ವಕೀಲರ ಪುಂಡಾಟಿಕೆ: ಪೊಲೀಸರೇ ಬಲಿಪಶು-ಗೃಹಸಚಿವ

ಟ್ರಾಫಿಕ್ ಜಾಮ್ ನಿಂದ ತೀವ್ರಬಾಧೆಗೊಳಗಾದ ಶಾಂತಿಪ್ರಿಯ ಬೆಂಗಳೂರಿನ ಜನತೆ ಒಂದೇ ಸಮನೆ ದಟ್ಸ್ ಕನ್ನಡ ಕಚೇರಿಗೆ ಫೋನ್ ಮತ್ತು ಇಮೇಲ್ ಗಳ ಮೂಲಕ ತಮ್ಮ ರೋಷ ಹೊರಹಾಕುತ್ತಿದ್ದಾರೆ.
ಈ ಮಧ್ಯೆ, ಆಯಾ ಇಲಾಖೆಗಳ ಹೊಣೆ ಹೊತ್ತ ಗೃಹ ಸಚಿವ ಆರ್ ಅಶೋಕ್ ಮತ್ತು ಕಾನೂನು ಸಚಿವ ಸುರೇಶ್ ಕುಮಾರ್ ವಕೀಲರ ಪುಂಡಾಟಿಕೆಯನ್ನು ಕಟು ಶಬ್ದಗಳಿಂದ ಖಂಡಿಸಿದ್ದಾರೆ.
'ಇಂತಹ ಘಟನೆಗಳು ನಡೆದಾಗ ಹೆಚ್ಚಾಗಿ ಪೊಲೀಸರೇ ಬಲಿಪಶುಗಳಾಗುತ್ತಾರೆ. ಅದಕ್ಕಿಂತ ಹೆಚ್ಚಾಗಿ ವಕೀಲರು ಪೊಲಸರ ಮೇಲೆ ಮುಗಿಬೀಳುವುದನ್ನೇ ಗೀಳಾಗಿಸಿಕೊಂಡಿದ್ದಾರೆ. ಪೊಲೀಸರು ಅಸಹಯಾಕರಾಗಿಲ್ಲ. ತಾಳ್ಮೆ ಬಹಿಸಿ,ಪ್ರಕರಣವನ್ನು ತಿಳಿಗೊಳಿಸಲು ಯತ್ನಿಸಿದ್ದಾರೆ. ಘಟನಾವಳಿ ಬಗ್ಗೆ ವರದಿ ಸಲ್ಲಿಸುವಂತೆ ಪೊಲೀಸ್ ಮಹಾ ನಿರ್ದೇಶಕರಿಗೆ ಸೂಚಿಸಿದ್ದೇನೆ' ಎಂದು ಅಶೋಕ್ ಹೇಳಿದ್ದಾರೆ.
ವಕೀಲರು ಬೀದಿಗೆ ಬಂದಿದ್ದು ಸರಿಯಲ್ಲ: ತಾಳ್ಮೆ ವಹಿಸಿದ ಸಮಸ್ಯೆಯ ಆರಂಭಿಕ ಹಂತದಲ್ಲೇ ವಕೀಲರು ಬೀದಿಗೆ ಬಂದಿದ್ದು ಸರಿಯಲ್ಲ. ಅವರ ಈ ವರ್ತನೆಯಿಂದ ಸಮಾಜದ ಇತರೆ ವರ್ಗದವರಿಗೆ ತಪ್ಪು ಸಂದೇಶ ರವಾನಿಸಿದಂತಾಗಿದೆ' ಎಂದು ಸ್ವತಃ ಕಾನೂನು ಸಚಿವರೇ ತಮ್ಮ ಬಾಂಧವರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.












Click it and Unblock the Notifications