ಮೋದಿ ವಿಚಾರಣೆಗೆ ಸಿಬಿಐ ಲಕ್ಷ್ಮಿನಾರಾಯಣ

cbi-vv-lakshminarayana-to-handle-sohrab-encounter-case
ಹೈದರಾಬಾದ್, ಫೆ.16: ಅಪರಾಧಿಗಳಿಗೆ ಸಿಂಹಸ್ವಪ್ನವಾಗಿ ವಿಜೃಂಭಿಸುತ್ತಿರುವ ಸಿಬಿಐನ ಖಡಕ್ ಅಧಿಕಾರಿ ವಿವಿ ಲಕ್ಷ್ಮಿನಾರಾಯಣ ಅವರ ಹೆಗಲಿಗೆ ಮತ್ತೊಂದು 'ಹೈ ಪ್ರೊಫೈಲ್' ಫೈಲ್ ನೀಡಲಾಗಿದೆ. 2005ರಲ್ಲಿ ತೀವ್ರ ಸಂಚಲನ ಉಂಟುಮಾಡಿದ್ದ ಷೊಹ್ರಾಬುದ್ದೀನ್ ಶೇಕ್ ನಕಲಿ ಎನಕೌಂಟರ್ ಪ್ರಕರಣದ ತನಿಖೆ ನಡೆಸುವಂತೆ ಆಂಧ್ರದ ಸಿಬಿಐ ಜಂಟಿ ನಿರ್ದೇಶಕರಾಗಿರುವ ಲಕ್ಷ್ಮಿನಾರಾಯಣಗೆ ದೆಹಲಿ ಸಿಬಿಐ ಆದೇಶಿಸಿದೆ.

ಪ್ರಕರಣವು ರಾಜ್ಯದಲ್ಲೂ ಹಾದುಹೋಗಿರುವುದರಿಂದ ಲಕ್ಷ್ಮಿನಾರಾಯಣ ಮತ್ತಷ್ಟು ಸವಿಸ್ತಾರ ತನಿಖೆ ಕೈಗೊಳ್ಳಬಹುದೆಂಬ ನಿರೀಕ್ಷೆಯೂ ಇದೆ. ಗುಜರಾತಿನ ಮುಖ್ಯಮಂತ್ರಿ ನರೇಂದ್ರ ಮೋದಿ ಆಣತಿ ಮೇರೆಗೆ ಷೊಹ್ರಾಬುದ್ದೀನ್ ಶೇಕ್ ನಕಲಿ ಎನಕೌಂಟರ್ ನಡೆದಿತ್ತು ಎಂಬುದು ಪ್ರಕರಣದ ತಿರುಳು.

ಷೊಹ್ರಾಬುದ್ದೀನ್ ಎನಕೌಂಟರ್ ಪ್ರಕರಣದ ತನಿಖೆಯನ್ನು ಚುರುಕುಗೊಳಿಸುವಂತೆ ಸುಪ್ರೀಂಕೋರ್ಟ್ ಇತ್ತೀಚೆಗೆ ಸಿಬಿಐಗೆ ತಾಕೀತು ಮಾಡಿತ್ತು. ಈ ಹಿನ್ನೆಲೆಯಲ್ಲಿ ಗುಜರಾತ್ ಸಿಬಿಐ ಆಂಧ್ರದ ಘಟಾನುಘಟಿ ಐಪಿಎಸ್ ಗಳನ್ನು ಒಂದೇ ಸಮನೆ ವಿಚಾರಣೆಗೊಳಪಡಿಸಿದೆ. ಮೊನ್ನೆ ಮಾಜಿ ಡಿಜಿಪಿ ಕೆ. ಅರವಿಂದರಾವ್ ಅವರನ್ನು ಕೋಠಿಯಲ್ಲಿರುವ ಸ್ಥಳೀಯ ಸಿಬಿಐ ಕಚೇರಿಗೆ ಕರೆಯಿಸಿಕೊಂಡು, ವಿಚಾರಣೆಗೊಳಪಡಿಸಿತ್ತು.

ರಾಜ್ಯ ಗುಪ್ತಚರ ದಳದ ಡಿಐಜಿ ಎನ್ ಬಾಲಸುಬ್ರಮಣ್ಯಂ ಮೇಲೆ ಸಿಬಿಐ ಕಣ್ಣುಬಿದ್ದಿದೆ. ಪ್ರಕರಣ ನಡೆದಾಗ ಗುಜರಾತ್ ಎಟಿಎಸ್ ತಂಡದ ಎಸ್ಪಿ ಆಗಿದ್ದ ರಾಜ್ ಕುಮಾರ್ ಪಾಂಡಿಯನ್ ಗೆ ಹೈದರಾಬಾದಿನಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಿದ್ದ ಗುರುತರ ಆರೋಪ ಬಾಲಸುಬ್ರಮಣ್ಯಂ ಮೇಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+