BSR Cong ಹೋಯ್ತು ಸ್ವಾಭಿಮಾನಿ ಕರ್ನಾಟಕ ಪಕ್ಷ ಬಂತು
ಬೆಂಗಳೂರು,
ಫೆ. 10: 'ಸ್ವತಂತ್ರ ಹಕ್ಕಿ' ಬಿ. ಶ್ರೀರಾಮುಲು ತಮ್ಮ ಹೊಸ ಪಕ್ಷವಾದ BSR Congressಗೆ (ಬಡವರ, ಶ್ರಮಿಕರ, ರೈತರ ಪಕ್ಷ) ಮರುನಾಮಕರಣ ಮಾಡಿದ್ದಾರೆ. ಇದೀಗ ಶ್ರೀರಾಮುಲು ನೇತೃತ್ವದಲ್ಲೇ ಹೊಸ ಹೆಸರಿನ 'ಸ್ವಾಭಿಮಾನಿ ಕರ್ನಾಟಕ ಪಕ್ಷ' (SKP) ಉದಯವಾಗಲಿದೆ. id="toptextpromo">SKP
ವತಿಯಿಂದ ಬೆಂಗಳೂರಿನಲ್ಲಿಂದು (ಫೆ.10) ರಾಜ್ಯ ಮಟ್ಟದ ಸಭೆ ನಡೆಯಲಿದೆ. ಈಗಾಗಲೇ ಪಕ್ಷದ ನೋಂದಣಿ ಮತ್ತು ಸಂವಿಧಾನ ರಚನೆಗೆ ಸಿದ್ಧತೆ ನಡೆಸಲಾಗುತ್ತಿದೆ. ನೂತನ ಪಕ್ಷ ಸೇರ್ಪಡೆಯಾಗಲು ವಿವಿಧ ಪಕ್ಷಗಳ ಹಾಲಿ-ಮಾಜಿ ಮುಖಂಡರು ತುದಿಗಾಲಲ್ಲಿ ನಿಂತಿದ್ದಾರೆ. ಈ ಕುರಿತು ಚರ್ಚಿಸಲು ಬೆಂಗಳೂರಿನಲ್ಲಿ ಫೆ.15 ರಂದು ಸಭೆ ನಡೆಯಲಿದೆ ಎಂದು ಮಾಜಿ ಸಂಸದ ಮತ್ತು ನೂತನ ಪಕ್ಷದ ಸಂಚಾಲಕ ಕೆ. ವಿರುಪಾಕ್ಷಪ್ಪ ಗುರುವಾರ ಗಂಗಾವತಿಯಲ್ಲಿ ತಿಳಿಸಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಬೆಂಗಳೂರಿನಲ್ಲಿ
ಪಕ್ಷದ ಕಚೇರಿ ಸಿದ್ಧಗೊಂಡಿದ್ದು, ಪಕ್ಷದ ನೋಂದಣಿ, ಪ್ರತ್ಯೇಕ ಸಂವಿಧಾನ, ಚಿಹ್ನೆ, ವಿವಿಧ ಸಮಿತಿಗಳ ಆಯ್ಕೆ ಸೇರಿದಂತೆ ಇನ್ನಿತರ ಕಾರ್ಯಗಳು ಭರದಿಂದ ನಡೆದಿವೆ. ಹೊಸ ಪಕ್ಷದ ಪ್ರಥಮ ಸಮಾವೇಶ ಗದಗನಲ್ಲಿ ನಡೆಸಬೇಕು ಎಂಬುದು ಶ್ರೀರಾಮುಲು ಅವರ ಅಪೇಕ್ಷೆಯಾಗಿದೆ. ಹಾಗೆ ರಾಜ್ಯದ ಪ್ರತಿ ವಿಭಾಗದಲ್ಲೂ ಸಮಾವೇಶ ನಡೆಸಲಾಗುವುದು ಎಂದು ತಿಳಿಸಿದರು.











Click it and Unblock the Notifications