ಚಂಡಿಕಾಹೋಮ ನಡೆಸಿ ವಿಧಾನಸೌಧ ಶುದ್ದಗೊಳಿಸಿ, ಇಬ್ರಾಹಿಂ

ಅಲ್ಲಾ ಸ್ವಾಮಿ, ಅಸೆಂಬ್ಲಿಯಲ್ಲಿ ಮಟನ್ ತಿಂದಿದ್ದಕ್ಕೆ ಬಾಯಿಗೆ ಬಂದ ಹಾಗೆ ಹೇಳಿಕೆ ನೀಡಿದ್ದೀರಿ. ವಿಧಾನಸೌಧದ ಪಾವಿತ್ರ್ಯತೆಗೆ ಧಕ್ಕೆ ಆಯಿತೆಂದು ಹೇಳಿಕೆ ನೀಡಿದ್ದೀರಿ. ಈಗ ನಿಮ್ಮ ಪಕ್ಷದ ಸದಸ್ಯರು ಮಾಡಿದ್ದೇನು? ಅಸೆಂಬ್ಲಿಯಲ್ಲಿ ಬ್ಲ್ಲೂ ಫಿಲಂ ನೋಡಿದ್ರಲ್ಲಾ ಈಗ ಚಂಡಿಕಾಹೋಮ ಮಾಡ್ಸಿ ಅಸೆಂಬ್ಲಿ ಶುದ್ದಿಗೊಳಿಸಿ ಎಂದು ಇಬ್ರಾಹಿಂ ಲೇವಡಿ ಮಾಡಿದ್ದಾರೆ.
ಹೊಟ್ಟೆ ಪಾಡಿಗೆ ಬೇರೆ ಊರಿಂದ ಇಲ್ಲಿಗೆ ಬಂದು ಬಾರ್ ನಲ್ಲಿ ಡ್ಯಾನ್ಸ್ ಮಾಡಿದ್ರೆ ಅರೆಸ್ಟ್ ಮಾಡ್ತೀರಾ. ಬ್ಲೂಫಿಲಂನೋಡಿದ ಈ ತ್ರಿಮೂರ್ತಿ ಸಚಿವರುಗಳನ್ನು ಮೊಬೈಲ್ ಸಹಿತ ಕರೆತಂದು ಮೊಕದ್ದಮೆ ದಾಖಲಿಸಿ ಪರಪ್ಪನ ಅಗ್ರಹಾರಕ್ಕೆ ತಳ್ಳಿ ಎಂದು ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಸಿ ಎಂ ಇಬ್ರಾಹಿಂ ಹೇಳಿಕೆ ನೀಡಿದ್ದಾರೆ.
ಮೂವರು ಸಚಿವರು ರಾಜೀನಾಮೆ ನೀಡಿದರಷ್ಟೇ ಸಾಲದು, ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕು, ಹಾಗೆ ಅವರು ಮುಂದೆಂದೂ ಶಾಸಕ ಸ್ಥಾನಕ್ಕೆ ಚುನಾವಣೆಗೆ ನಿಲ್ಲದಂತೆ ಶಾಸನ ರೂಪಿಸ ಬೇಕೆಂದು ಇಬ್ರಾಹಿಂ ಒತ್ತಾಯಿಸಿದ್ದಾರೆ.












Click it and Unblock the Notifications