ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

5 ರಾಜ್ಯಗಳ ಚುನಾವಣೆ ನಂತರ ಸಂಪುಟ ವಿಸ್ತರಣೆ

By Mahesh
|
Google Oneindia Kannada News

DV Sadananda gowda
ಪುತ್ತೂರು, ಜ.18: ಸಚಿವ ಸಂಪುಟ ವಿಸ್ತರಣೆ ಹಲವು ತಿಂಗಳುಗಳಿಂದ ನೆನೆಗುದಿಗೆ ಬಿದ್ದಿದೆ ಎಂಬುದು ತಿಳಿದಿದೆ. ಆದರೆ, ಆತುರಾತುರಕ್ಕೆ ಸಂಪುಟ ವಿಸ್ತರಣೆ ಬಗ್ಗೆ ನಿರ್ಣಯ ಕೈಗೊಳ್ಳಲು ಸಾಧ್ಯವಿಲ್ಲ. ಪಂಚರಾಜ್ಯಗಳ ಅಸೆಂಬ್ಲಿ ಚುನಾವಣೆ ಮುಗಿದ ಬಳಿಕ ಈ ಬಗ್ಗೆ ನಿರ್ಧರಿಸಲಾಗುವುದು ಎಂದು ಮುಖ್ಯಮಂತ್ರಿ ಡಿವಿ ಸದಾನಂದ ಗೌಡ ಹೇಳಿದ್ದಾರೆ.

ಮಾಧ್ಯಮಗಳಲ್ಲಿ ವರದಿಯಾದಂತೆ ಕುರ್ಚಿ ಉಳಿಸಿಕೊಳ್ಳಲು ನಾನು ಯಾವುದೇ ಪೂಜೆ ಪುನಸ್ಕಾರವನ್ನು ಮಾಡಿಸುತ್ತಿಲ್ಲ ಎಂದಿದ್ದಾರೆ. ಸ್ಥಳೀಯ ದೈವದ ಆಶೀರ್ವಾದ ಸಿಎಂ ಸದಾನಂದ ಗೌಡರಿಗೆ ಸಿಕ್ಕಿದೆ. ಅವರ ಸ್ಥಾನಕ್ಕೆ ಯಾವುದೇ ತೊಂದರೆಯಿಲ್ಲ ಎಂದು ಕೆಲವು ಮಾಧ್ಯಮಗಳಲ್ಲಿ ವರದಿಯಾಗಿತ್ತು.

ಸಂಪುಟ ಸ್ಥಾನದ ಆಕಾಂಕ್ಷಿಗಳ ಪಟ್ಟಿ ದೊಡ್ಡದಿದೆ. ಅನುಭವದ ಆಧಾರದ ಮೇಲೆ ಹೈಕಮಾಂಡ್ ಸೂಚಿಸಿದ ಅಭ್ಯರ್ಥಿಗಳಿಗೆ ಸ್ಥಾನ ದೊರೆಯುತ್ತದೆ. ಕೊಡಗಿಗೆ ಸಚಿವ ಸ್ಥಾನ ನೀಡುವ ಭರವಸೆ ನೀಡಿರುವುದು ನಿಜ. ಸಿಟಿ ರವಿ ಅವರನ್ನು ದೆಹಲಿ ರಾಜಕಾರಣಕ್ಕೆ ಕಳುಹಿಸಿ ಮೂಲೆಗುಂಪಾಗಿಸಲಾಗುತ್ತದೆ ಎಂಬ ಮಾತಲ್ಲಿ ಹುರುಳಿಲ್ಲ ಎಂದು ಸದಾನಂದ ಗೌಡ ಪುನರುಚ್ಚರಿಸಿದರು.

ಪಕ್ಷದ ಬಲವರ್ಧನೆಗಾಗಿ ಯಡಿಯೂರಪ್ಪ ಅವರು ಕೈಗೊಂಡಿರುವ ಪ್ರವಾಸಕ್ಕೆ ರಾಜ್ಯಾಧ್ಯಕ್ಷ ಕೆಎಸ್ ಈಶ್ವರಪ್ಪ ಹಾಗೂ ನಾನು ಬೆಂಬಲ ನೀಡಿದ್ದೇವೆ. ಅನುಕೂಲವಾದಾಗ ಅವರ ಪ್ರವಾಸದಲ್ಲಿ ಪಾಲ್ಗೊಳ್ಳುತ್ತೇವೆ ಎಂದು ಸದಾನಂದ ಗೌಡ ಹೇಳಿದರು.

English summary
CM Sadananda Gowda hints Karnataka government cabinet expansion will take only after Assembly elections to five states are over. BJP Crisis is over, Kodagu will get cabinet berth he added.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X