ವಿದ್ಯಾರ್ಥಿ ನವೀನ್ ಶವ ನಾಪತ್ತೆ ಹೇಗಾಯ್ತು?

ಸಕಲೇಶಪುರ ಪೊಲೀಸರಿಗೆ ಇನ್ನೂ ನವೀನ್ ಸಾವು ಆದದ್ದು ಹೇಗೆ ಎಂಬುದು ಸ್ಪಷ್ಟವಾಗಿಲ್ಲ. ಗೈಡ್ ಇಲ್ಲದೆ, ರೂಟ್ ಮ್ಯಾಪ್ ಇಲ್ಲದೆ, ಜಿಪಿಎಸ್ ಸಾಧನವಿಲ್ಲದೆ ಈ ಕಾಡಿಗೆ ಈ ವಿದ್ಯಾರ್ಥಿಗಳು ಹೊಕ್ಕಿದ್ದಾದರೂ ಹೇಗೆ? ನವೀನ್ ಸಾವನ್ನಪ್ಪಿದ ನಂತರ ಶವ ಕಣ್ಮರೆಯಾಗಿದ್ದು ಹೇಗೆ ಎಂಬುದರ ಬಗ್ಗೆ ಟ್ರಿಕ್ಕಿಂಗ್ ಗುಂಪಿನಲ್ಲೇ ಗೊಂದಲಗಳಿದೆ.
ಟ್ರೆಕ್ಕಿಂಗ್ ಹೋದದ್ದು ಹೀಗೆ?: ಶನಿವಾರ(ಫೆ.4) ಉಪ್ಪಿನಂಗಡಿ ವಲಯ ಅರಣ್ಯ ವ್ಯಾಪ್ತಿಯ ಗುಂಡ್ಯದಿಂದ ಕಾಡಿನೊಳಗೆ ಹೊಕ್ಕು ಚಾರಣ ಆರಂಭಿಸಿದರು. ಗುಂಡ್ಯದಿಂದ ಶಿರಾಡಿ ಘಾಟ್ ಮಾರ್ಗದ ಬದಿಯ ಕಾಡು ಹಾಗೂ ನದೀತೀರದಲ್ಲಿ ಚಾರಣ ಮಾಡುತ್ತಿದ್ದ ಈ ತಂಡವು ಮಧ್ಯಾಹ್ನದ ವೇಳೆ ಸಕಲೇಶಪುರ ವಲಯ ಅರಣ್ಯ ವ್ಯಾಪ್ತಿಯ ಕಬ್ಬಿನಾಲೆ ರಕ್ಷಿತಾರಣ್ಯದಲ್ಲಿರುವ ಗುಂಡ್ಯ ಹೊಳೆಗೆ ಇಳಿದಿದ್ದಾರೆ.
ಹೊಳೆಯಲ್ಲಿ ಸ್ವಲ್ಪ ನೀರಿದ್ದ ಕಾರಣ ತಂಡದಲ್ಲಿದ್ದ ಎಲ್ಲರೂ ಮೋಜಿಗಾಗಿ ನೀರಿಗಿಳಿದರು. ಆ ವೇಳೆ ನೀರಿನ ಮಧ್ಯೆ ಬಂಡೆಕಲ್ಲಿನಿಂದ ಜಾರಿ ಕೆಳಗೆ ಬಿದ್ದ ನವೀನ್‌ಕುಮಾರ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.
ನವೀನ್ ತಾಯಿಗೆ ಇನ್ನೂ ವಿಷಯ ನೇರವಾಗಿ ತಿಳಿಸಿಲ್ಲ. ಕಾಣೆಯಾಗಿದ್ದಾನೆ ಎಂದಷ್ಟೇ ಹೇಳಲಾಗಿದೆ. ಇತರೆ ವಿದ್ಯಾರ್ಥಿಗಳ ಪೋಷಕರು ಸಕಲೇಶಪುರಕ್ಕೆ ಕರೆಸಿಕೊಳ್ಳಲಾಗುವುದು. ನವೀನ್ ಸಾವಿನ ನಿಗೂಢತೆ ಬಯಲಾಗುವ ತನಕ ವಿದ್ಯಾರ್ಥಿಗಳಿಗೆ ಕಷ್ಟ ತಪ್ಪಿದ್ದಲ್ಲ ಎಂದು ಪೊಲೀಸರು ಹೇಳಿದ್ದಾರೆ.
ಈತನ ಜೊತೆಗಿದ್ದ 13 ಮಂದಿ ದಟ್ಟ ಕಾಡಿನಲ್ಲೇ ರಾತ್ರಿ ಕಳೆದಿದ್ದಾರೆ. ಈ ಗುಂಪಿನಲ್ಲಿ 4 ಮಂದಿ ಹುಡುಗಿಯರೂ ಇದ್ದಾರೆ. ನವೀನ್ ಸಾವಿನ ನಂತರ ಸಹಾಯ ಕೋರಲು ಮೂರ್ನಾಲ್ಕು ಮಂದಿ ಪ್ರಯತ್ನಿಸಿದ್ದಾರೆ.
ನಂತರ ಘಟನೆ ಬಗ್ಗೆ ಅರಣ್ಯಾಧಿಕಾರಿಗಳಿಗೆ ತಿಳಿದಿದೆ. ಹಗಲು ವೇಳೆಯಲ್ಲೇ ಹುಡುಕಲು ಕಷ್ಟವಾಗಿರುವ ಕಾಡಿನಲ್ಲಿ ರಾತ್ರಿ ವೇಳೆ ಶೋಧಕಾರ್ಯ ಅಸಾಧ್ಯ ಎಂದು ಆರ್‌ಎಫ್ಓ ರತ್ನಪ್ರಭ ತಿಳಿಸಿದ್ದಾರೆ. ಸೋಮವಾರ(ಫೆ.6) ಆರೋಪಿಗಳನ್ನು ಸಕಲೇಶಪುರ ಕೋರ್ಟಿಗೆ ಹಾಜರುಪಡಿಸಲಾಗಿದ್ದು, ಎಲ್ಲರಿಗೂ ಜಾಮೀನು ಮಂಜೂರಾಗಿದೆ.












Click it and Unblock the Notifications