ಜಯನಗರಲ್ಲಿ ಡಬಲ್ ಬ್ಯಾರಲ್ ಗನ್ ಸಿಡಿಸಿದ ಪೋರ

ಈ ಘಟನೆ ನಡೆದದ್ದು ಜಯನಗರ 9ನೇ ಬ್ಲಾಕ್‌ನ 28ನೇ ಕ್ರಾಸ್‌ನಲ್ಲಿ. ಶಾಮರಾವ್ ವಿಠಲ್ ಬ್ಯಾಂಕ್ ಎಟಿಎಂ ಕೇಂದ್ರದ ಸೆಕ್ಯುರಿಟಿ ಗಾರ್ಡ್ ಮುದ್ದಪ್ಪ ಅಜಾಗರೂಕತೆಯೇ ಇದಕ್ಕೆ ಕಾರಣವಾಗಿದೆ. ಸ್ವಲ್ಪ ಹೆಚ್ಚುಕಡಿಮೆಯಾಗಿದ್ದರೆ ರಸ್ತೆ ಅಕ್ಕಪಕ್ಕದ ಜೀವಗಳು ಹೆಣವಾಗುತ್ತಿದ್ದವು.
ಆದರೆ ಆಗಬಹುದಾದ ಭಾರಿ ದುರಂತ ತಪ್ಪಿದೆ. ಮುದ್ದಪ್ಪನ್ನು ನೋಡಲು ಪಕ್ಕದ ಮನೆಯ ಪೋರ ಅಕ್ಷಯ್ ಬಂದಿದ್ದಾನೆ. ಡಬಲ್ ಬ್ಯಾರಲ್ ಬಂದೂಕನ್ನು ಪರೀಕ್ಷಿಸಿದ್ದಾನೆ. ಆದರೆ ಆಕಸ್ಮಿಕವಾಗಿ ಗುಂಡು ಸಿಡಿದಿದೆ. ಅದು ರಸ್ತೆಯಲ್ಲಿ ಹೋಗುತ್ತಿದ್ದ ಅಬ್ದುಲ್ ರಾಫುಗೆ ತಗುಲಿದೆ.
ಕೂಡಲೆ ಅವರನ್ನು ಶೇಖರ್ ಆಸ್ಪತ್ರೆಗೆ ದಾಖಲಿಸಿ ಸೂಕ್ತ ಚಿಕಿತ್ಸೆ ನೀಡಲಾಗಿದ್ದು ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮುದ್ದಪ್ಪನ್ನು ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಘಟನೆ ನಡೆದಿರುವ ಶುಕ್ರವಾರ ಸಂಜೆ 3.30ರ ಸಮಯದಲ್ಲಿ. (ಏಜೆನ್ಸೀಸ್)












Click it and Unblock the Notifications