹೆಗ್ಡೆ 27,018 ಮತಗಳ ಅಂತರದಿಂದ ಸೋತಿದ್ದರು. ಆಗ ಡೀವಿಗೆ 4,01,441 ಮತ ಮತ್ತು ಹೆಗ್ಡೆಗೆ 3,74,423 ಮತಗಳು ಬಿದ್ದಿತ್ತು. ಆದ್ದರಿಂದ ಈಗಲೂ ಕ್ಷೇತ್ರದಲ್ಲಿ ಬಿಜೆಪಿಗೆ ಹೆಗ್ಡೆ ಪ್ರಬಲ ಸ್ಪರ್ಧಿಯಾಗಿ ಹೊರಹೊಮ್ಮಿದ್ದರು.

ಸೋನಿಯಾಜಿಗೆ ಹೇಳಿದ್ದೇನೆ: ಆದರೆ, ಸೋನಿಯಾಜಿ ಅವರ ಆಪ್ತ ವಲಯಕ್ಕೆ ಸೇರಿರುವ ಜನಾರ್ದನ ಪೂಜಾರಿ ಅವರನ್ನು ಕಣಕ್ಕಿಳಿಸುವ ಸಾಧ್ಯತೆಯೂ ಇತ್ತು ಎನ್ನಲಾಗಿದೆ. ಇದು ಪೂಜಾರಿ ಅವರ ಮಾತಿನಿಂದ ಸ್ಪಷ್ಟಗೊಂಡಿದೆ.

ಲೋಕಸಭೆ ಉಪಚುನಾವಣೆಗೆ ಅಭ್ಯರ್ಥಿಯಾಗಿ ನಿಲ್ಲುವ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಮಾಜಿ ಕೇಂದ್ರ ಸಚಿವ ಪೂಜಾರಿ, 'ಕಾಂಗ್ರೆಸ್‌ನಿಂದ ಸ್ಪರ್ಧಿಸಲು ನಾನು ಆಕಾಂಕ್ಷಿಯಲ್ಲ ನಾನು ಸ್ಪರ್ಧಿಸುವುದೇನಿದ್ದರೂ ಮಂಗಳೂರು ಕ್ಷೇತ್ರದಲ್ಲಿ ಮಾತ್ರ' ಎಂದಿದ್ದರು.

ಈ ಬಗ್ಗೆ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದಿದ್ದೇನೆ. ಪಕ್ಷದ ಪ್ರಧಾನ ಕಾರ್ಯದರ್ಶಿ ಮಧುಸೂದನ್ ಮಿಸ್ತ್ರಿ ಹಾಗೂ ರಾಜ್ಯ ಸಭಾ ಸದಸ್ಯ ಆಸ್ಕರ್ ಫರ್ನಾಂಡೀಸ್ ಅವರಿಗೆ ನನ್ನ ನಿರ್ಧಾರದ ಬಗ್ಗೆ ಹೇಳಿದ್ದೇನೆ.

ಆದರೆ, ಪಕ್ಷ ಕಣಕ್ಕಿಳಿಸುವ ಅಭ್ಯರ್ಥಿ ಪರ ಪ್ರಚಾರದಲ್ಲಿ ಪಾಲ್ಗೊಳ್ಳುತ್ತೇನೆ. ಉಡುಪಿ ಹಾಗೂ ಚಿಕ್ಕಮಗಳೂರು ನನ್ನ ಕಾರ್ಯಕ್ಷೇತ್ರವಲ್ಲ. ಹಾಗಾಗಿ ಸ್ಪರ್ಧಿಸುತ್ತಿಲ್ಲ. ಇದರಲ್ಲಿ ಯಾರ ಒತ್ತಡವಾಗಲಿ, ತಂತ್ರವಾಗಲಿ ಇಲ್ಲ ಎಂದು ಪೂಜಾರಿ ಹೇಳಿದ್ದಾರೆ.

ಜಯಪ್ರಕಾಶ್ ಹೆಗ್ಡೆ ಅವರ ಜೊತೆ ರೇಸ್ ನಲ್ಲಿ ಉಡುಪಿ ಜಿಲ್ಲೆಯ ಮಾಜಿ ಸಂಸದ ವಿನಯ್ ಕುಮಾರ್ ಸೊರಕೆ, ವಿಧಾನಪರಿಷತ್ ಮಾಜಿ ಸಭಾಪತಿ ಬಿ ಎಲ್ ಶಂಕರ್ ಹಾಗೂ ತಾರಾದೇವಿ ಸಿದ್ದಾರ್ಥ ಅವರು ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ.

English summary
Congress leader Janardhan Poojary said he is not going to contest and KPCC will decide the candidate Udupi & Chikmagalur Lok Sabha By election. According to sources KPCC snubs Poojary and selects Jayaprakash Hegde as candidate.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X