ಹಬ್ಬ ಕಳೆದರೂ ಎಲ್ ಪಿಜಿ ಮುಷ್ಕರ ನಿಂತಿಲ್ಲ

LPG chaos
ಬೆಂಗಳೂರು, ಜ.16: ಮಕರ ಸಂಕ್ರಾಂತಿ ಹಬ್ಬ ಕಳೆದರೂ ಅಡುಗೆ ಅನಿಲ ಸರಬರಾಜು ಲಾರಿ ಮಾಲೀಕರ ಮುಷ್ಕರ ಮುಗಿದಿಲ್ಲ. ಎಲ್ ಪಿಜಿ ಮುಷ್ಕರ 4ನೇ ದಿನಕ್ಕೆ ಕಾಲಿರಿಸಿದೆ.ತೈಲ ಕಂಪನಿಗಳ ಜತೆಗೆ ಲಾರಿ ಮಾಲೀಕರ ಮಾತುಕತೆ ನಿರಂತರವಾಗಿ ಸಾಗಿದ್ದು ಇನ್ನೂ ಫಲಪ್ರದವಾಗಿಲ್ಲ.

ಲಾರಿ ಮಾಲೀಕರ ಸಂಘದ ಉಪಾಧ್ಯಕ್ಷ ನಾರಾಯಣಪ್ಪ ಪ್ರತಿಕ್ರಿಯಿಸಿ, 'ನಮ್ಮ ಬೇಡಿಕೆಗಳಿಗೆ ತೈಲ ಕಂಪನಿಗಳ ಮಾಲೀಕರು ಇನ್ನೂ ಸ್ಪಂದಿಸಿಲ್ಲ. ಹೀಗಾಗಿ, ಮಾತುಕತೆ ಮುಂದುವರಿಯಲಿದೆ.

ಗ್ರಾಹಕರನ್ನು ಗಮನದಲ್ಲಿಟ್ಟುಕೊಂಡು ಸೋಮವಾರ ಸಂಜೆಯೊಳಗೆ ಬೇಡಿಕೆ ಬಗೆಹರಿಸುವುದಕ್ಕೆ ಎಲ್ಲ ಪ್ರಯತ್ನ ಮಾಡುತ್ತೇವೆ. ಇಲ್ಲದಿದ್ದರೆ ಮುಷ್ಕರ ಮುಂದುವರಿಸುವುದು ಅನಿವಾರ್ಯ' ಎಂದು ಹೇಳಿದ್ದಾರೆ.

ಒಂದು ವೇಳೆ ಸೋಮವಾರ ಮಧ್ಯಾಹ್ನ ಅಥವಾ ಸಂಜೆ ಮುಷ್ಕರ ಅಂತ್ಯಗೊಂಡರೂ ದಾರಿಮಧ್ಯೆ ಇರುವ ಗ್ಯಾಸ್‌ ಟ್ಯಾಂಕರ್‌ ಲಾರಿಗಳು ಬೆಂಗಳೂರು ಸೇರುವುದಕ್ಕೆ ಮತ್ತೊಂದು ದಿನ ಬೇಕಾಗುತ್ತದೆ. ಅಲ್ಲಿಂದ ಅವು ಗ್ಯಾಸ್‌ ಫಿಲ್ಲಿಂಗ್‌ ಘಟಕಗಳಿಗೆ ಹೋಗಬೇಕು.

ನಂತರ ಗ್ಯಾಸ್‌ ರೀಫಿಲ್ಲಿಂಗ್‌ ಆಗಿ ಡೀಲರ್‌ಗಳಿಗೆ ರವಾನೆಯಾಗುವಷ್ಟರಲ್ಲಿ ಎರಡು ದಿನ ಬೇಕಾಗಬಹುದು. ಹೀಗಾಗಿ, ಎಚ್‌ಪಿ ಮತ್ತು ಭಾರತ್‌ ಗ್ಯಾಸ್‌ ಕಂಪನಿಗಳ ಗ್ರಾಹಕರಿಗೆ ಸೋಮವಾರದಿಂದ ತೊಂದರೆಯಾಗುವ ಸಾಧ್ಯತೆ ಹೆಚ್ಚಿದೆ.

ಗ್ಯಾಸ್‌ ಸರಬರಾಜು ಸ್ಥಗಿತ: ನಾಲ್ಕು ದಿನಗಳಿಂದ ಅಡುಗೆ ಅನಿಲ ಶೇಖರಣಾ ಘಟಕಗಳಿಗೆ ಗ್ಯಾಸ್‌ ಸರಬರಾಜು ಸಂಪೂರ್ಣ ಸ್ಥಗಿತಗೊಂಡಿವೆ. ಈಗಾಗಲೇ ದಾಸ್ತಾನು ಇದ್ದ ಗ್ಯಾಸ್‌ ಕೂಡ ಬಹುತೇಕ ಖಾಲಿ ಆಗಿದೆ. ಅದರಲ್ಲಿಯೂ, ಎಚ್‌ಪಿ ಮತ್ತು ಭಾರತ್‌ ಗ್ಯಾಸ್‌ ಕಂಪನಿಗಳಿಗೆ ಹೆಚ್ಚಿನ ಸಮಸ್ಯೆ ಉಂಟಾಗಿದೆ.

ಈ ಎರಡು ಕಂಪನಿಗಳಿಗೆ ಟ್ಯಾಂಕರ್‌ ಲಾರಿ ಮೂಲಕವೇ ಅಡುಗೆ ಅನಿಲ ಸರಬರಾಜು ಆಗಬೇಕು. ಆದರೆ, ಇಂಡೇನ್‌ ಗ್ಯಾಸ್‌ ಕಂಪನಿಗೆ ಚೆನ್ನೈನಿಂದ ರೈಲು ಮೂಲಕ ಗ್ಯಾಸ್‌ ಸರಬರಾಜು ಆಗುತ್ತಿದೆ. ಹೀಗಾಗಿ, ಇಂಡೇನ್‌ ಗ್ರಾಹಕರನ್ನು ಲಾರಿ ಮಾಲೀಕರ ಮುಷ್ಕರ ಅಷ್ಟೊಂದು ಪರಿಣಾಮ ಬೀರುತ್ತಿಲ್ಲ.

ಒಂದು ವೇಳೆ ಸೋಮವಾರದೊಳಗೆ ಮುಷ್ಕರ ಅಂತ್ಯಗೊಳ್ಳದಿದ್ದರೆ, ಮಂಗಳವಾರದಿಂದ ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲ ನಗರಗಳಲ್ಲಿಯೂ ಅಡುಗೆ ಅನಿಲದ ಕ್ಷಾಮ ತಲೆದೋರಲಿವೆ. ಇನ್ನು ಈಗಾಗಲೇ ಖಾಲಿ ಸಿಲಿಂಡರ್‌ ಮನೆಯಲ್ಲಿಟ್ಟುಕೊಂಡಿರುವ ಗ್ರಾಹಕರು ಸೋಮವಾರದಿಂದ ತಮ್ಮ ಗ್ಯಾಸ್‌ ಏಜೆನ್ಸಿಗಳಿಗೆ ಮುಗಿ ಬೀಳುವ ಸಾಧ್ಯತೆಯಿದೆ. (ಪಿಟಿಐ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+