• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನಕಲಿ ಮೀಟರ್, ಗೂಂಡಾ ಡ್ರೈವರ್ ಕಂಡ್ರೆ SMS ಮಾಡಿ

By Mahesh
|
Autorickshaw Meter Fault
ಬೆಂಗಳೂರು, ಜ.20: ಕಾನೂನು ಮಾಪನಶಾಸ್ತ್ರ ಇಲಾಖೆ ಬೆಂಗಳೂರು ಮಹಾನಗರದಲ್ಲಿ ಸಂಚರಿಸುವ ಆಟೋರಿಕ್ಷಾ ಮೀಟರ್‌ಗಳ ತಪಾಸಣೆಯನ್ನು ನಡೆಸಿ, ತಪ್ಪಿಸ್ಥರಿಗೆ ದಂಡ ವಿಧಿಸುವ ಪ್ರಕ್ರಿಯೆ ನಡೆಯುತ್ತಲೆ ಇರುತ್ತದೆ. ಜೊತೆಗೆ ಸಾಫ್ಟ್ ವೇರ್ ಟೆಕ್ಕಿಗಳು ವೆಬ್, ಎಸ್ಎಂಎಸ್ ಮೂಲಕ ನಕಲಿ ಮೀಟರ್, ಗೂಂಡಾ ಡ್ರೈವರ್ ಗಳ ಬಗ್ಗೆ ದೂರು ನೀಡಲು ವ್ಯವಸ್ಥೆ ಕಲ್ಪಿಸಿದ್ದಾರೆ.

ಎಲ್ಲಾ ಚಾಲಕರು ಪಾಂಡುರಂಗನಂತೆ ಪ್ರಾಮಾಣಿಕರಾಗಿರುವುದಿಲ್ಲ ಎಂಬುದು ಎಲ್ಲರಿಗೂ ತಿಳಿದ ಸತ್ಯ. 'ಆಟೋ ವಾಚ್' ಎಂಬ ವೆಬ್ ತಾಣವನ್ನು ಆರಂಭಿಸಿರುವ ಸಮಾನಮನಸ್ಕ ನಾಗರೀಕರು, ಆಟೋದವರ ದಬ್ಬಾಳಿಕೆಯನ್ನು ಹತ್ತಿಕ್ಕಲು ಆಂದೋಳನ ನಡೆಸಿದ್ದಾರೆ.

ಸ್ವಲ್ಪಮಟ್ಟಿಗೆ ಮೀಟರ್ ಜಾಮ್ ತಂಡದ ವಿಸ್ತೃತ ಯೋಜನೆಯಂತೆ ಇವರ ಕಾರ್ಯಕ್ರಮಗಳು. ಸಾರಿಗೆ ಇಲಾಖೆ ವೆಬ್ ಸೈಟ್ ಗೆ ಕೂಡಾ ಲಿಂಕ್ ನೀಡಲಾಗಿದ್ದು, ಆಟೋರಿಕ್ಷಾ ಚಾಲಕರ ದುರ್ವತನೆ ಹತ್ತಿಕ್ಕಲು ಸುಲಭ ಮಾರ್ಗಗಳಿವೆ ಎನ್ನುತ್ತಾರೆ ಸಂಘಟಕಿ ಸುಧಾ ನಾಯರ್.

ಇದನ್ನು ಬಳಸಿ:
* ಸಾರಿಗೆ ಇಲಾಖೆ ಸಹಾಯವಾಣಿ :080-2225 4900/080-2235 3785. (ಕಚೇರಿ ಸಮಯ 10 ಗಂಟೆಯಿಂದ 5.30 ಗಂಟೆ)
* ವಾಹನ ಸಂಖ್ಯೆ(KA-aa-bb-cdef) ನಮೂದಿಸಿ transcom@kar.nic.in ಇಮೇಲ್ ಕಳಿಸಬಹುದು.
* ಕಾನೂನು ರೀತಿ ಸಮಸ್ಯೆಗಳಿಗೆ cat@kslmd.com or clm@kslmd.com ಗೆ ಮೇಲ್ ಮಾಡಬಹುದು.
* http://bangaloreauto.kiirti.org/ ವೆಬ್ ತಾಣಕ್ಕೆ ಭೇಟಿ ನೀಡಿ ಹೆಚ್ಚಿನ ಮಾಹಿತಿ ಜೊತೆಗೆ, ಆಂಡ್ರಾಡ್ ಅಪ್ಲಿಕೇಷನ್ ಡೌನ್ ಲೋಡ್ ಮಾಡಿ ಬಳಸಬಹುದು.

ದೂರು ನೀಡಲು ಬದಲಿ ಮಾರ್ಗ:

ಹೆಚ್ಚಿಗೆ ದುಡ್ಡು ಕೇಳಿದರೆ 080-25588444/555ಗೆ ಕರೆ ಮಾಡಿ(24 ತಾಸುಗಳ IVRS ಆಧಾರಿತ ಸೇವೆ)

ಎಸ್ಎಂಎಸ್:

ಏರ್ ಟೆಲ್ ಗ್ರಾಹಕರು: 52225 ಹಾಗೂ
ಇತರೆ ಗ್ರಾಹಕರು 9663952225ಗೆ ಎಸ್ ಎಂಎಸ್ ಮಾಡಬಹುದು. ಆಟೋರಿಕ್ಷಾ ಸಂಖ್ಯೆ, ಸ್ಥಳ, ಸಮಯ ನಮೂದಿಸಬೇಕು.

ಉದಾ: ಆಟೋ KA01XY1234 ರಿಚ್ಮಂಡ್ ರಸ್ತೆ ಇಂದ ಕೋರಮಂಗಲ 6.30PM ಎಂದು ಕೀ ಮಾಡಿ 52225ಗೆ ಕಳಿಸಿ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ಇನ್ನಷ್ಟು ಆಟೋರಿಕ್ಷಾ ಸುದ್ದಿಗಳುView All

English summary
Bangaloreans specially techies are sick of constantly being ripped off by auto rickshaw drivers. some of the techies countering auto drivers with creating new apps and website, complaints through sms..etc.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more