ಜನಾ ರೆಡ್ಡಿ ಸಾಲಿಗೆ ಸೇರಿದ ಐಎಎಸ್ ಆಚಾರ್ಯ

ಇದರೊಂದಿಗೆ ಈಗಾಗಲೇ ಓಬಳಾಪುರಂ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಜೈಲಿನಲ್ಲಿ ವಿಶೇಷ ದರ್ಜೆ ವಿಚಾರಣಾಧೀನ ಕೈದಿಯಾಗಿರುವ ಜನಾರ್ದನ ರೆಡ್ಡಿ, ಬಿವಿ ಶ್ರೀನಿವಾಸ ರೆಡ್ಡಿ, ವಿಡಿ ರಾಜಗೋಪಾಲ್ ಮತ್ತು ವೈ ಶ್ರೀಲಕ್ಷ್ಮಿ ಅವರ ಸಾಲಿಗೆ ಸೇರಿದ್ದಾರೆ.
ಪರೋಲ್ ಕೊಡೋರ್ ಇಲ್ಲ: ಈ ಮಧ್ಯೆ, ಆಂಧ್ರ ಪ್ರದೇಶದಾದ್ಯಂತದ ಜೈಲುಗಳಲ್ಲಿರುವ ಕೈದಿಗಳು ಈಗ ವಿಚಿತ್ರ ಸಮಸ್ಯೆ ಎದುರಿಸುತ್ತಿದ್ದಾರೆ. ಅವರು ಪರೋಲ್ ಮೇಲೆ ಮನೆಗೆ ಹೋಗುವಂತಿಲ್ಲ. ಏಕೆಂದರೆ, ಹಗರಣವೊಂದರಲ್ಲಿ ಆರೋಪಿಯಾಗಿರುವ ಗೃಹ ಕಾರ್ಯದರ್ಶಿ ಬಿಪಿ ಆಚಾರ್ಯ ಅವರೇ ಸ್ವತಃ ಜೈಲಿನಲ್ಲಿದ್ದಾರೆ.
ಅವರು ಎಮ್ಮಾರ್ ಹಗರಣದಲ್ಲಿ ಭಾಗಿಯಾಗಿದ್ದು, ಇದರ ತನಿಖೆಯನ್ನು ಸಿಬಿಐ ನಡೆಸುತ್ತಿದೆ. ಕೈದಿಗಳು ಪರೋಲ್ ಮೇಲೆ ಮನೆಗೆ ಹೋಗಬೇಕಾದರೆ ಗೃಹ ಕಾರ್ಯದರ್ಶಿಯ ನೆಲೆಯಲ್ಲಿ ಸಂಬಂಧಿಸಿದ ಕಡತಗಳಿಗೆ ಸಹಿ ಹಾಕಬೇಕಾದವರು ಐಎಎಸ್ ಅಧಿಕಾರಿ ಆಚಾರ್ಯ. ಆದರೆ ಅವರನ್ನು ಜ.30ರಂದು ಎಮ್ಮಾರ್ ಹಗರಣ ಸಂಬಂಧ ಬಂಧಿಸಲಾಗಿದೆ.












Click it and Unblock the Notifications