ಟಿವಿ ನಿರೂಪಕಿಯ ಮುಖಕ್ಕೆ ಬಾಯಿ ಹಾಕಿದ ನಾಯಿ
ವಾಷಿಂಗ್ಟನ್,ಫೆ.12:
ಖಾಸಗಿ ಟಿವಿ ವಾಹಿನಿಯ ನೇರ ಪ್ರಸಾರ ಕಾರ್ಯಕ್ರಮದ ಸಂದರ್ಭದಲ್ಲಿ ನಾಯಿಯೊಂದು ನಿರೂಪಕಿಯ ಮುಖವನ್ನು ಕಚ್ಚಿ ವಿರೂಪಗೊಳಿಸಿದ ಘಟನೆ ಕೊಲೊರಾಡೋದಲ್ಲಿ ವರದಿಯಾಗಿದೆ. ತೀವ್ರ ಚಳಿಯ ವಾತಾವರಣದಲ್ಲಿ, ಹೆಪ್ಪುಗಟ್ಟಿದ ಕೊಳದಿಂದ ಆ ನಾಯಿಯನ್ನು ಅಗ್ನಿಶಾಮಕ ದಳದವರು ಹೊರ ತೆಗೆದು ರಕ್ಷಿಸಿದ್ದರು. ತನ್ನಿಮಿತ್ತ, ಕಾರ್ಯಕ್ರಮದಲ್ಲಿ ಚರ್ಚೆ ನಡೆಯುತ್ತಿದ್ದಾಗ ಈ ಘಟನೆ ನಡೆದಿದೆ. id="toptextpromo">9News
ಟಿವಿ ಚಾನೆಲ್ ನಿರೂಪಕಿ ಕೈಲ್ ಡೈರ್ ಬೆಳಗಿನ ವೇಳೆಯಲ್ಲಿ ನೇರ ಪ್ರಸಾರ ಕಾರ್ಯಕ್ರಮ ನಡೆಸಿಕೊಡುವಾಗ 38.5 ಕೆಜಿ ತೂಕದ ಬಲಶಾಲಿ (ಅರ್ಜೆಂಟಿನಾ ಮ್ಯಾಸ್ಟಿಫ್) ನಾಯಿಯನ್ನು ಮುದ್ದು ಮಾಡಲು ಬಗ್ಗಿದಾಗ ಅದು ಅವರ ಮುಖವನ್ನು ಬಲವಾಗಿ ಕಚ್ಚಿದೆ. ತೀವ್ರ ಗಾಯಗೊಂಡ ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತು. ಅವರಿಗೆ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಅವರೀಗ ಗುಣಮುಖರಾಗಿದ್ದಾರೆ ಎಂದು ದಿ ಡೈಲಿ ಮೇಲ್ ವರದಿ ಮಾಡಿದೆ. ಕೈಲ್ ಡೈರ್ 15 ವರ್ಷದಿಂದ ನಿರೂಪಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಆತಂಕದ
ವಿಷಯವೆಂದರೆ ಗ್ಲೇಡಿಯೇಟರ್ ಮ್ಯಾಕ್ಸಿಮಸ್ ಎಂಬ ಈ ಶ್ವಾನಕ್ಕೆ ಅದರ ಯಜಮಾನ ಮೈಕೇಲ್ ರಾಬಿನ್ ಸನ್ ರೇಬಿಸ್ ವ್ಯಾಕ್ಸಿನೇಶನ್ ಕೊಡಿಸಿರಲಿಲ್ಲ.











Click it and Unblock the Notifications