ಆರ್ ಎನ್ ಶೆಟ್ಟಿ ಸಂಸ್ಥೆ, ಮನೆ ಮೇಲೆ ಐಟಿ ದಾಳಿ

ರಾಮನಾಗಪ್ಪಶೆಟ್ಟಿ ಒಡೆತನದ ಹುಬ್ಬಳ್ಳಿ ಹಾಗೂ ಬೆಂಗಳೂರಿನಲ್ಲಿರುವ ಕಚೇರಿ ಹಾಗೂ ಮನೆಗಳ ಮೇಲೆ ಐಟಿ ಇಲಾಖೆ ದಾಳಿ ನಡೆಸಿ ಅಪಾರ ಪ್ರಮಾಣದ ದಾಖಲೆ ವಶಪಡಿಸಿಕೊಂಡಿದ್ದಾರೆ.
ಆರ್ ಎನ್ ಎಸ್ ಒಡೆತನದ ಮೋಟಾರ್ಸ್ ಕಂಪನಿ, ಫೈನಾನ್ಸ್ ಕಂಪನಿ ಸೇರಿದಂತೆ 20 ಕಡೆ ದಾಳಿ ನಡೆಸಲಾಗಿದೆ. ಕಳೆದ ವಾರ ರೇಸ್ ಕೋರ್ಸ್ ಬುಕ್ಕಿಗಳ ಮೇಲೆ ನಡೆದ ಐಟಿ ದಾಳಿಗೂ ಈ ದಾಳಿಗೂ ಸಂಪರ್ಕ ಇರುವ ಸಾಧ್ಯತೆಯಿದೆ ಎನ್ನಲಾಗಿದೆ.
ಆಲ್ಲದೆ 550 ಕೋಟಿ ರು ಭದ್ರಾ ಮೇಲ್ದಂಡೆ ಯೋಜನೆ ಅಕ್ರಮಕ್ಕೆ ಸಂಬಂಧಿಸಿದಂತೆ ಜೆಡಿಎಸ್ ವಕ್ತಾರ ವೈಎಸ್ ವಿ ದತ್ತಾ ಅವರು ನೀಡಿರುವ ದೂರಿನಲ್ಲಿ ಯಡಿಯೂರಪ್ಪ ಅವರಿಂದ ಫಲಾನುಭವ ಪಡೆದವರಲ್ಲಿ ಆರ್ ಎನ್ ಎಸ್ ಸಂಸ್ಥೆ ಕೂಡಾ ಸೇರಿದೆ. ಸುಮಾರು 13 ಕೋಟಿ ರು ನೀಡಿ ಆರ್ ಎನ್ ಎಸ್ ಇನ್ಫ್ರಾ ಸಂಸ್ಥೆ ಗುತ್ತಿಗೆ ಪಡೆದಿದ್ದು ಎಂದು ಆರೋಪಿಸಲಾಗಿದೆ.












Click it and Unblock the Notifications