ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಂಗಾಳದಲ್ಲಿ ಕಾಲಿಡುವುದಿಲ್ಲ ಎಂದ ಇನ್ಫಿ, ವಿಪ್ರೋ ಸಂಸ್ಥೆ

By Mahesh
|
Google Oneindia Kannada News

Infosys Wipro West Bengal
ಕೋಲ್ಕತ್ತಾ, ಫೆ.15: ಮಧ್ಯಪ್ರದೇಶದ ವಿಶೇಷ ಆರ್ಥಿಕ ವಲಯದಲ್ಲಿ 600 ಕೋಟಿ ಹೂಡಿಕೆ, 13000 ಜನ ನೇಮಕಾತಿ ಮಾಡುವುದಾಗಿ ಇನ್ಪೋಸಿಸ್ ಘೋಷಿಸಿದೆ. ವಿಪ್ರೋ ಕೂಡಾ ಭರ್ಜರಿ ಹೂಡಿಕೆ ಮೂಲಕ ಕಾಲಿಡುತ್ತಿದೆ. ಆದರೆ, ಎರಡೂ ಕಂಪನಿಗಳಿಗೆ ಪಶ್ಚಿಮ ಬಂಗಾಳದಲ್ಲಿ ಭಾರಿ ಹಿನ್ನೆಡೆ ಉಂಟಾಗಿದೆ.

ಇನ್ಫಿ ಹಾಗೂ ವಿಪ್ರೋ ಸಂಸ್ಥೆಗಳು ರಾಜರ್ ಹತ್ ಪ್ರದೇಶದಲ್ಲಿ ತಮ್ಮ ಘಟಕ ಆರಂಭಿಸುವುದಾಗಿ ಘೋಷಿಸಲಾಗಿತ್ತು. ಆದರೆ, ಆ ಪ್ರದೇಶಕ್ಕೆ ವಿಶೇಷ ಆರ್ಥಿಕ ವಲಯ ಮಾನ್ಯತೆ ನೀಡಲು ಪಶ್ಚಿಮ ಬಂಗಾಳ ಸರ್ಕಾರ ನಿರಾಕರಿಸಿದೆ.

ಎಸ್ ಇ ಜಡ್ ಸ್ಥಾನಮಾನ ದೊರೆಯುವವರೆಗೂ ಕಾಮಗಾರಿ ನಿಲ್ಲಿಸುವುದಾಗಿ ಇನ್ಫೋಸಿಸ್ ಹಾಗೂ ವಿಪ್ರೋ ಸಂಸ್ಥೆ ಹೇಳಿದೆ.

ಆದರೆ, ಈ ಮುಂಚೆ ಟಿಸಿಎಸ್ ಸಂಸ್ಥೆ ಸುಮಾರು 40 ಎಕರೆ ಭೂಮಿ ಇದೇ ಪ್ರದೇಶದಲ್ಲಿ ನೀಡಲಾಗಿತ್ತು. ಹಾಗೂ ಎಸ್ ಇ ಜಡ್ ಮಾನ್ಯತೆ ನೀಡಲಾಗಿತ್ತು. ಇದರಿಂದ ಉತ್ತೇಜನಗೊಂಡಿದ್ದ ಇನ್ಫೋಸಿಸ್ ಸಂಸ್ಥೆ ಆರು ತಿಂಗಳಲ್ಲಿ ಕಾಮಗಾರಿ ಪೂರೈಸಿ ಸಂಸ್ಥೆ ಸ್ಥಾಪಿಸುವುದಾಗಿ ಹೇಳಿಕೆ ನೀಡಿತ್ತು.

ಆದರೆ, ಈಗ ಎಸ್ ಇಜಡ್ ಮಾನ್ಯತೆ ಸಿಗದ ಹೊರತೂ ಬಂಗಾಳಕ್ಕೆ ಕಾಲಿಡುವುದಿಲ್ಲ ಎಂದು ಇನ್ಫೋಸಿಸ್ ಹಾಗೂ ವಿಪ್ರೋ ಸಂಸ್ಥೆ ಹೇಳಿದೆ.

English summary
IT-giants, Wipro and Infosys said that they wouldn't start their respective work in Rajarhat, West Bengal without being given the special economic zone (SEZ) status.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X