ತಮಿಳುನಾಡು ಅಸೆಂಬ್ಲಿಯಲ್ಲಿ ಮೊಬೈಲ್ ನಿಷೇಧ?

ಕರ್ನಾಟಕ ಅಸೆಂಬ್ಲಿಯಲ್ಲಿ ನಡೆದ ಅಸಹ್ಯಕರ ಘಟನೆ ತಮಿಳುನಾಡು ಅಸೆಂಬ್ಲಿಯಲ್ಲಿ ನಡೆಯದಂತೆ ತಡೆಯಲು ಕಠಿಣ ಕ್ರಮ ಕೈಗೊಳ್ಳಲು ಜಯಲಲಿತಾ ಸರ್ಕಾರ ನಿರ್ಧರಿಸಿದೆ ಎನ್ನಲಾಗಿದೆ.
ಡಿಎಂಕೆ ನಾಯಕ ಟಿಆರ್ ಬಾಲು ಅವರ ಪುತ್ರ ಟಿಆರ್ ಬಿ ರಾಜ ಅವರು ವಿಧಾನಮಂಡಲ ಅಧಿವೇಶನವನ್ನು ಮೊಬೈಲ್ ಮೂಲಕ ಚಿತ್ರೀಕರಿಸಲು ಯತ್ನಿಸಿದ್ದರು. ಈ ಘಟನೆ ನಂತರ ಜಯಲಲಿತಾ ನೇತೃತ್ವದ ಎಐಎಡಿಎಂಕೆ ಸರ್ಕಾರ ಈ ನಿರ್ಧಾರಕ್ಕೆ ಬಂದಿದೆ ಎಂದು ಹಲವು ಮಾಧ್ಯಮಗಳು ವರದಿ ಮಾಡಿದೆ.
ಕಾನೂನಿನ ಪ್ರಕಾರ ವಿಧಾನಮಂಡಲ ಅಧಿವೇಶನದ ಸಂದರ್ಭದಲ್ಲಿ ಮೊಬೈಲ್ ಫೋನ್ ಬಳಸುವಂತಿಲ್ಲ. ಆದರೆ, ಸದನದೊಳಗೆ ಮೊಬೈಲ್ ಫೋನ್ ತೆಗೆದುಕೊಂಡು ಹೋಗಬಹುದಾಗಿದೆ. ಜಯಲಲಿತಾ ಸರ್ಕಾರ ಕೈಗೊಂಡಿರುವ ಕ್ರಮ ಇನ್ನೂ ಕರ್ನಾಟಕದ ಬಿಜೆಪಿ ಗಮನಕ್ಕೆ ಬಂದಿಲ್ಲ. ಸಚಿವತ್ರಯದ ಪರ ವಿರೋಧ ಹೇಳಿಕೆ, ತನಿಖೆಯಲ್ಲಿ ಸದಾನಂದ ಗೌಡರ ಸರ್ಕಾರ ಮುಳುಗಿದೆ.












Click it and Unblock the Notifications