ಗೋವಾ : ಮಾಪುಸಾ ನದಿಗೆ ಬಸ್ ಉರುಳಿ 7 ಸಾವು

ಅಲ್ಡೋನಾ ಬಳಿ ಶನಿವಾರ(ಫೆ.18) ನಡೆದ ದುರಂತದ ನಂತರ ಪಣಜಿಯಲ್ಲಿ ಶೋಕಾಚರಣೆ ಆಚರಿಸಲು ನಿರ್ಧರಿಸಲಾಗಿದೆ. ಹೀಗಾಗಿ ಈ ಬಾರಿ 'ಗೋವಾ ಕಾರ್ನಿವಲ್' ಸದ್ಯಕ್ಕೆ ನಡೆಸುತ್ತಿಲ್ಲ. ಇತರೆ ನಗರಗಳಲ್ಲೂ ಶೋಕಾಚರಣೆಗೆ ಕರೆ ನೀಡಲಾಗಿದೆ. ಮೃತರ ಕುಟುಂಬಕ್ಕೆ 2 ಲಕ್ಷ ರು ಪರಿಹಾರ ನೀಡಲಾಗುವುದು ಎಂದು ಕಾಮತ್ ಹೇಳಿದ್ದಾರೆ.
ಸುಮಾರು 7 ಶವಗಳನ್ನು ಹೊರ ತೆಗೆಯಲಾಗಿದ್ದು ಅದರಲ್ಲಿ ನಾಲ್ವರು ಶಾಲಾ ವಿದ್ಯಾರ್ಥಿಗಳು ಎಂದು ತಿಳಿದು ಬಂದಿದೆ. ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆಗಳಿದೆ.
ಬಸ್ ಕಂಡಕ್ಟರ್ ಹಾಗೂ ಚಾಲಕ ಇಬ್ಬರು ಅಪಾಯದಿಂದ ಪಾರಾಗಿದ್ದು, ಡೈವರ್ ರಾಜೇಶ್ ಚಂದ್ರಕಾತ್ ನಾಯಕ್ ನನ್ನು ಬಂಧಿಸಲಾಗಿದೆ. ಬ್ರೇಕ್ ವೈಫಲ್ಯದಿಂದ ವಾಹನ ನಿಯಂತ್ರಣ ತಪ್ಪಿತು ಎಂದು ನಾಯಕ್ ತಪ್ಪೊಪ್ಪಿಗೆ ನೀಡಿದ್ದಾನೆ ಎಂದು ಡಿಐಜಿ ರವೀಂದ್ರ ಯಾದವ್ ಹೇಳಿದ್ದಾರೆ.












Click it and Unblock the Notifications