ಭಾರತ ಇರಾನ್ ಅಕ್ಕಿ ವ್ಯಾಪಾರಕ್ಕೆ ನಮ್ಮಪ್ಪಣೆ ಬೇಡ

US on India Iran Rice Trade
ವಾಷಿಂಗ್ಟನ್‌, ಫೆ.9: ಇರಾನ್ ದೇಶದ ಮೇಲೆ ಅಮೆರಿಕ ಸರ್ಕಾರ ವಿಧಿಸಿರುವ ಆರ್ಥಿಕ ದಿಗ್ಬಂಧನದಲ್ಲಿ ಕೊಂಚ ವಿನಾಯತಿ ನೀಡಲಾಗಿದೆ. ಆಹಾರ ಮತ್ತು ಔಷಧ ವ್ಯವಹಾರ ಕ್ಷೇತ್ರಕ್ಕೆ ವಿನಾಯತಿ ನೀಡಿರುವುದರಿಂದ ಭಾರತ ಮತ್ತು ಇರಾನ್‌ ನಡುವಣ ಅಕ್ಕಿ ವ್ಯಾಪಾರಕ್ಕೆ ಯಾವುದೇ ತೊಂದರೆಯಿಲ್ಲ ಎಂದು ಅಮೆರಿಕದ ವಿದೇಶಾಂಗ ಕಾರ್ಯಾಲಯದ ಉನ್ನತಾಧಿಕಾರಿ ವಿಕ್ಟೋರಿಯಾ ನ್ಯೂಲೆಂಡ್ ಹೇಳಿದ್ದಾರೆ.

ಇರಾನ್‌ ಭಾರತಕ್ಕೆ ಅಕ್ಕಿ ರಫ್ತು ಹಣವನ್ನು ಪಾವತಿಸಿದರೆ ಬಾಕಿ ಉಳಿಸಿಕೊಂಡಿದೆ ಎಂಬ ಆರೋಪದ ಬಗ್ಗೆ ಪ್ರತಿಕ್ರಿಯಿಸುತ್ತಾ 'ಇದರಿಂದ ಇರಾನ್‌ನ ಹಣಕಾಸು ಶಕ್ತಿ ದುರ್ಬಲಗೊಂಡಿದೆ ಎಂದು ತಿಳಿಯುತ್ತದೆ'. ಇರಾನ್‌ ಮೇಲೆ ವಿಧಿಸಿರುವ ಆರ್ಥಿಕ ದಿಗ್ಬಂಧನದಲ್ಲಿ ಹೆಚ್ಚಿನ ಸಡಿಲಿಕೆ ಇಲ್ಲ ಎಂದು ವಿಕ್ಟೋರಿಯಾ ಹೇಳಿದ್ದಾರೆ.

ಇರಾನ್‌ನ ಪರಮಾಣು ಕಾರ್ಯಕ್ರಮಗಳಿಗೆ ಕಡಿವಾಣ ಹಾಕುವ ಸಲುವಾಗಿ ಟೆಹ್ರಾನ್‌ ಮೇಲೆ ಅಮೆರಿಕ ಆರ್ಥಿಕ ದಿಗ್ಬಂಧನ ವಿಧಿಸಿದೆ. ಅದರೆ ಆಹಾರ, ಔಷಧ, ವೈದ್ಯಕೀಯ ಉಪಕರಣಗಳಿಗೆ ವಿನಾಯಿತಿ ನೀಡಲಾಗಿದೆ.

ಭಾರತದ ಜತೆಗಿನ ಅಕ್ಕಿ ವ್ಯಾಪಾರಕ್ಕೆ ದಿಗ್ಬಂಧನ ಅಡ್ಡಿಯಾಗದಿದ್ದರೂ, ಇರಾನ್ ಈಗ ಆರ್ಥಿಕ ಕುಸಿತ ಕಂಡಿರುವುದರಿಂದ ವ್ಯಾಪಾರ ಕಷ್ಟ ಎನಿಸಿದೆ.

ಭಾರತದ ಅಕ್ಕಿ ವ್ಯಾಪಾರಿಗಳಿಗೆ ಸುಮಾರು 200,000 ಟನ್ ಗಳಷ್ಟು ಅಕ್ಕಿ ಹಣ ಬರಬೇಕಿದೆ. All India Rice Exporters" Association ಅಧ್ಯಕ್ಷ ವಿಜಯ್ ಸೇಥಿಯಾ ಅವರ ಪ್ರಕಾರ ಕನಿಷ್ಠವೆಂದರೂ 144 ಮಿಲಿಯನ್ ಡಾಲರ್ ನಷ್ಟು ಮೊತ್ತದ ಬಾಕಿ ಹಣವನ್ನು ಇರಾನ್ನಿನಿಂದ ನಿರೀಕ್ಷಿಸಲಾಗಿದೆ.(ಪಿಟಿಐ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+