ಪಾಲ್ ಗೂ ಹ್ಯಾರಿ ಪಾಟರ್ ಗೂ ಏನು ಸಂಬಂಧ?

Trio School
ಬೆಂಗಳೂರು, ಫೆ.1: ನಗರದ ಪ್ರತಿಷ್ಠಿತ ಖಾಸಗಿ ಶಾಲೆಗಳಲ್ಲಿ ಒಂದಾದ ಟ್ರಿಯೋ ಅಂತಾರಾಷ್ಟ್ರೀಯ ಶಾಲೆ, ಕೊಡಿಗೆಹಳ್ಳಿ ಮುಖ್ಯರಸ್ತೆ ಬಳಿ ಸಹಕಾರ ನಗರದಲ್ಲಿದೆ. ಶಾಲೆಯಿಂದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸುಮಾರು 20 ನಿಮಿಷದ ಹಾದಿ. ಬ್ರಿಟನ್ನಿನಲ್ಲಿರುವಂತೆ IGCSE ಹಾಗೀ ಎ ಶ್ರೇಣಿ ಪಠ್ಯಕ್ರಮವನ್ನು ಬೆಂಗಳೂರಿನ ಶಾಲೆಯಲ್ಲೂ ಅಳವಡಿಸಲಾಗಿದೆ.

ಶಾಲೆಯಲ್ಲಿ ವಿವಿಧ ದೇಶಗಳ ಸುಮಾರು 250 ವಿದ್ಯಾರ್ಥಿಗಳಿದ್ದಾರೆ. 2.5 ವರ್ಷದಿಂದ 18 ವರ್ಷ ವಯಸ್ಸಿನವರೆಗಿನ ವಿದ್ಯಾರ್ಥಿಗಳು ಇಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.

ಷೇಕ್ಸ್ ಪಿಯರ್, ಕ್ಲಿಪ್ಪಿಂಗ್, ವರ್ಡ್ಸ್ ವರ್ತ್ ಹೆಸರಿನಲ್ಲಿ ಶಾಲೆ ವಿಭಾಗಗಳಿದೆ. ನರ್ಸರಿಗೆ 25000 ರು ದಾಖಲಾತಿ ಶುಲ್ಕ ಪಡೆಯುವ ಶಾಲೆ ಒಟ್ಟು 150000 ರು ಕೇವಲ ನರ್ಸರಿ ಮಕ್ಕಳ ವಿದ್ಯಾಭ್ಯಾಸಕ್ಕೆ ಶುಲ್ಕ ರೂಪದಲ್ಲಿ ಪಡೆಯುತ್ತಿದೆ. ಹೈಸ್ಕೂಲ್ ಮುಗಿಸಬೇಕಾದರೆ 410000 ರು ನೀಡಲೇಬೇಕು.

ಎಂಸಿಎನ್ ಸಮೂಹ ಸಂಸ್ಥೆ ಒಡೆತನದ ಈ ಶಾಲೆ ತನ್ನ ವೈವಿಧ್ಯಮಯ ಸಾಂಸ್ಕೃತಿಕ ಆಚರಣೆಗೆ ಹೆಸರಾಗಿದೆ. ಮಕ್ಕಳಿಂದ ಹಿಡಿದು ಯುವಕ ಯುವತಿಯರೂ ಸಹ ಪ್ರೇಮಿಗಳ ದಿನ ಆಚರಿಸುತ್ತಾರೆ. ಜೊತೆಗೆ ಹೋಳಿ ಸೇರಿದಂತೆ ಭಾರತೀಯ ಹಬ್ಬಕ್ಕೂ ಸ್ಥಾನವುಂಟು. ಶಾಲಾ ಮಕ್ಕಳಿಗೆ ಫೇಸ್ ಬುಕ್ ಬಳಕೆ ಕಡ್ಡಾಯ ಮಾಡಿದ ಏಕೈಕ ಶಾಲೆ ಎಂಬ ಕೀರ್ತಿಯನ್ನು ಹೊಂದಿದೆ.

ಇಂಥ ಶಾಲೆಯ ಮುಖ್ಯಸ್ಥನಾಗಿ ಸೇರಿಕೊಂಡ ಪಾಲ್ ಮೀಕಿನ್ ಇತ್ತೀಚಿನ ಪ್ರಸಂಗದಿಂದ ಶಾಲೆ ತಲೆತಗ್ಗಿಸುವಂತಾಗಿದೆ. ಪಾಲ್ ಹೇಳಿಕೆಗಳು ಕ್ಷಣ ಕ್ಷಣಕ್ಕೂ ಬದಲಾಗುತ್ತಿದೆ. ಹ್ಯಾರಿ ಪಾಟರ್ ಖ್ಯಾತಿಯ ಡೆನಿಯಲ್ ರಾಡ್ ಕ್ಲಿಫ್ ಗೆ ನಾನು ಪಾಠ ಮಾಡಿದ್ದೆ ಎಂದು ಪಾಲ್ ಹೇಳಿಕೊಂಡಿದ್ದಾನೆ.

ಡೇನಿಯಲ್ ಶಾಲೆಗೆ ಸರಿಯಾಗಿ ಹಾಜರಾಗುತ್ತಿರಲಿಲ್ಲ. ನಟನೆಯಲ್ಲಿ ಆತನಿಗೆ ಆಸಕ್ತಿಯಿತ್ತು. ನಾನು ವಿಜ್ಞಾನ ವಿಷಯವನ್ನು ಕೆಲಕಾಲ ಆತನಿಗೆ ಬೋಧಿಸಿದ್ದೇನೆ ಎಂದು ಟೈಮ್ಸ್ ಪತ್ರಿಕೆ ಈ ಮುಂಚೆ ನೀಡಿದ್ದ ಸಂದರ್ಶನದಲ್ಲಿ ಪಾಲ್ ಹೇಳಿದ್ದ. ಅದರೆ, ಆತ ಈಗ ನಡೆದುಕೊಂಡಿರುವ ರೀತಿ ಶಾಲಾಡಳಿತಕ್ಕೆ ಅಚ್ಚರಿ ಹುಟ್ಟಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+