ಮೈಲಾಪುರ ಜಾತ್ರೆಯಲ್ಲಿ ಪಾರಾದರೂ ಉಳಿಯದ ಕುರಿಗಳು
ಯಾದಗಿರಿ,
ಜ. 17 : ಮೈಲಾಪುರ ಜಾತ್ರೆಯ ಮೆರವಣಿಗೆ ಸಂದರ್ಭದಲ್ಲಿ ಪಲ್ಲಕ್ಕಿಯ ಮೇಲೆ ಕುರಿ ಎಸೆಯುವುದನ್ನು ನಿಷೇಧಿಸಿ ಪಾರು ಮಾಡಿದ್ದ ಕುರಿಮರಿಗಳನ್ನು ದುರ್ದೈವವಶಾತ್ ಮತ್ತೆ ಕಸಾಯಿಗಳ ಕೈಗೆ ಒಪ್ಪಿಸಿದಂತಾಗಿದೆ. ಸಾವಿರಾರು ಕುರಿಗಳಲ್ಲಿ 38 ಕುರಿಮರಿಗಳು ಅಮ್ಮನ ಹಾಲಿಲ್ಲದೆ ಸಾವನ್ನಪ್ಪಿವೆ. id="toptextpromo">ಸುಮಾರು
1404 ಕುರಿಗಳನ್ನು ತಮ್ಮ ಸುಪರ್ದಿಗೆ ತೆಗೆದುಕೊಂಡ ನಂತರ ಜಿಲ್ಲಾಡಳಿತ ಅವುಗಳನ್ನು ಪಶುಸಂಗೋಪನಾ ಇಲಾಖೆಗೆ ಒಪ್ಪಿಸಿತ್ತು. ಅವುಗಳಲ್ಲಿ ಸುಮಾರು 38 ಕುರಿಮರಿಗಳು ಹಾಲಿಲ್ಲದೇ ದಾರುಣವಾಗಿ ಸಾವನ್ನಪ್ಪಿವೆ. 60 ದಿನದ ಒಳಗಿನ ಇವುಗಳಿಗೆ ಕುರಿಯ ಹಾಲು ಹೊರತುಪಡಿಸಿ ಬೇರೆ ಹಾಲು ಅಪಥ್ಯ. ಹಾಗಾಗಿ ಸಾವನ್ನಪ್ಪಿವೆ ಎನ್ನುವುದು ಪಶು ಸಂಗೋಪನಾ ಇಲಾಖೆ ಸಮಜಾಯಿಷಿ. id='are-slot-1' class='oiad oi-axt oiadv'> id='top-searched-articles'>ಪಲ್ಲಕ್ಕಿ
ಮೇಲೆ ಎಸೆತ ಕುರಿಗಳು ಕೆಳಗೆ ಬಿದ್ದ ನಂತರ ಭಕ್ತರ ಕಾಲಿಗೆ ಸಿಲುಕಿ ಸಾವನ್ನಪ್ಪುತ್ತವೆ ಎನ್ನುವ ಕಳಕಳಿಯಿಂದ ಕುರಿ ಎಸೆತ ನಿಷೇಧಿಸಿದ್ದು ಶ್ಲಾಘನೀಯ. ಕುರಿಗಳ ಜಮಾವಣೆ ಕುರಿತು ಮೊದಲೇ ಮಾಹಿತಿ ಇದ್ದರೂ ಇಲಾಖೆ ಮುಂಜಾಗ್ರತೆ ತೆಗೆದುಕೊಳ್ಳುವಲ್ಲಿ ನಿರ್ಲಕ್ಷ್ಯ ತೋರಿದ್ದೇಕೆ? ಒಂದು ವೇಳೆ ಕುರಿಗಳನ್ನು ಎಸೆದಿದ್ದರೂ ಇಷ್ಟೊಂದು ಕುರಿಮರಿಗಳು ಸಾಯುತ್ತಿರಲಿಲ್ಲ ಎಂದು ಭಕ್ತಾದಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.











Click it and Unblock the Notifications