ಚಿತ್ರದುರ್ಗ: ಸೈಕೋ ಕಿಲ್ಲರ್ ಗಿರೀಶ್ ಬಂಧನ

ಕೊಲೆ, ಸುಲಿಗೆ, ಕಳ್ಳತನ ಸೇರಿದಂತೆ ಹಲವು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿರುವ ಗಿರೀಶ್ ಮೇಲೆ ಪೊಲೀಸರು ಒಂದು ತಿಂಗಳಿನಿಂದ ಬಲೆ ಬೀಸಿದ್ದರು. ಒಂಟಿ ಮಹಿಳೆಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಹಣ ದೋಚುತ್ತಿದ್ದ ಈ ತಂಡದ ಬಂಧನದಿಂದ ಜನತೆ ನೆಮ್ಮದಿಯ ನಿಟ್ಟುಸಿರುಬಿಟ್ಟಿದ್ದಾರೆ.
ಕರಡಿಹಳ್ಳಿ ಬಳಿ ಗಿರೀಶ್ ಹಾಗೂ ಆತನ ಸಹಚರರು ಮತ್ತೊಂದು ಅಪರಾಧ ಎಸೆಗಲು ಹೊಂಚುಹಾಕಿಕೊಂಡು ಕುಳಿತ್ತಿದ್ದ ಸಂದರ್ಭದಲ್ಲಿ ಪಿಎಸ್ ಐ ಬಾಲಚಂದ್ರನಾಯಕ್ ಅವರ ನೇತೃತ್ವದ ತಂಡ ದಾಳಿ ನಡೆಸಿ, ಬಂಧಿಸಿದೆ.
ಇತ್ತೀಚೆಗೆ ಭರಮಸಾಗರ ಬಳಿ ಆಟೋವೊಂದನ್ನು ಕದ್ದು ಮಹಿಳೆಯರನ್ನು ಡ್ರಾಪ್ ಕೊಡುವ ನೆಪದಲ್ಲಿ ಹಣ, ಆಭರಣ ದೋಚುತ್ತಿದ್ದ ಘಟನೆ ನಡೆದಿತ್ತು. ಗಿರೀಶ್ ಜೊತೆ ಸಾದಿಕ್, ಸದಾಶಿವ ಮತ್ತು ಶ್ರೀನಿವಾಸ ಎಂಬ ಇತರೆ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂಎನ್ ನಾಗರಾಜ್ ತಿಳಿಸಿದ್ದಾರೆ.











Click it and Unblock the Notifications