ಜಗನ್ ನೆಂಟ ಸುನಿಲ್ ರೆಡ್ಡಿ ಜೈಲಿಗೆ

jagan-mohan-reddy-kith-sunil-reddy-sent-to-jail
ಹೈದರಾಬಾದ್, ಜ.26: ಎಮ್ಮಾರ್ ಟೌನ್ ಶಿಪ್ ಹಗರಣದಲ್ಲಿ ಮಂಗಳವಾರ ಸಿಬಿಐ ಬಂಧನಕ್ಕೊಳಗಾಗಿದ್ದ ಜಗನ್ ಭಾವಮೈದುನ ಎನ್. ಸುನಿಲ್ ರೆಡ್ಡಿಗೆ ಫೆ.1 ವರೆಗೂ ಜೈಲು ಬಂಧನ ಪ್ರಾಪ್ತಿಯಾಗಿದೆ. ಸುನಿಲ್, ವೈಎಸ್ಆರ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಜಗನ್ ಮೋಹನ್ ರೆಡ್ಡಿ ಅವರ ಪತ್ನಿಯ ಸೋದರ ಸಂಬಂಧಿ.

ಬುಧವಾರ ಸುನಿಲನನ್ನು ಸಿಬಿಐ ವಿಶೇಷ ಕೋರ್ಟಿನಲ್ಲಿ ಹಾಜರುಪಡಿಸಲಾಯಿತು. ಆ ಸಂದರ್ಭದಲ್ಲಿ, 'ಸುನಿಲನನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಬೇಕಾಗಿದೆ. 15 ದಿನಗಳ ಕಾಲ ನಮ್ಮ ಕಸ್ಟಡಿಗೆ ಒಪ್ಪಿಸಿ' ಎಂದು ಸಿಬಿಐ ಜಂಟಿ ನಿರ್ದೇಶಕ ವಿವಿ ಲಕ್ಷ್ಮಿನಾರಾಯಣ ಅವರು ಮನವಿ ಮಾಡಿದರು.

ಆದರೆ ಸುನಿಲ್ ಪರ ವಕೀಲರು ಸುನಿಲ್ ಬಂಧನ ಅನಿರೀಕ್ಷಿತವಾಗಿ ದಿಢೀರನೆ ಆಗಿದೆ. ಪ್ರತಿವಾದ ಮಂಡಿಸಲು ಕಾಲಾವಕಾಶ ಬೇಕು ಎಂದು ಕೋರ್ಟಿಗೆ ಮೊರೆಹೋದರು. ಅದನ್ನು ಮನ್ನಿಸಿದ ಕೋರ್ಟ್, ವಿಚಾರಣೆಯನ್ನು ಶುಕ್ರವಾರಕ್ಕೆ ಮುಂದೂಡಿತು.

ಎಮ್ಮಾರ್ ಟೌನ್ ಶಿಪ್ ಹಗರಣದಲ್ಲಿ ಸಿಬಿಐ ಬಂಧನದಲ್ಲಿರುವ ಉದ್ಯಮಿ ತುಮ್ಮಲ ರಂಗಾರಾವ್ ಕೋರ್ಟಿನಲ್ಲಿ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾರೆ. ಅದರಂತೆ, ಪ್ರಕರಣದ ಪ್ರಮುಖ ಆರೋಪಿ ಕೋನೇರು ಪ್ರಸಾದ್ ಆದೇಶಿಸಿದಂತೆ ಸುನಿಲ್ ಗೆ 80 ಕೋಟಿ ರುಪಾಯಿ ನೀಡಿರುವುದಾಗಿ ಸಿಬಿಐ ಹೇಳಿದೆ. ಎಮ್ಮಾರ್ ಹಗರಣದಲ್ಲಿ ಕೋನೇರು ಪ್ರಸಾದ್ 138 ಕೋಟಿ ರುಪಾಯಿ ಅಕ್ರಮ ಎಸಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+