ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಲ್ಕ್ ಬೋರ್ಡ್ ಬಳಿ ಟೆಕ್ಕಿಯ ಅವಾಂತರ

By Srinath
|
Google Oneindia Kannada News

bng-techie-rams-car-into-constable-silk-board-junction
ಬೆಂಗಳೂರು,ಫೆ.15: ಹೊಸೂರು ರಸ್ತೆಯಲ್ಲಿ ಸಿಲ್ಕ್ ಬೋರ್ಡ್ ಜಂಕ್ಷನ್ ಸಮೀಪ ಕುಡಿದ ಅಮಲಿನಲ್ಲಿದ್ದ ಟೆಕ್ಕಿಯೊಬ್ಬ ಕರ್ತವ್ಯನಿರತ ಪೊಲೀಸ್ ಪೇದೆಯ ಮೇಲೆ ತನ್ನ ಕಾರನ್ನು ಚಲಾಯಿಸಿ ಅವಾಂತರ ಮೆರೆದಿದ್ದಾನೆ.

ಮಂಗಳವಾರ ಬೆಳಗಿನ ಜಾವ 2 ಗಂಟೆಯಲ್ಲಿ ಈ ಘಟನೆ ನಡೆದಿದ್ದು 26 ವರ್ಷದ ಬಸವರಾಜು ತೀವ್ರವಾಗಿ ಗಾಯಗೊಂಡಿದ್ದಾರೆ. ಬೆಳಗಾವಿ ಮೂಲದ ಬಸವರಾಜು ಮಡಿವಾಳ ಪೊಲೀಸ್ ಠಾಣೆಯಲ್ಲಿ 14 ದಿನಗಳ ಹಿಂದಷ್ಟೇ ಉದ್ಯೋಗಕ್ಕೆ ಸೇರಿದ್ದರು. ಇನ್ನು ಅವಾಂತರಕ್ಕೆ ಕಾರಣೀಭೂತನಾದ ಯುವಕ ಉತ್ತರ ಪ್ರದೇಶದ ಮನು ಸ್ವಯಂಭು ತ್ರಿವೇದಿ. ವೈಟ್ ಫೀಲ್ಡ್ ಐಟಿಪಿಎಲ್ ನಲ್ಲಿರುವ ಸಾಫ್ಟ್ ವೇರ್ ಕಂಪನಿಯಲ್ಲಿ ಈತ ಪ್ರಾಜೆಕ್ಟ್ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾನೆ.

ಬಸವರಾಜ್ ಸಿಲ್ಕ್ ಬೋರ್ಡ್ ಬಳಿ ವಾನಗಳ ತಪಾಸಣೆ ಕಾರ್ಯದಲ್ಲಿ ನಿರತರಾಗಿದ್ದರು. ಆಗ ಅತಿ ವೇಗವಾಗಿ ಕಾರೊಂದು ಬರುತ್ತಿರುವುದನ್ನು ಗಮನಿಸಿದ ಅವರು ಟಾರ್ಚ್ ಬಿಟ್ಟು ಕಾರು ನಿಲ್ಲಿಸುವಂತೆ ಚಾಲಕನಿಗೆ ಸೂಚಿಸಿದ್ದಾರೆ. ಆದರೆ ಆತ ಕಾರನ್ನು ನಿಲ್ಲಿಸದೆ ಮೊದಲು ಬಸವರಾಜುಗೆ ಡಿಕ್ಕಿ ಹೊಡೆದು ನಂತರ ದೂರದಲ್ಲಿ ನಿಂತಿದ್ದ ಹೊಯ್ಸಳ ವಾಹನಕ್ಕೂ ಗುದ್ದಿದ್ದಾನೆ. ವಾಹನ ಜಖಂಗೊಂಡಿದೆ. ಬಸವರಾಜು ಹಾಸ್ಮಟ್ ಆಸ್ಪತ್ರೆಗೆ ದಾಖಲಾಗಿದ್ದಾರೆ.

English summary
A 26-year-old police constable, Basavaraju from Belgaum, attached to the Madiwala police station, was hit by a speeding car near the Silk Board junction on Hosur Road in the early hours of Tuesday (Feb14). The car driver has been identified as Manu Swayambhu Trivedi from Uttar Pradesh. Trivedi, a software professional, is working as a project manager with an IT company in ITPL, Whitefield.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X