ಶೀಘ್ರದಲ್ಲೇ ಬಿಜೆಪಿ ಸರ್ಕಾರ ಪತನ: ಶ್ರೀರಾಮುಲು

ಬಿಜೆಪಿ ಸರ್ಕಾರ ಬೀಳಿಸುವುದು ನಮ್ಮ ಕೈಲಿಲ್ಲ. ಬಡವರ ಪರ ಕೆಲಸ ಮಾಡಲು ಇಚ್ಛಿಸುವವರಿಗೆ ಸದಾ ಸ್ವಾಗತ ಇರುತ್ತದೆ. ಹಿಂದುಳಿದ ಜಿಲ್ಲೆಗಳತ್ತ ಬಿಜೆಪಿ ನಾಯಕರು ಕಣ್ಣೆತ್ತಿ ನೋಡಿದಿರುವುದು ಅವರಿಗೆ ಮುಳುವಾಗಲಿದೆ ಎಂದು ಶ್ರೀರಾಮುಲು ಆಭಿಪ್ರಾಯಪಟ್ಟರು.
ತಮ್ಮ ಹೊಸ ಪಕ್ಷವಾದ BSR Congress ಪಕ್ಷದ ಕಚೇರಿ ಬಳ್ಳಾರಿ ಮತ್ತು ಬೆಂಗಳೂರಿನಲ್ಲಿ ಏಕಕಾಲದಲ್ಲಿ ಸಿದ್ಧವಾಗುತ್ತಿದೆ. ಪಕ್ಷಕ್ಕೆ ಅಧಿಕೃತ ಚಿನ್ಹೆಗೆ ಚುನಾವಣೆ ಆಯೋಗ ಅನುಮತಿ ನೀಡಿದೆ ಎಂದು ಶ್ರೀರಾಮುಲು ಹರ್ಷ ವ್ಯಕ್ತಪಡಿಸಿದರು.
ಬೆಂಗಳೂರಿನಲ್ಲಿ ಕುಮಾರಪಾರ್ಕ್‌ನ ರೇಲ್ವೆ ಸಮಾನಾಂತರ ರಸ್ತೆಯಲ್ಲಿ ಕಟ್ಟಡವೊಂದವನ್ನು ಮಾರ್ಪಾಟು ಮಾಡಿ, ಪಕ್ಷದ ಕಚೇರಿ ತೆರೆಯಲು ಉದ್ದೇಶಿಸಲಾಗಿದೆ. ಬಳ್ಳಾರಿಯಲ್ಲಿ ಹಳೆ ಬಿಜೆಪಿ ಕಚೇರಿ ಈಗ ಹಾಲಿ ಶಾಸಕ ಶ್ರೀರಾಮುಲು ಪಕ್ಷದ ಕಚೇರಿಯಾಗಲಿದೆ.
ಗಾಲಿ ಜನಾರ್ದನ ರೆಡ್ಡಿ ಅವರಿಗೆ ಜಾಮೀನು ಸಿಗಬೇಕಿತ್ತು. ರಾಜಕೀಯ ಪಿತೂರಿಯಿಂದ ನಮ್ಮ ಜನನಾಯಕ ಇನ್ನೂ ಜೈಲಿನಲ್ಲಿ ಕಾಲ ಕಳೆಯುವಂತಾಗಿದೆ. ರೆಡ್ಡಿ ಅವರು ಬಿಡುಗಡೆಗಾಗಿ ನಾವು ಕಾದಿದ್ದೇವೆ ಎಂದು ಶ್ರೀರಾಮುಲು ಹೇಳಿದರು.











Click it and Unblock the Notifications