ಕಾಂಗ್ರೆಸ್ ಅಭ್ಯರ್ಥಿಯಾಗಿ ಜಯಪ್ರಕಾಶ್ ಹೆಗ್ಡೆ ಖಚಿತ

ಉಪ ಚುನಾವಣೆ ಕುರಿತು ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಕೆಪಿಸಿಸಿಯಲ್ಲಿ ಜಯಪ್ರಕಾಶ್ ಹೆಗ್ಡೆ ಹೆಸರು ಸೂಚಿತವಾಗಿತ್ತು. ಅಧ್ಯಕ್ಷ ಜಿ. ಪರಿಮೇಶ್ವರ್, ರೈಲ್ವೆ ಖಾತೆ ಸಚಿವ ಮುನಿಯಪ್ಪ, ಸಿದ್ದರಾಮಯ್ಯ, ಮೋಟಮ್ಮ, ಸಂಸದ ಎಚ್. ವಿಶ್ವನಾಥ್ ಮತ್ತಿತರರು ಹೆಗ್ಡೆ ಅವರನ್ನು ಕಣಕ್ಕಿಳಿಸಲು ನಿರ್ಧರಿಸಿದ್ದಾರೆ.
ಜಯಪ್ರಕಾಶ್ ಹೆಗ್ಡೆ ಹೆಸರು ಸೇರಿದಂತೆ ನಾಲ್ಕು ಹೆಸರುಗಳ ಪಟ್ಟಿ ಹೈಕಮಾಂಡ್‌ಗೆ ರವಾನಿಸಲಾಗಿದ್ದು, ಹೆಗ್ಡೆ ಅವರನ್ನು ಆಯ್ಕೆ ಮಾಡುವಂತೆ ಮತ್ತೊಮ್ಮೆ ಮನವಿ ಪತ್ರ ಕೂಡ ಸಲ್ಲಿಸಲಾಗಿದೆ. ಬುಧವಾರ ಅಭ್ಯರ್ಥಿಯು ಅಧಿಕೃತವಾಗಿ ಪ್ರಕಟವಾಗಲಿದ್ದು, ಹೈಕಮಾಂಡ್ ನಿಂದ ಬರುವ ಮುಚ್ಚಿದ ಲಕೋಟೆಗಾಗಿ ಎಲ್ಲರೂ ಕಾದಿದ್ದಾರೆ.
2009 ರಲ್ಲಿ ನಡೆದ ಚುನಾವಣೆಯಲ್ಲಿ ಸದಾನಂದ ಗೌಡ ಮತ್ತು ಕಾಂಗ್ರೆಸ್ ನ ಜಯಪ್ರಕಾಶ್ ಹೆಗ್ಡೆ ನಡುವೆ ತೀವ್ರ ಹಣಾಹಣಿ ನಡೆದು ಗೌಡ್ರು 27ಸಾವಿರ ಮತಗಳಿಂದ ಜಯದ ನಗೆ ಬೀರಿದ್ದರು.












Click it and Unblock the Notifications