ಉಡುಪಿ ಪರ್ಯಾಯ: ಮುಸ್ಲಿಂ, ಕ್ರೈಸ್ತರಿಂದ ಹೊರೆಕಾಣಿಕೆ

ರಾಜ್ಯ ಕ್ರೈಸ್ತ ಒಕ್ಕೂಟದ ಉಡುಪಿ ಜಿಲ್ಲಾ ಘಟಕದ ಅಧ್ಯಕ್ಷರ ನೇತ್ರತ್ವದಲ್ಲಿ ಮೆರವಣಿಗೆಯಲ್ಲಿ ತೆರಳಿದ ಕ್ರೈಸ್ತ ಬಾಂಧವರು ಸೋದೆ ಮಠಕ್ಕೆ ಹೊರೆಕಾಣಿಕೆ ಸಮರ್ಪಿಸಿದ್ದಾರೆ. ಎರಡು ವರ್ಷಕ್ಕೊಮ್ಮೆ ನಡೆಯುವ ಪರ್ಯಾಯ ಮಹೋತ್ಸವಕ್ಕೆ ಉಡುಪಿ ಮತ್ತು ದಕ್ಷಿಣಕನ್ನಡ ಜಿಲ್ಲೆಯ ವಿವಿಧ ಭಾಗಗಳಿಂದ ಹೊರೆಕಾಣಿಕೆ ಸಮರ್ಪಣೆಯಾಗುವುದು ವಾಡಿಕೆ.
ಪರ್ಯಾಯ ಸರ್ವಜ್ಞ ಪೀಠವನ್ನೇರಲಿರುವ ಶ್ರೀ.ವಿಶ್ವವಲ್ಲಭತೀರ್ಥ ಶ್ರೀಪಾದರು ವಿವಿಧ ದೇವಾಲಯಗಳಿಗೆ ಭೇಟಿ ನೀಡಿ ಭಕ್ತವೃಂದದಿಂದ ಗೌರವಾರ್ಪಣೆ ಪಡೆಯುತ್ತಿದ್ದಾರೆ. ಶ್ರೀಗಳು ಎಲ್ಲೂರು, ಪಾದಬೆಟ್ಟು, ಕುಂಜೂರು, ಉಚ್ಚಿಲ, ಮುಂಡ್ಕೂರು ಮುಂತಾದ ದೇವಾಲಯಗಳಿಗೆ ಭೇಟಿ ನೀಡಿದ್ದಾರೆ.
ಉಡುಪಿಯಲ್ಲಿಂದು ಮೂರುತೇರು: ವಿದ್ಯುತ್ ದೀಪಾಲಂಕಾರಗಳಿಂದ ಕಂಗೊಳಿಸುತ್ತಿರುವ ರಥಬೀದಿ ಆವರಣದಲ್ಲಿ ಇಂದು ರಾತ್ರಿ ಮೂರು ರಥವನ್ನು ಎಳೆಯಲಾಗುತ್ತದೆ. ಭಾನುವಾರ (ಜ15) ಬೆಳಗ್ಗೆ ಚೂರ್ಣೋತ್ಸವದ ಅಂಗವಾಗಿ ಬ್ರಹ್ಮ ರಥೋತ್ಸವ ನಡೆಯಲಿದ್ದು ಆನಂತರ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ.












Click it and Unblock the Notifications