ಶಿಶು ಪೀಡಕ ಪ್ರಿನ್ಸಿ ಕುಡಿದ ನಂತರ ಎಲ್ಲಾ ಕಕ್ಕಿದ

Principal Paul Confession
ಬೆಂಗಳೂರು, ಫೆ.2: ಟ್ರಿಯೋ ಇಂಟರ್ ನ್ಯಾಷನಲ್ ಶಾಲೆಯ ಮಾಜಿ ಮುಖ್ಯೋಪಾಧ್ಯಯ ಶಿಶು ಪೀಡಕ ಪಾಲ್ ಮೀಕಿನ್ ಮತ್ತೆ ಸುದ್ದಿಯಲ್ಲಿದ್ದಾನೆ. ಕುಡಿದಾಗ ನಾನು ನಿಯಂತ್ರಣ ಕಳೆದುಕೊಳ್ಳುತ್ತೇನೆ. ಆ ಸಂದರ್ಭದಲ್ಲಿ ಅಶ್ಲೀಲ ಸಂದೇಶಗಳನ್ನು ಕಳಿಸಿರಬಹುದು. ಥೈಲ್ಯಾಂಡ್ ನಲ್ಲಿದ್ದಾಗಲೂ ಈ ರೀತಿ ಮಾಡಿದ್ದೆ ಎಂದು ಪೊಲೀಸರಿಗೆ ಹೇಳಿಕೆ ನೀಡಿದ್ದಾನೆ.

ಶಾಲೆ ಪ್ರಿನ್ಸಿಪಾಲ್ ಪಾಲ್ ಮಿಕ್ಕೆನ್ ಅವರನ್ನು ಮಕ್ಕಳ ಮೇಲೆ ದೌರ್ಜರ್ನ್ಯ ಎಸೆಗಿದ ಆರೋಪ ಹೊರೆಸಲಾಗಿದೆ. ಯುಕೆ ಮೂಲದ ಪಾಲ್ ನ ಬೆರಳಚ್ಚು ದಾಖಲೆಗಳನ್ನು ಯುಕೆಗೆ ಕಳಿಸಿ ಹೆಚ್ಚಿನ ಮಾಹಿತಿಯನ್ನು ಪಡೆಯಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.

ನಕಲಿ ದಾಖಲೆ ಪಾಲ: ಟ್ರಿಯೋ ಶಾಲೆಯ ಮುಖ್ಯಸ್ಥನಾಗಿ ಪಾಲ್ ಮೀಕಿನ್ ಸೇರಿಕೊಂಡಾಗ ಒದಗಿಸಿದ ದಾಖಲೆಗಳ ಪ್ರಕಾರ ಶೆಫೆಲ್ಡ್ ವಿವಿಯಿಂದ ತತ್ವಶಾಸ್ತ್ರದಲ್ಲಿ ಡಾಕ್ಟರೇಟ್ ಪಡೆದಿದ್ದಾನೆ ಎಂದು ನಮೂದಿಸಲಾಗಿದೆ.

ಆದರೆ, ಅದು ನಕಲಿ ಪ್ರಮಾಣ ಪತ್ರ ಎಂದು ತಿಳಿದು ಬಂದಿದೆ. ಹಲವು ಪಾಸ್ ಪೊರ್ಟ್ ಗಳನ್ನು ಹೊಂದಿರುವ ಪಾಲ್ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಿಲ್ಲ ಎಂದು ಟ್ರಯೋ ಶಾಲೆ ವಕ್ತಾರರು ಹೇಳಿದ್ದಾರೆ.

ಪಾಲ್ ಮೇಲೆ ಶಾಲಾ ಮಕ್ಕಳಿಗೆ ಅಶ್ಲೀಲ ಸಂದೇಶ ಕಳಿಸಿ, ಅಸಭ್ಯವಾಗಿ ವರ್ತಿಸಿದ ಆರೋಪ ಎದುರಾದ ಮೇಲೆ ಕರ್ನಾಟಕ ರಾಜ್ಯ ಮಕ್ಕಳ ಹಕ್ಕು ಆಯೋಗ ಕೂಡಾ ತನಿಖೆಗೆ ಇಳಿದಿದೆ. ಟ್ರಿಯೋ ಶಾಲೆ ಕೂಡಾ ಕೊಡಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ. ಎಫ್ ಐಆರ್ ದಾಖಲಿಸಿಕೊಂಡಿರುವ ಪೊಲೀಸರು ಪಾಲ್ ವಿಚಾರಣೆಯಲ್ಲಿ ತೊಡಗಿದ್ದಾರೆ.

ಅದರೆ, ಪಾಲ್ ಮಾತ್ರ ನಾನು ಸಂದೇಶ ಮಾತ್ರ ಕಳಿಸಿರಬಹುದು. ಕುಡಿದಾಗ ಕಂಟ್ರೋಲ್ ಇರೋಲ್ಲ. ಅದು ಬಿಟ್ಟರೆ ಶಾಲಾ ಮಕ್ಕಳ ಜೊತೆ ಅಸಭ್ಯವಾಗಿ ವರ್ತಿಸಿಲ್ಲ ಎಂದು ಹೇಳಿದ್ದಾನೆ.

ಟ್ರಯೋ ಶಾಲೆ ಎಲ್ಲಿದೆ? ಪಾಲ್ ಗೂ ಹ್ಯಾರಿ ಪಾಟರ್ ಗೂ ಏನು ಸಂಬಂಧ? ಮುಂದೆ ಓದಿ...

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+