ಸಾಯಿ ರೆಡ್ಡಿಗೆ ಮಂಪರು ಪರೀಕ್ಷೆ, ಜಗನ್ ಗೆ ಬೆವರು?

ಬೆಂಗಳೂರು ಅಥವಾ ಅಹಮದಾಬಾದಿನ ಪರೀಕ್ಷಾ ಕೇಂದ್ರಗಳಲ್ಲಿ ಆರೋಪಿಗಳನ್ನು ನಾರ್ಕೋ ಅನಾಲಿಸಸ್ ಗೆ ಒಳಪಡಿಸುವಂತೆ ಕೋರಿ ಸಿಬಿಐ ತಂಡ ಮನವಿ ಸಲ್ಲಿಸಿದೆ. ಎಮ್ಮಾರ್ ಪ್ರಕರಣದ ಆರೋಪಿ ಸುನೀಲ್ ರೆಡ್ಡಿ ಅವರ ವಿಚಾರಣೆಗೂ ಸಿಬಿಐ ಅರ್ಜಿ ಹಾಕಿದೆ.
ಜ.2ರಂದು ಬಂಧನಕ್ಕೊಳಗಾದ ಜಗನ್ ಬೇನಾಮಿ ಕಂಪನಿಗಳ ಸೃಷ್ಟಿಕರ್ತ, ಪಾಲಕ ವಿಜಯ ಸಾಯಿ ರೆಡ್ಡಿ, ಈ ವರೆಗೂ ಸಿಬಿಐ ತಂಡದ ಎದುರು ತುಟಿ ಪಿಟಕ್ಕೆಂದಿಲ್ಲ. ಇದರಿಂದ ರೋಸಿ ಹೋಗಿರುವ ಸಿಬಿಐ ತಂಡ ಮಂಪರು ಪರೀಕ್ಷೆಗೆ ಮುಂದಾಗಿದೆ.
ಅಕ್ರಮ ಆಸ್ತಿ ಪ್ರಕರಣಕ್ಕೆ ಸಂಬಂದಿಸಿದಂತೆ ವೈಎಸ್ ಜಗನ್ ಸೇರಿದಂತೆ ಸುಮಾರು 72 ಮಂದಿ ಮೇಲೆ ಟಿಡಿಪಿಯ ಮಾಜಿ ಸಚಿವ ಪಿ ಶಂಕರ್ ರಾವ್ ಅವರು ದೂರು ಸಲ್ಲಿಸಿದ್ದಾರೆ. ವೈಎಸ್ ಜಗನ್ ಸ್ಥಿರ ಆಸ್ತಿ, ಕಂಪನಿಗಳ ಮೌಲ್ಯ ಹಾಕಿರುವ ಸಿಬಿಐ ತಂಡ 43,000 ಕೋಟಿ ಅಂಡ್ ಕೌಂಟಿಂಗ್ ಎಂದು ಹೇಳಿತ್ತು.
ಆದರೆ, ವಿಜಯ ಸಾಯಿ ರೆಡ್ಡಿ ಬಾಯಿಬಿಟ್ಟರೆ ಮಾತ್ರ ಈ ಮೊತ್ತ ಹೇಗೆ ಉತ್ಪತ್ತಿಯಾಯಿತು ಎಂಬುದನ್ನು ಸಾಬೀತು ಮಾಡಲು ಸಾಧ್ಯ ಎಂಬ ಸಿಬಿಐಗೆ ಗೊತ್ತು. ಹಾಗಾಗಿ ಮಂಪರು ಪರೀಕ್ಷೆ ಅಸ್ತ್ರ ಪ್ರಯೋಗಿಸಲು ಮುಂದಾಗಿದೆ.












Click it and Unblock the Notifications