ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲೂಟಿ ಹೊಡೆಯುತ್ತಿರುವ ಶಾಲೆಗಳಿಗೆ ಸರಕಾರದ ಮೂಗುದಾಣ

By Prasad
|
Google Oneindia Kannada News

School fees regulation by Karanataka govt
ಬೆಂಗಳೂರು, ಫೆ. 6 : ಐದನೇ ತರಗತಿ ಮುಗಿಯುವವರೆಗೆ ಯಾವುದೇ ಶಾಲೆ ಮಕ್ಕಳ ಟ್ಯೂಷನ್ ಶುಲ್ಕ ತೆಗೆದುಕೊಳ್ಳುವಂತಿಲ್ಲ. ಅಭಿವೃದ್ಧಿ, ಕ್ರೀಡೆ, ಕ್ರೀಡೇತರ, ಪಠ್ಯಪುಸ್ತಕ, ಸಮವಸ್ತ್ರ, ಕಂಪ್ಯೂಟರ್ ಮುಂತಾದ ಶುಲ್ಕಗಳನ್ನು ಪಾಲಕರ ಮೇಲೆ ಶಾಲಾ ಆಡಳಿತ ಮಂಡಳಿ ಹೇರುತ್ತದಾರದೂ ಲಾಭಾಂಶ ಶೇ.30 ದಾಟಬಾರದು.

ಇದು ಕರ್ನಾಟಕ ಶಿಕ್ಷಣ ಮಂಡಳಿ ರಾಜ್ಯದ ಎಲ್ಲಾ ಶಾಲೆಗಳಿಗೆ ಕಳಿಸಿರುವ ಸುತ್ತೋಲೆ. ಈ ಸುತ್ತೋಲೆ, ಮಕ್ಕಳ ಶಿಕ್ಷಣಕ್ಕಾಗಿ ಸಾವಿರಾರುಗಟ್ಟಲೆ ಹಣ ಸುರಿಯುತ್ತಿರುವ ತಂದೆ ತಾಯಿಯರಲ್ಲಿ ಸಂತಸ ತಂದಿದ್ದರೆ, ಶಾಲಾ ಆಡಳಿತ ವರ್ಗ ಬುಸುಗುಡುವಂತೆ ಮಾಡಿದೆ. ಜೊತೆಗೆ ಇದು ಜಾರಿಯಾಗುವುದೇ ಎಂಬ ಅನುಮಾನವೂ ಕಾಡುತ್ತಿದೆ.

ಪಾಲಕರ ಅಸೋಸಿಯೇಷನ್ ಅಧ್ಯಕ್ಷ ಅಶೋಕ್ ಕುಮಾರ್ ಅಡಿಗ ಮಾಡಿದ ಹೋರಾಟದ ಫಲವಾಗಿ ಅಗತ್ಯಕ್ಕೂ ಮೀರಿ ಹಣ ಕೀಳುತ್ತಿರುವ ಶಾಲೆಗಳಿಗೆ ಡಸ್ಟರ್‌ನಿಂದ, ಬೆತ್ತದಿಂದ ರಪರಪನೆ ಬಾರಿಸಿದಂತಾಗಿದೆ. ಶಾಲೆಗಳೆಂದರೆ ಬರೀ ಓದುವುದು ಬರೆಯುವುದಲ್ಲ, ಮಕ್ಕಳಿಗೆ ಲೈಬ್ರರಿ, ಪ್ರಯೋಗಾಲಯ, ಕ್ರೀಡೆ ಮುಂತಾದ ಸೌಲಭ್ಯಗಳನ್ನು ಒದಗಿಸಬೇಕಾಗುತ್ತದೆ ಎಂದು ಅನುದಾನರಹಿತ ಶಾಲೆಗಳ ಒಕ್ಕೂಟದ ಅಧ್ಯಕ್ಷ ಜಿಎಸ್ ಶರ್ಮಾ ಕಿಡಿಕಾರಿದ್ದಾರೆ.

ಶಾಲೆಗಳನ್ನು ಹದ್ದುಬಸ್ತಿನಲ್ಲಿಡಲು ಈ ಕ್ರಮ ಅಗತ್ಯವಿದೆ ಎಂದು ಸರಕಾರ ಹೇಳುತ್ತಿದ್ದರೆ, ತಾವು ಕಾನೂನು ಯುದ್ಧ ನಡೆಸುವುದಾಗಿ ಶಾಲೆಗಳ ಒಕ್ಕೂಟ ನಿರ್ಧರಿಸಿದೆ. ಮುಂದಿನ ವಾರ ಶಾಲೆಗಳು ಕಾನೂನು ಮೆಟ್ಟಲೇರಲಿವೆ. ಸರಕಾರಕ್ಕೆ ಸಲ್ಲಿಸಲಾಗಿರುವ ವರದಿಯ ಪ್ರಕಾರ, ಶಾಲೆಗಳು ಶೇ.100ಕ್ಕೂ ಹೆಚ್ಚು ಲಾಭ ಮಾಡಿಕೊಳ್ಳುತ್ತಿವೆ. ಪುಸ್ತಕ, ಸಮವಸ್ತ್ರ, ಬ್ಯಾಗ್, ಪಾದರಕ್ಷೆಗಳ ಹೆಸರಿನಲ್ಲಿ ಪಾಲಕರ ರೊಕ್ಕವನ್ನು ಲೂಟಿ ಹೊಡೆಯುತ್ತಿವೆ.

English summary
Karnataka govt has sent a circular to all the schools in Karnataka saying that the profit should not be more than 30 percent and up to 5th standard no tuition fees should be collected. This has made the schools fuming. Federation of schools have decided to fight this order the court of law.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X