ಭಾರತದ ಅತೀದೊಡ್ಡ ರಾಜಕೀಯ ಸಮೀಕ್ಷೆ. ನೀವು ಭಾಗವಹಿಸಿದ್ದೀರಾ?
 • search

ಬನ್ನೂರಮಠ ನಿರಾಕರಣೆಗೆ ಭೂಕಳಂಕ ಕಾರಣವಲ್ಲ: ಭಾರದ್ವಾಜ್

By Srinath
Subscribe to Oneindia Kannada
For Quick Alerts
ALLOW NOTIFICATIONS
For Daily Alerts
  lokayukta-bannur-matt-appointment-new-twist-bhardwaj
  ಬೆಂಗಳೂರು, ಜ.22: ಲೋಕಾಯುಕ್ತ ಪೀಠಕ್ಕೆ ನ್ಯಾ ಬನ್ನೂರುಮಠರ ನೇಮಕಕ್ಕೇ ಅಸ್ತು ಅನ್ನದಿರಲು 'ಅಕ್ರಮ ಸೈಟ್ ವಿವಾದ' ಕಾರಣವಲ್ಲ ಎಂದು ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರು ರಾಜಭನವದ ಪಕ್ಕದಲ್ಲೇ ಇರುವ ರಾಜ್ಯದ ಶಕ್ತಿಕೇಂದ್ರ ವಿಧಾನಸೌಧದತ್ತ ಭಾನುವಾರ ಹೊಸ ಬಾಂಬ್ ಎಸೆದಿದ್ದಾರೆ.

  ಇದುವರೆಗೂ, ಖಾಲಿ ಬಿದ್ದಿದ್ದ ಮಹತ್ವದ ಲೋಕಾಯುಕ್ತ ಪೀಠವೇರಲು ನ್ಯಾಯಮೂರ್ತಿ ಸಮೀನ್‌ದಾರ್ ರುದ್ರಯ್ಯ ಬನ್ನೂರುಮಠ ಅವರ ಹೆಸರನ್ನು ನಿರಾಕರಿಸುತ್ತಿರುವುದಕ್ಕೆ 'ಅಕ್ರಮ ಸೈಟ್ ಕಬಳಿಕೆ' ಕಾರಣವೆಂದು ಭಾವಿಸಲಾಗಿತ್ತು. ಆದರೆ ಇಂದು ಅಕ್ರಮ ನಿವೇಶನ ಕಾರಣವಲ್ಲ. ಅವರ ನೇಮಕಕ್ಕೆ ಅನುಮತಿಸದಿರಲು ಬೇರೆಯದೇ ಕಾರಣವಿದೆ ಎಂದು ಭಾರದ್ವಾಜ್ ಸ್ಪಷ್ಟಪಡಿಸಿದ್ದಾರೆ.

  ಹಾಗೆ ನೋಡಿದರೆ ಭಾರದ್ವಾಜ್ ಅವರು ನ್ಯಾ ಬನ್ನೂರುಮಠ ನೇಮಕಕ್ಕೆ ಕೊಕ್ಕೆ ಹಾಕಲು ಬೇರೆಯದೇ ಕಾರಣವಿದೆ ಎಂಬುದರ ಬಗ್ಗೆ ಈ ಹಿಂದೆಯೇ ಸುಳಿವು ನೀಡಿದ್ದರು. ಆದರೆ ಇಂದು ಅದನ್ನು ದೃಢಪಡಿಸಿದ್ದಾರಾದರೂ ಅಂತಹ 'ಘನ ಕಾರಣ' ಏನೆಂಬುದನ್ನು ಬಹಿರಂಗಪಡಿಸಲಿಲ್ಲ. 'ನ್ಯಾ ಬನ್ನೂರುಮಠರ ವಿರುದ್ಧ ಻ನೇಖ ಆರೋಪಗಳಿವೆ ಎಂದು ಈ ಹಿಂದೆ ಸ್ವತಃ ಭಾರದ್ವಾಜ್ ಅವರೇ ಹೇಳಿದ್ದರು.

  'ನ್ಯಾ ಬನ್ನೂರುಮಠರ ಬಗ್ಗೆ ವೈಯಕ್ತಿಕ ದ್ವೇಷವಿಲ್ಲ. ಆದರೂ ಅವರು ಲೋಕಾಯುಕ್ತ ಸ್ಥಾನಕ್ಕೆ ನೇಮಕವಾಗುವುದಕ್ಕೆ ನನ್ನ ತೀವ್ರ ವಿಓಧವಿದೆ. ಯಾವುದೇ ಕಾರಣಕ್ಕೂ ನಾನು ಸಮ್ಮತಿ ಸೂಚಿಸುವುದಿಲ್ಲ. ಈ ಬಗ್ಗೆ ಸರಕಾರಕ್ಕೂ ಸ್ಪಷ್ಟವಾಗಿ ತಿಳಿಸಿದ್ದೇನೆ' ಎಂದು ರಾಜ್ಯಪಾಲ ಭಾರದ್ವಾಜ್ ಅವರು ಕಡ್ಡಿ ಮುರಿದಂತೆ ಹೇಳಿದರು.

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  English summary
  Justice SR Bannur Matt appointment as Karnataka Lokayukta. Governor HR Bhardwaj gives new twist, says its is not due to land scam against his name. 

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more