ಆಲ್ಕೋಹಾಲ್ ಪರೀಕ್ಷೆ ಮಹಿಳಾ ಸವಾರರಿಗೂ ಕಡ್ಡಾಯ

ಹೋಲ್ಡ್ ಆನ್. ಇದು ಸಾಂಸ್ಕೃತಿಕ ರಾಜಧಾನಿ ಮೈಸೂರಿಗೆ ಮಾತ್ರ ಅನ್ವಯವಾಗಲಿದೆ. ಇನ್ನು ರಾಜ್ಯದ ರಾಜಧಾನಿಯಲ್ಲಿ ಇದು ಜಾರಿಯಾಗುವುದು ಯಾವಾಗ? ಮೊನ್ನೆ ಕೆಎಸ್ ಸಿಎ ಸ್ಟೇಡಿಯಂ ಸಮೀಪ ರಾದ್ಧಾಂತವೆಬ್ಬಿಸಿದ ಅನುಜಾ ಪಾಂಡೆ ಪ್ರಕರಣದ ನಂತವೂ ಬೆಂಗಳೂರು ಪೊಲೀಸರು ಪುರುಷ ಸವಾರರ ಮೂತಿಗೆ ಮಾತ್ರವೇ Breathalyzer ಇಡುವುದರಲ್ಲಿ ಅರ್ಥವಿಲ್ಲ. ಏಕೆಂದರೆ ಮದ್ಯ ಪಾನ ಸಂಯಮ ಮಂಡಳಿ ಅಧ್ಯಕ್ಷ ಸಚ್ಚಿದಾನಂದ ಹೆಗ್ಡೆ ಅವರ ಪ್ರಕಾರ ನಗರ ಪ್ರದೇಶದಲ್ಲಿ ಶೇ. 20ರಷ್ಟು ವಾಹನ ಸವಾರರು ಮಹಿಳೆಯರು.
ಮೈಸೂರು ಟ್ರಾಫಿಕ್ ಪೊಲೀಸ್ ಆಯುಕ್ತ ಶಂಕರೇಗೌಡ ಹೇಳುವಂತೆ Breathalyzer ಪರೀಕ್ಷೆಯನ್ನು ಮಹಿಳಾ ಪೇದೆಯೇ ಮಾಡಬೇಕು ಅಂತೇನೂ ಇಲ್ಲ. ಮುಖ್ಯವಾಗಿ ಅವರನ್ನು ಪರೀಕ್ಷೆಗೊಳಪಡಿಸಲು ಪೊಲೀಸರು ಮನಸ್ಸು ಮಾಡಬೇಕಷ್ಟೇ. ಆದರೂ ಅನಗತ್ಯ ಕಾನೂನು ಸಮಸ್ಯೆಗಳಿಂದ ದೂರವಿರಲು ಮಹಿಳಾ ಪೇದೆ ಸ್ಥಳದಲ್ಲಿರುವುದು ಒಳಿತು.
Motor Vehicles Act Sec 185 ಪ್ರಕಾರ ಯಾವುದೇ ವಾಹನ ಸವಾರರ ರಕ್ತದಲ್ಲಿ 100 ಮಿ.ಲೀ. ಗೆ 30 ಮಿ. ಗ್ರಾಂ. ಆಲ್ಕೋಹಾಲ್ ಇದ್ದರೆ ಅಂತಹ ವ್ಯಕ್ತಿ ವಾಹನ ಚಾಲನೆ ಮೇಲೆ ನಿಯಂತ್ರಣ ಹೊಂದಲು ಸಾಧ್ಯವಾಗುವುದಿಲ್ಲ. ಅಂತಹ ವ್ಯಕ್ತಿಯನ್ನು ಶಿಕ್ಷೆಗೆ ಗುರಿಪಡಿಸಬಹುದು. ಮೊದಲ ಬಾರಿ ಸಿಕ್ಕಿ ಬಿದ್ದಲ್ಲಿ, ಆರು ತಿಂಗಳ ಜೈಲುವಾಸ ಅಥವಾ 2,000 ರುಪಾಯಿ ದಂಡ ಅಥವಾ ಇವೆರಡೂ ಸಹ ಆಗಬಹುದು. ಈ ಅಪರಾಧ ಪುನರಾವರ್ತನೆಯಾದಲ್ಲಿ 2 ವರ್ಷದವರೆಗೂ ಜೈಲು ಶಿಕ್ಷೆ ವಿಧಿಸಬಹುದು.












Click it and Unblock the Notifications