ಜಡ್ಜ್ ಗಳ ಬಂಗಲೆಗೆ ಮೈದಾನದ ಜಾಗ ಏಕೆ: ಹೈಕೋರ್ಟ್

ಎಚ್ ಎಸ್ ಆರ್ ಲೇಔಟ್ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾ. ವಿಕ್ರಮ್ ಜಿತ್ ಸೇನ್ ಹಾಗೂ ನ್ಯಾ ಬಿವಿ ನಾಗರತ್ನ ಅವರಿದ್ದ ನ್ಯಾಯಪೀಠ ಈ ರೀತಿ ಆದೇಶ ಹೊರಡಿಸಿದೆ.
ನ್ಯಾಯಾಂಗ ಬಡಾವಣೆಯಲ್ಲಿರುವ ಮೈದಾನವನ್ನು ಸುಮಾರು 10,000ಕ್ಕೂ ಅಧಿಕ ಕುಟುಂಬದ ಮಕ್ಕಳು ಬಳಸುತ್ತಿದ್ದಾರೆ. ಆದ್ದರಿಂದ ಈ ಜಾಗದಲ್ಲಿ ಬಂಗಲೆ ಅಥವಾ ಯಾವುದೇ ಕಟ್ಟಡ ನಿರ್ಮಾಣ ಮಾಡುವುದು ಸರಿಯಿಲ್ಲ ಎಂದು ಎಚ್ ಎಸ್ ಆರ್ ಲೇಔಟ್ ನಿವಾಸಿಗಳು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.
219 ಎಕರೆ ವಿಸ್ತೀರ್ಣದ ನ್ಯಾಯಾಂಗ ಬಡಾವಣೆಯಲ್ಲಿ 2 ಎಕರೆ ವಿಸ್ತೀರ್ಣದ ಜಾಗವನ್ನು ಮೈದಾನ ಎಂದು ಗುರುತಿಸಲಾಗಿದೆ. ಸುಪ್ರೀಂಕೋರ್ಟ್ ಆದೇಶದಂತೆ ಸಾರ್ವಜನಿಕ ಬಳಕೆ ನಿವೇಶನಗಳನ್ನು ಕಟ್ಟಡ ನಿರ್ಮಾಣಕ್ಕೆ ನೀಡುವಂತಿಲ್ಲ ಎಂದು ಅರ್ಜಿದಾರರು ವಾದಿಸಿದರು.
ಈಗ ನ್ಯಾಯಮೂರ್ತಿಗಳಿಗೆ ಒಂದು ತಿಂಗಳೊಳಗೆ ಹೊಸ ಪರ್ಯಾಯ ನಿವೇಶನ ಜಾಗ ಗುರುತಿಸುವಂತೆ ಕೋರ್ಟ್ ಸೂಚಿಸಿದೆ. ಜೊತೆಗೆ ಹೆಬ್ಬಾಳದ ಸಮೀಪ ಆಗ್ರೋ ಇಂಡಸ್ಟ್ರೀಸ್ ಕಾರ್ಪೋರೇಷನ್ ಲಿಮಿಟೆಡ್ ಬಳಿ ಈಗಾಗಲೇ ವಿತರಣೆಯಾಗಿರುವ ನ್ಯಾಯಾಂಗ ನಿವೇಶನಗಳ ಕುರಿತು ಕೂಡಾ ಮಾಹಿತಿ ನೀಡುವಂತೆ ಸರ್ಕಾರಕ್ಕೆ ಕೋರ್ಟ್ ಸೂಚಿಸಿದೆ.











Click it and Unblock the Notifications