ಗಣಿಗಾರಿಕೆ ಸ್ಥಗಿತ : 20,000 ಕೋಟಿ ರು ನಷ್ಟ

ಇಂಡಿಯನ್ ಬ್ಯೂರೋ ಆಫ್ ಮೈನ್ಸ್(IBM) ದಾಖಲೆಗಳನ್ನು ಆಧಾರಿಸಿ FIMI ತಯಾರಿಸಿದ ವರದಿಯನ್ನು ನಿರ್ದೇಶಕ ಪಿಚೈಮುತ್ತು ಅವರು ಸುದ್ದಿಗೋಷ್ಠಿಯಲ್ಲಿ ಅಂಕಿ ಅಂಶಗಳೊಂದಿಗೆ ವಿವರಿಸಿದರು.
ಸುಮಾರು 800 ಕೋಟಿ ರು ಹಣ ರಾಯಧನ ನಿರೀಕ್ಷೆಯಿತ್ತು ಹಾಗೂ ಸುಮಾರು 4,800 ಕೋಟಿ ರು ನಷ್ಟವಾಗಿದೆ ಎಂದು ಭಾರತೀಯ ರೈಲ್ವೇ ಈ ಮುಂಚೆ ಪ್ರಕಟಿಸಿತ್ತು. VAT ನಷ್ಟ 300 ಕೋಟಿ ರು ಹಾಗೂ ರಫ್ತು ತೆರಿಗೆ ಹಣ 3,000 ಕೋಟಿ ರು ಬರಬೇಕಿತ್ತು.
'ಎ' ಶ್ರೇಣಿ ಗಣಿ ಕಂಪನಿಗಳು ತಮ್ಮ ಗಣಿಗಾರಿಕೆ ಆರಂಭಿಸಿದರೂ 10 ಮಿಲಿಯನ್ ಟನ್ ನಷ್ಟು ಮಾತ್ರ ಗಣಿಗಾರಿಕೆ ಮಾಡಲು ಸಾಧ್ಯವಿರುತ್ತದೆ. ಸಿಇಸಿ ವರದಿ ಪ್ರಕಾರ ವರ್ಷಕ್ಕೆ 30 ಮಿಲಿಯನ್ ಮೆಟ್ರಿಕ್ ಟನ್ ಗಣಿಗಾರಿಕೆಗೆ ಮಾತ್ರ ಅನುಮತಿ ನೀಡಲಾಗುತ್ತದೆ. ಹೀಗಾಗಿ ನಷ್ಟದ ಮೊತ್ತ ಇನ್ನಷ್ಟು ಹೆಚ್ಚಾಗಲಿದೆ ಎಂದು ಸಂಸ್ಥೆ ಹೇಳಿದೆ.












Click it and Unblock the Notifications