ಹೈದರಾಬಾದ್ ವಿದ್ಯಾರಣ್ಯ ಶಾಲೆಯಲ್ಲಿ ಅನಂತ ನಿಧಿ ಪತ್ತೆ!

ಇಲ್ಲಿ ಅಂದಾಜು 20,000 ಕೋಟಿ ರುಪಾಯಿ ಮೌಲ್ಯದ ಸಂಪತ್ತು ಇರಬಹುದು ಎಂದು ಈಗಾಗಲೇ ಅಂದಾಜಿಸಲಾಗಿದೆ. ತಿರುವನಂತಪುರದ ಅನಂತ ಪದ್ಮನಾಭ ಸ್ವಾಮಿ ದೇಗುಲ ಕಳೆದ ಜೂನ್ ತಿಂಗಳಲ್ಲಿ 'ಅನಂತ ಸಂಪತ್ತು' ಪತ್ತೆಯಾಗಿದ್ದು ಇಡೀ ಜಗತ್ತಿಗೆ ತಿಳಿದ ವಿಷಯ.
ಖಂಡಿತ ಈ ಪುರಾತನ ಶಾಲೆಯ ಕೆಳಗೆ ಸುರಂಗ ಮಾರ್ಗವೊಂದಿದೆ. ಅದು ಈ ಅನಂತ ಸಂಪತ್ತು ಇರುವ ಜಾಗಕ್ಕೆ ದಾರಿಯಾಗಿದೆ ಎಂದು ಕೇಂದ್ರ ಸರಕಾರಿ ಸ್ವಾಮ್ಯದ ಕೋಲ್ ಇಂಡಿಯಾ ಲಿಮಿಟೆಡ್ ನ ಮಾನವ ಸಂಪನ್ಮೂಲ ವಿಭಾಗದ ಪ್ರಧಾನ ವ್ಯವಸ್ಥಾಪಕ ಟಿ.ಬಿ. ರಾಜು ಅವರು ನೇತೃತ್ವದ 9 ನಾಗರಿಕರು ಕೋರ್ಟಿನಲ್ಲಿ ಅಫಿಡವಿಟ್ ಸಲ್ಲಿಸಿದ್ದಾರೆ. ಅದರಂತೆ ಸುಮಾರು 2 ಗಂಟೆ ಹಿಂದೆ ಶಾಲೆಯಡಿ ಸುರಂಗ ಮಾರ್ಗ ಕೊರೆಯುವ ಕಾರ್ಯ ಆರಂಭವಾಗಿದೆ.
2 ತಿಂಗಳ ಹಿಂದೆಯೇ : 2 ತಿಂಗಳ ಹಿಂದೆಯೇ ಈ ಬಗ್ಗೆ ಮಾಹಿತಿ ಸಿಕ್ಕಿತು. ಆದರೆ ಅಷ್ಟೊಂದು ಭಾರಿ ಮೊತ್ತದ ಸಂಪತ್ತಿನ ಬಗ್ಗೆ ಜಾಗರೂಕತೆ ವಹಿಸುವುದು ಅನಿವಾರ್ಯವಾಯಿತು. ಅದಕ್ಕಿಂತ ಹೆಚ್ಚಾಗಿ ಮಾಫಿಯಾ ಭಯ ಕಾಡತೊಡಗಿತು. ಆದ್ದರಿಂದ ಸಕಲ ಸಿದ್ಧತೆ ಮಾಡಿಕೊಂಡು ಇದನ್ನು ಬಹಿರಂಗಪಡಿಸಬೇಕಾಯಿತು ಎಂದು ರಾಜು ಹೇಳಿದ್ದಾರೆ.
ಅಫಿಡವಿಟ್ ಆಧಾರದ ಮೇಲೆ ಆರ್ಕಿಯಾಲಜಿ ಡಿಪಾರ್ಟಮೆಂಟಿನ ಅಧಿಕಾರಿಗಳ ತಂಡ ಶನಿವಾರ (ಫೆ. 18) ಸಾಯಂಕಾಲ ಸ್ಥಳ ಪರೀಕ್ಷೆ ನಡೆಸಿದರು. ಬಳಿಕ, ಮಲ್ಲೇಶ ಎಂಬ ವ್ಯಕ್ತಿಯನ್ನು ಗೈಡ್ ಆಗಿಟ್ಟುಕೊಂಡು ಭಾನುವಾರ ಸುರಂಗ ಕೊರೆಯಲು ನಿರ್ಧರಿಸಿದರು. ಈ ಯಾರು ಮಲ್ಲೇಶ ಮುಂದೆ ಓದಿ....












Click it and Unblock the Notifications