ಇಂಧನ ಆಮದು ಸಾಧ್ಯ, ಮಲ್ಯ ಫುಲ್ ಖುಷಿ

Dr Vijay Mallya
ಮುಂಬೈ, ಫೆ.8: ಸಾಲದ ಹೊರೆಯಿಂದ ಬಳಲುತ್ತಿರುವ ಡಾ ವಿಜಯ್ ಮಲ್ಯ ಅವರ ಕಿಂಗ್ ಫಿಷರ್ ಸಂಸ್ಥೆಗೆ ಸಂತಸದ ಸುದ್ದಿ ಸಿಕ್ಕಿದೆ. ಜೆಟ್ ಇಂಧನವನ್ನು ನೇರವಾಗಿ ಆಮದು ಮಾಡಿಕೊಳ್ಳುವ ಅವಕಾಶವನ್ನು ಸರ್ಕಾರ ಒದಗಿಸಿದೆ.

ಇಂಧನ ಬೆಲೆಯನ್ನು ಶೇ.20 ರಷ್ಟು ತಗ್ಗಿಸಿರುವ ಸರ್ಕಾರ, ಇಂಧನ ಶೇಖರಣೆ ಮಾಡಿಕೊಳ್ಳಲು ಸೂಕ್ತ ವ್ಯವಸ್ಥೆ ರೂಪಿಸಿಕೊಳ್ಳುವಂತೆ ಸೂಚಿಸಿದೆ.

ಒನ್ ವರ್ಲ್ಡ್ ಮೈತ್ರಿಕೂಟದ ಭಾಗವಾಗಿರುವ ಕಿಂಗ್ ಫಿಷರ್ ಜಾಗತಿಕವಾಗಿ ಹಾಗೂ ದೇಶಿಯವಾಗಿ ವಿಮಾನಯಾನ ಹಾದಿ ಸುಗುಮವಾಗುವ ಲಕ್ಷಣಗಳು ಕಂಡು ಬಂದಿದೆ.

ಸುಮಾರು 6,419 ಕೋಟಿ ಸಾಲದ ಹೊರೆ ಹೊತ್ತಿರುವ ಕಿಂಗ್ ಫಿಷರ್ ಸಂಸ್ಥೆಗೆ ಶುಭಕಾಲ ಆರಂಭವಾಗಿದ್ದು, ಮತ್ತೆ ವಿಮಾನಯಾನ ಸುಗಮವಾಗುವ ಲಕ್ಷಣಗಳಿವೆ.

ಆದರೆ, ಸ್ಥಳೀಯ ಇಂಧನ ಮಾರುಕಟ್ಟೆಯಲ್ಲಿ ಇಂಧನ ಖರೀದಿಗೆ ಹಣ ಸಾಲದೆ ಪರದಾಡತ್ತಿರುವ ವಿಮಾನಯಾನ ಸಂಸ್ಥೆಗಳು ವಿದೇಶದಿಂದ ಇಂಧನ ತರಿಸಿಕೊಳ್ಳುವುದಾದರೂ ಹೇಗೆ ಎಂದು ಏಂಜೆಲ್ ಬ್ರೋಕಿಂಗ್ ಸಂಸ್ಥೆ ವಿಶ್ಲೇಷಕ ಶರಣ್ ಅಭಿಪ್ರಾಯಪಟ್ಟಿದ್ದಾರೆ.

ಸ್ಥಳೀಯವಾಗಿ ಸರ್ಕಾರಿ ಸ್ವಾಮ್ಯದ ಭಾರತ್ ಪೆಟ್ರೋಲಿಯಂ, ಇಂಡಿಯನ್ ಆಯಿಲ್ ಕಾರ್ಪ್, ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪ್ ಸಂಸ್ಥೆಗಳು ಇಂಧನ ಒದಗಿಸುತ್ತಿದೆ. ಆದರೆ, ವಿವಿಧ ರೀತಿಯ ತೆರಿಗೆ ಹೊರೆ ಹೇರುತ್ತಿದ್ದು, ಕಿಂಗ್ ಫಿಷರ್ ಸೇರಿದಂತೆ ಹಲವು ಸಂಸ್ಥೆಗಳು ವಿದೇಶಿ ಸಂಸ್ಥೆಗಳಿಂದ ಇಂಧನ ಖರೀದಿಸಲು ಮುಂದಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+