ಶಿವಸೇನೆ ಸಂಸದನ ಕಾರು ಡಿಕ್ಕಿ: ಬಾಲಕಿಯ ಸಾವು

pune-shiv-sena-mp-raut-car-crash-injured-girl-died
ಮುಂಬೈ, ಜ. 25: ಮಾನಸಿಕ ಅಸ್ವಸ್ಥನೊಬ್ಬ ಪುಣೆಯಲ್ಲಿ ನಿನ್ನೆಯಷ್ಟೇ ಹುಚ್ಚಾಪಟ್ಟೆ ಬಸ್ ಚಲಾಯಿಸಿ, ಒಟ್ಟು 9 ಪಾದಚಾರಿಗಳನ್ನು ಪರಲೋಕಕ್ಕೆ ಕಳಿಸಿದ್ದ ಆತಂಕಕಾರಿ ಸುದ್ದಿ ಓದಿದ್ದಿರಿ. ಅದಕ್ಕೂ ಮುನ್ನ ಮುಂಬೈ-ಪುಣೆ ಎಕ್ಸ್‌ಪ್ರೆಸ್‌ ಹೆದ್ದಾರಿಯಲ್ಲಿ ಶಿವಸೇನೆಯ ಸಂಸದ ಭರತ್ ಕುಮಾರ್ ರಾವತ್‌ ಕಾರು ಡಿಕ್ಕಿ ಹೊಡೆದ ಪರಿಣಾಮ 3 ವರ್ಷದ ಬಾಲಕಿ ಅರುಂಧತಿ ನಿನ್ನೆ ಅಸುನೀಗಿದ್ದಾಳೆ.

ಜನವರಿ 22ರಂದು ಏನಯಿತಪ್ಪಾ ಅಂದರೆ ಶಿವಸೇನೆ ಸಂಸದ ಭರತ್ ಕುಮಾರ್ ರಾವತ್‌ ಕುಳಿತಿದ್ದ ಹೋಂಡಾ ಸಿಟಿ ಕಾರು ಶರವೇಗದಲ್ಲಿ ಹೆದ್ದಾರಿಯಲ್ಲಿ ಚಲಿಸುತ್ತಿತ್ತು. ಇದ್ದಕ್ಕಿದ್ದಂತೆ ಮುಂದಿನ ಟೈರು ಸ್ಫೋಟಿಸಿ, ಕಾರು ಚಾಲಕನ ನಿಯಂತ್ರಣ ತಪ್ಪಿದೆ. ಆ ಕಾರು ಸೀದಾ ಹೋಗಿ ತಂದೆ ಮತ್ತು ಅಜ್ಜಿಯ ಜತೆ ಹೆಜ್ಜೆ ಹಾಕುತ್ತಿದ್ದ ಅರುಂಧತಿಗೆ ಗುದ್ದಿದೆ.

ಕಾರು ಢಿಕ್ಕಿ ಹೊಡೆದ ಪರಿಣಾಮ ಅರುಂಧತಿ ತಲೆಗೆ ತೀವ್ರ ಪೆಟ್ಟಾಗಿತ್ತು. ಮಗುವನ್ನು ತಕ್ಷಣ ಚಿಂಚಿವಾಡದ ಆದಿತ್ಯ ಬಿರ್ಲಾ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ, ಬುಧವಾರ ಮುಂಜಾನೆ ಮಗು ಸಾವನ್ನಪ್ಪಿದೆ.

ಘಟನೆಯಲ್ಲಿ ಅರುಂಧತಿಯ ತಂದೆ ರಾಹುಲ್ ಆನಂದ್‌ಗೂ ಗಾಯಗಳಾಗಿವೆ. ಅವರಿಗೂ ಭುಜದ ಶಸ್ತ್ರಕ್ರಿಯೆ ನಡೆಸಲಾಗಿದೆ ಮತ್ತು ಅವರ ಅತ್ತೆ ಶಕುಂತಲಾ ಬಾಲಕೃಷ್ಣಗೂ ಬಲಗೈ ಮುರಿದಿದೆ.

ಕೇಸ್ ಇಲ್ಲ; ಡ್ರೈವರ್ ಬಚಾವ್: ಟೈರು ಸ್ಫೋಟಿಸಿ, ಕಾರು ನಿಯಂತ್ರಣ ತಪ್ಪಿ ಅಪಘಾತವಾಗಿದೆ. ಇದರಲ್ಲಿ ಸಂಸದ ಭರತ್ ಕುಮಾರ್ ರಾವತ್‌ ಅವರ ಕಾರನ್ನು ಚಲಾಯಿಸುತ್ತಿದ್ದ ಭರತ್ ಕುಮಾರ್ ರಾವುತನದು ತಪ್ಪೇನು ಇಲ್ಲ ಎಂದು ಹೇಳಿ ಪೊಲೀಸರು ಆತನ ವಿರುದ್ಧ ಯಾವುದೇ ಕೇಸು ದಾಖಲಿಸಿಲ್ಲ.

ಆದರೆ ಆಕಸ್ಮಿಕ ಅಪಘಾತ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ ಎಂದು ಲೋನಾವಾಲಾ ಗ್ರಾಮೀಣ ಠಾಣೆಯ ಇನ್ಸ್‌ಪೆಕ್ಟರ್ ಮೋಹನ್ ಜಾಧವ್ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+